ಶ್ರೀಮತಿ ಯಶೋದಾ ಕೇಶವ್ ಇವರ ಮಡಿಲಿಗೆ ವೀರ ರಾಣಿ ಅಬ್ಬಕ್ಕ ಪ್ರಶಸ್ತಿಯ ಗರಿ

ಶ್ರೀಮತಿ ಯಶೋದಾ ಕೇಶವ್ ಇವರ ಮಡಿಲಿಗೆ ವೀರ ರಾಣಿ ಅಬ್ಬಕ್ಕ ಪ್ರಶಸ್ತಿಯ ಗರಿ

0Shares

ತುಳುನಾಡ ಧ್ವನಿ ಅಂತರ್ಜಾಲ ಪತ್ರಿಕೆಯ ಮುಖ್ಯಸ್ಥೆಯಾದ ಶ್ರೀಮತಿ ಯಶೋದಾ ಕೇಶವ್ ಇವರು ಪ್ರತಿಷ್ಠಿತ ವೀರ ರಾಣಿ ಅಬ್ಬಕ್ಕ ಗೌರವ ಪುರಸ್ಕಾರಕ್ಕೆ ಆಯ್ಕೆ ಆಗಿದ್ದಾರೆ.

ABRSM-KRMSS, ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ (ಮಂಗಳೂರು ವಿಭಾಗ) ಆಯೋಜಿಸಿರುವ “ಅಬ್ಬಕ್ಕ 500 ಪ್ರೇರಣಾದಾಯಿ 100 ಉಪನ್ಯಾಸಗಳ ಸರಣಿ” ಕಾರ್ಯಕ್ರಮದ ಅಂಗವಾಗಿ ಈ ಗೌರವ ಪುರಸ್ಕಾರವನ್ನು ನೀಡಲಾಗುತ್ತಿದೆ. ಸಮಾಜಮುಖಿ ಕಾರ್ಯಗಳು ಹಾಗೂ ಪರಿಸರ ಸಂರಕ್ಷಣಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮಹಿಳೆಯರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಶ್ರೀಮತಿ ಯಶೋದಾ ಕೇಶವ್ ಇವರಿಗೆ ತುಳು ಸಾಹಿತ್ಯ ಸಂಘಟನೆಯಲ್ಲಿ ತೊಡಗಿಸಿಕೊಂಡು ಅನನ್ಯ ಸೇವೆ, ಸಾಧನೆಗಾಗಿ ಈ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ.

ಇದೇ ಬರುವ ಫೆಬ್ರವರಿ 16 ತಾರೀಕಿನಂದು ಪುತ್ತೂರು ನೆಹರು ನಗರದ ವಿವೇಕಾನಂದ ಕಾಲೇಜು ಆವರಣದಲ್ಲಿ ನಡೆಯಲಿರುವ ರಾಣಿ ಅಬ್ಬಕ್ಕ 500 ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮದ 100 ನೇ ಸಂಭ್ರಮ ಕಾರ್ಯಕ್ರಮದ ಪ್ರಯುಕ್ತ ನಡೆಯಲಿರುವ ಸಾಧಕ ಮಹಿಳೆಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಈ ಗೌರವ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ..

ಉಡುಪಿ ಜಿಲ್ಲೆಯ ಬಹುಮುಖ ಪ್ರತಿಭೆ

ಯಶೋದಾ ಕೇಶವ್ ಇವರು ತುಳುನಾಡ ಧ್ವನಿ ಅಂತರ್ಜಾಲ ಪತ್ರಿಕೆ ಹಾಗೂ ಯುಟ್ಯೂಬ್ ಚಾನೆಲ್ ಮೂಲಕ ತುಳು ಭಾಷೆ ಸಂಸ್ಕೃತಿಯ ಬೆಳವಣಿಗೆಗೆ ಶ್ರಮೀಸುತ್ತಿರುವ ಧೀರ ಮಹಿಳೆ.ತುಳು ಭಾಷೆಗೆ ಯಾವುದೇ ರೀತಿಯ ಧ್ವನಿ ಎತ್ತಲು ಹಿಂಜರಿಯದೇ ನೇರವಾಗಿ ಪ್ರಶ್ನಿಸುವ ಸ್ವಭಾವ ಇವರದಾಗಿದೆ.ಯಾವುದೇ ದೊಡ್ಡ ವೇದಿಕೆ ಇರಲಿ ಇವರು ಮೊದಲು ಪ್ರಾಶಸ್ತ್ಯ ಕೊಡುವುದು ತುಳು ಭಾಷೆಗೆ.ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು, ಸಮಾಜಸೇವೆಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ.. ಸಿರಿ ತುಳುವ ಚಾವಡಿ, ತುಳುಕೂಟ ಉಡುಪಿ, ಟೈಮ್ಸ್ ಆಫ್ ಕುಡ್ಲ ತುಳು ಪತ್ರಿಕೆ,ತುಳು ವರ್ಲ್ಡ್ ಫೌಂಡೇಶನ್, ರೋಟರಿ,ಬಿಎನ್ ಐ, ಸಂಸ್ಥೆ, ಸರ್ವದಾ ಯುವ ಸಂಘ, ಮೊಗವೀರ ಯುವ ಸಂಘಟನೆ, ಗಣೇಶೋತ್ಸವ ಸಮಿತಿ, ಹಾಗೆಯೇ ಹಲವಾರು ಧಾರ್ಮಿಕ ಸಾಮಾಜಿಕ ಕ್ಷೇತ್ರಗಳಲ್ಲಿ ತನ್ನದೇ ಆದ ಸೇವೆಯನ್ನು ಸಲ್ಲಿಸುತ್ತಿದ್ದಾರೆ..ಇವರು ಹಲವಾರು ತುಳು ನಾಟಕಗಳಲ್ಲಿ ಅಭಿನಯಿಸಿ ಜನಮನ ಗೆದ್ದಿದ್ದಾರೆ..ಇವರು ತುಳು ಭಾಷೆಯ ಉತ್ತಮ ನಿರೂಪಕಿ ಕೂಡಾ..ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡು ಉಡುಪಿ ಭಾಗದಲ್ಲಿ ಮಹಿಳೆಯರಿಗೆ ಮಾದರಿಯಾಗಿದ್ದಾರೆ..ಇವರ ಕಾರ್ಯವೈಖರಿಗೆ ವೀರ ರಾಣಿ ಅಬ್ಬಕ್ಕ ಪ್ರಶಸ್ತಿಯ ಗೌರವ ಇನ್ನಷ್ಟು ಉತ್ತುಂಗಕ್ಕೆ ಏರಲು ಅನುವು ಮಾಡಿಕೊಟ್ಟಿದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now