
ಮಾದಕ ದ್ರವ್ಯ ಸಾಗಾಟ ಮತ್ತು ಮಾರಾಟ ಪ್ರಕರಣಗಳಲ್ಲಿ ನಿರಂತರವಾಗಿ ಭಾಗಿಯಾಗಿ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡಹುತ್ತಿದ್ದ ಆರೋಪಿ ಕಾರ್ಕಳ ನಗರ ಠಾಣಾ ಸರಹದ್ದಿನ ಮಹಮ್ಮದ್ ಫೈಜಲ್, ಪ್ರಾಯ 22 ವರ್ಷ, ತಂದೆ: ದಿ. ಸುಲೇಮಾನ್, ವಾಸ: ಸಾದತ್ ಕಾಟೇಜ್, ಬಂಗ್ಲೆಗುಡ್ಡೆ, ಕಸಬ ಗ್ರಾಮ, ಕುಕ್ಕುಂದೂರು ಪೊಸ್ಟ್, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಎಂಬಾತನ ವಿರುದ್ಧ ಪಿ.ಐ.ಟಿ. ಎನ್.ಡಿ.ಪಿ.ಎಸ್. ಕಾಯ್ದೆಯಡಿ ಬಂಧನ ಕ್ರಮ ಜರುಗಿಸಲು, ಪೊಲೀಸ್ ನಿರೀಕ್ಷಕರು, ಕಾರ್ಕಳ ನಗರ ಠಾಣೆರವರ ಮುಖಾಂತರ ಬಂದ ವರದಿಯನ್ನು ಪೊಲೀಸ್ ಅಧೀಕ್ಷಕರು, ಉಡುಪಿ ಜಿಲ್ಲೆರವರು, ಬಂಧನ ಆದೇಶಕ್ಕಾಗಿ ಮಾನ್ಯ ಪೊಲೀಸ್ ಮಹಾನಿರೀಕ್ಷಕರು, ಪಶ್ಚಿಮ ವಲಯ, ಮಂಗಳೂರುರವರಿಗೆ ಸಲ್ಲಿಸಿದ್ದು, ಮಾನ್ಯರು ಆತನ ವಿರುದ್ಧ ದಾಖಲಾದ ಪ್ರಕರಣಗಳನ್ನು ಪರಿಶೀಲಿಸಿ, ದಿನಾಂಕ 07/04/2026ರಂದು ಬಂಧನ ಆದೇಶ ಹೊರಡಿಸಿರುತ್ತಾರೆ. ಪೊಲೀಸ್ ನಿರೀಕ್ಷಕರು, ಕಾರ್ಕಳ ನಗರ ಠಾಣೆರವರು ದಿನಾಂಕ 07/04/2026ರಂದು ಆರೋಪಿಗೆ ಬಂಧನ ಆದೇಶ ಜಾರಿಗೊಳಿಸಿ, ಬಂಧಿತನನ್ನು ಕೇಂದ್ರ ಕಾರಾಗೃಹ, ಧಾರವಾಡ ಇಲ್ಲಿಗೆ ಒಪ್ಪಿಸಲಾಗುವುದು.
ಬಂಧಿತ ಆಸಾಮಿಯ ವಿರುದ್ಧ ಒಟ್ಟು 05 ಮಾದಕ ದ್ರವ್ಯ ಸಾಗಾಟ ಮತ್ತು ಮಾರಾಟ ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ 02 ಪ್ರಕರಣಗಳಲ್ಲಿ ಸಜೆಯಾಗಿದ್ದು, 02 ಪ್ರಕರಣಗಳು ಮಾನ್ಯ ನ್ಯಾಯಾಲಯದ ವಿಚಾರಣೆಯಲ್ಲಿದ್ದು, 01 ಪರಕರಣ ತನಿಖೆಯಲ್ಲಿರುತ್ತದೆ.
ನಮ್ಮ ವರದಿಗಾರರು
ವಿಲ್ಸನ್ ಡಿಸೋಜ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now