ವೇಗಕ್ಕಿಂತ ಹೆಚ್ಚು ವೇಗದಲ್ಲಿ ಸಂಚರಿಸಿದ ವಾಹನಗಳನ್ನು ಸ್ಪೀಡ್ ರಾಡ‌ರ್ ಗನ್ (ವೇಗ ಪರಿಶೀಲನೆ ಯಂತ್ರ) ಮೂಲಕ ಪತ್ತೆ ಮಾಡಿ ವಾಹನ ತಡೆದು ದಂಡ

ವೇಗಕ್ಕಿಂತ ಹೆಚ್ಚು ವೇಗದಲ್ಲಿ ಸಂಚರಿಸಿದ ವಾಹನಗಳನ್ನು ಸ್ಪೀಡ್ ರಾಡ‌ರ್ ಗನ್ (ವೇಗ ಪರಿಶೀಲನೆ ಯಂತ್ರ) ಮೂಲಕ ಪತ್ತೆ ಮಾಡಿ ವಾಹನ ತಡೆದು ದಂಡ

0Shares

ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಗದಿಪಡಿಸಿದ ವೇಗಕ್ಕಿಂತ ಜಾಸ್ತಿಯಾದ ವೇಗದಲ್ಲಿ ಸಂಚರಿಸುತ್ತಿದ್ದ ಹಲವು ವಾಹನಗಳಿಗೆ ಕುಂದಾಪುರ ಸಂಚಾರ ಠಾಣೆ ಪೊಲೀಸರು ಶನಿವಾರ ಸಂಜೆ ಮೋಟಾರು ನಿಯಮ ಕಾಯ್ದೆಯಡಿ ದಂಡ ವಿಧಿಸಿ, ಕಾನೂನು ಪಾಲನೆ ಅರಿವು ಮೂಡಿಸಿದರು.ನಗರದ ಹೊರವಲಯದ ಕೆ.ಎಸ್.ಆ‌ರ್.ಟಿ.ಸಿ. ಬಸ್ ನಿಲ್ದಾಣದ ಎದುರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಜೆ ಕಾರ್ಯಾಚರಣೆಗಿಳಿದು, ಈ ಪ್ರದೇಶದಲ್ಲಿ ನಿಗದಿಪಡಿಸಿದ (80ಕಿ.ಮೀ) ವೇಗಕ್ಕಿಂತ ಹೆಚ್ಚು ವೇಗದಲ್ಲಿ ಸಂಚರಿಸಿದ ವಾಹನಗಳನ್ನು ಸ್ಪೀಡ್ ರಾಡ‌ರ್ ಗನ್ (ವೇಗ ಪರಿಶೀಲನೆ ಯಂತ್ರ) ಮೂಲಕ ಪತ್ತೆ ಮಾಡಿ ವಾಹನ ತಡೆದು ಸಂಬಂಧ ಪಟ್ಟವರಿಗೆ ವೇಗ ಮಿತಿಯ ಬಗ್ಗೆ ಮಾಹಿತಿ ನೀಡಿದರು ಹಾಗೂ ಅತೀ ವೇಗದಲ್ಲಿ ಸಂಚರಿಸಿದವರಿಗೆ ದಂಡ ವಿಧಿಸಿದರು.

ನಮ್ಮ ವರದಿಗಾರರು

ವಿಲ್ಸನ್ ಡಿಸೋಜ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now