ಶಿರ್ವ ಸಂತಮೇರಿ ಕಾಲೇಜಿನಲ್ಲಿ ಸೈಂಟ್ ಮೇರಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ

ಶಿರ್ವ ಸಂತಮೇರಿ ಕಾಲೇಜಿನಲ್ಲಿ ಸೈಂಟ್ ಮೇರಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ

0Shares

ಶಿರ್ವ: ಸಂತಮೇರಿ ಕಾಲೇಜು ಶಿರ್ವ, ಇಲ್ಲಿನ ದೈಹಿಕ ಶಿಕ್ಷಣ ವಿಭಾಗ ಹಾಗೂ ಐ.ಕ್ಯೂ.ಎ.ಸಿ. ಇವರ ಸಹಯೋಗದೊಂದಿಗೆ ಕಾಲೇಜಿನ ಕ್ರೀಡಾಂಗಣದಲ್ಲಿ ಸೈಂಟ್ ಮೇರಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟಗಳ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಯಿತು.
ಮುಖ್ಯ ಅಥಿತಿಯಾಗಿ ನಮ್ಮ ಸಂಸ್ಥೆಯ ಹಳೆ ವಿದ್ಯಾರ್ಥಿ ಹಾಗೂ ಸೈಂಟ್ ಮೇರಿಸ್ ಸಿರಿಯನ್ ಕಾಲೇಜು, ಬ್ರಹ್ಮಾವರ ಇಲ್ಲಿನ ಸಹಾಯಕ ಪ್ರಾಧ್ಯಾಪಕರಾಗಿರುವ ಲೆಫ್ಟಿನೆಂಟ್ ಶ್ರೀ ಅಶ್ವಿನ್ ಶೆಟ್ಟಿ ಇವರು ಪಂದ್ಯಾಟವನ್ನು ದೀಪ ಬೆಳಗಿಸಿ ಶುಭಾರಂಭಗೊಳಿಸಿ ಸ್ಪರ್ಧಿಗಳನ್ನು ಉದ್ದೇಶಿಸಿ ಮಾತನಾಡಿ, ಒಬ್ಬ ಅತ್ಯುತ್ತಮ ಆಟಗಾರ ಕೇವಲ ತನ್ನ ಪ್ರತಿಭೆಯಿಂದ ಬೆಳೆಯಲು ಸಾಧ್ಯವಿಲ್ಲ. ಅದಕ್ಕೆ ವಿಶೇಷವಾಗಿ ಕಠಿಣ ಪರಿಶ್ರಮದ ಅಗತ್ಯವಿದೆ. ಅದು ನಮ್ಮನ್ನು ಗೆಲುವಿನ ಕಡೆಗೆ ಕೊಂಡೊಯ್ಯುತ್ತದೆ. ಪ್ರತಿಭೆ ಇರುವ ಆಟಗಾರರಿಗೆ ಬೆಳೆಯಲು ಉತ್ತೇಜಿಸಿ, ನಿಮ್ಮ ಉತ್ತೇಜನದಿಂದ ಅವರು ಮುಂದೆ ಮಹತ್ತಾದ ಸಾಧನೆಯನ್ನು ಮಾಡಬಹುದು ಎಂದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜು ಪ್ರಾಂಶುಪಾಲರಾದ ಡಾ ಹೆರಾಲ್ಡ್ ಐವನ್ ಮೊನಿಸ್ ಇವರು ಸ್ಪರ್ಧಿಗಳಿಗೆ ಸ್ಪರ್ಧೆಯು ಆರೋಗ್ಯದಾಯಕವಾಗಿರಲಿ, ಬಿರುಬಿಸಿಲಿನಲ್ಲಿಯೂ ಆಡುವ ಇಷ್ಟೊಂದು ಅದಮ್ಯ ಉತ್ಸಾಹವನ್ನು ಪಂದ್ಯಾಟದ ಕೊನೆಯವರೆಗೆ ಉಳಿಸಿಕೊಳ್ಳಿ ಎಂದರು.
ತೃತೀಯ ಬಿ.ಕಾಂ.ನ ಸಿಡ್ವಿನ್ ಇವರು ಅತಿಥಿ ಪರಿಚಯ ಮಾಡಿದರು. ಕ್ರೀಡಾ ಸೆಕ್ರೆಟರಿಯಾಗಿರುವ ಅಧಿತಿ ತೃತೀಯ ಬಿ.ಕಾಂ. ಸ್ವಾಗತಿಸಿದರು. ದೈಹಿಕ ಶಿಕ್ಷಣ ನಿರ್ದೇಶಕಿ ಶ್ರೀಮತಿ ಸಂಧ್ಯಾ ಕೆ. ವಂದಿಸಿದರು. ತೃತೀಯ ಬಿ.ಕಾಂ. ಸಬಿಲಾ ಬಾನು ಕಾರ್ಯಕ್ರಮವನ್ನು ನಿರ್ವಹಿಸಿದರು. ಪುರುಷರ ಕ್ರೀಡಾ ಸೆಕ್ರೆಟರಿ ನಿಧೀಶ್ ತೃತೀಯ ಬಿ.ಕಾಂ. ಇವರು ಸಹಕರಿಸಿದರು. ವೀಕ್ಷಕ ವಿವರಣೆಯನ್ನು ಶಿವು, ಪ್ರತೀಕ್ ಮತ್ತು ತೀರ್ಪುಗಾರರಾಗಿ ಧೀರಜ್ ಮತ್ತು ಚಿರಾಗ್ ಇವರು ನಿರ್ವಹಿಸಿದರು.

ನಮ್ಮ ವರದಿಗಾರರು

ವಿಲ್ಸನ್ ಡಿಸೋಜ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now