ಉಡುಪಿಯಲ್ಲಿ 53 ಸಮುದಾಯ ಮುಖಂಡರೊಂದಿಗೆ ಸಭೆ: DCRE ಠಾಣೆ ಬಲವರ್ಧನೆಗೆ ಸರ್ಕಾರದ ಗಮನಕ್ಕೆ

ಉಡುಪಿಯಲ್ಲಿ 53 ಸಮುದಾಯ ಮುಖಂಡರೊಂದಿಗೆ ಸಭೆ: DCRE ಠಾಣೆ ಬಲವರ್ಧನೆಗೆ ಸರ್ಕಾರದ ಗಮನಕ್ಕೆ
0Shares

ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದು ಕೊರತೆ ಸಭೆಯನ್ನು ಪೊಲೀಸ್‌ ಅಧೀಕ್ಷಕರ ಅಧ್ಯಕ್ಷತೆಯಲ್ಲಿ ಈ ದಿನ ದಿನಾಂಕ 18/07/206ರಂದು ಪೊಲೀಸ್‌ ಅಧೀಕ್ಷಕರ ಕಚೇರಿಯಲ್ಲಿ ನಡೆಯಿತು. ಈ ಸಭೆಯಲ್ಲಿ ಹೆಚ್ಚುವರಿ ಪೊಲೀಸ್‌ ಅಧೀಕ್ಷಕರು ಹಾಗೂ ಹಿರಿಯ ಪೊಲೀಸ್‌ ಅಧಿಕಾರಿಗಳು ಭಾಗವಹಿಸಿದ್ದರು. ಜಿಲ್ಲೆಯ 53 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮುಖಂಡರು ಹಾಗೂ ಸಮುದಾಯದವರು ಈ ಸಭೆಯಲ್ಲಿ ಭಾಗವಹಿಸಿರುತ್ತಾರೆ. ಸಭೆಯಲ್ಲಿ ಈ ಕೆಳಗಿನ ಪ್ರಮುಖ ವಿಷಯಗಳು ಹಾಗೂ ಇತರೇ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
• ಎಸ್‌.ಸಿ/ ಎಸ್.ಟಿ.ಯವರಿಗೆ ಪ್ರಕರಣ ದಾಖಲಿಸಿದಾಗ ನ್ಯಾಯಯುತವಾಗಿ ದೊರೆಯಬೇಕಾದ ಪರಿಹಾರ ದೊರೆಯುತ್ತಿಲ್ಲ ಎನ್ನುವ ಬಗ್ಗೆ ಅಹವಾಲನ್ನು ತಿಳಿಸಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಮಾಜ ಕಲ್ಯಾಣ ಇಲಾಖೆಯವರಿಗೆ ಸೂಚಿಸಲಾಗಿರುತ್ತದೆ.

• ಉಡುಪಿ ಜಿಲ್ಲೆಯಲ್ಲಿ ಸಮುದಾಯದವರ ಸಮಸ್ಯೆಗೆ ಸಂಬಂಧಿಸಿದಂತೆ ಪೊಲೀಸ್‌ ಇಲಾಖೆಯವರು ಉತ್ತಮವಾಗಿ ಸ್ಪಂದಿಸುತ್ತಿದ್ದು, ಇದೇ ರೀತಿಯಲ್ಲಿ ಇತರೇ ಇಲಾಖೆಯವರು ಸ್ಫಂದಿಸುವಂತೆ ಮನವಿ ಮಾಡಿರುತ್ತಾರೆ.

• ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ನಡೆಯಲಿರುವ ವಿಜಿಲೆನ್ಸ್‌ ಕಮಿಟಿಯ ಸದಸ್ಯರನ್ನು ಬದಲಾಯಿಸುವ ಬಗ್ಗೆ ಮನವಿ ಸಲ್ಲಿಸಿರುತ್ತಾರೆ.

• ಶಂಕರನಾರಾಯಣ ಪೊಲೀಸ್‌ ಠಾಣಾ ಸರಹದ್ದಿನಲ್ಲಿ ದಲಿತರ ಏಳಿಗೆ ಬಗ್ಗೆ ಸರಕಾರದಿಂದ ನೀಡಲಾದ ಹಣ ದುರ್ಬಳಕೆ ಆಗಿರುತ್ತದೆ ಎನ್ನುವ ಬಗ್ಗೆ ತಿಳಿಸಿದ್ದು. ಈ ಬಗ್ಗೆ ಸೂಕ್ತ ತನಿಖೆ ನಡೆಸುವ ಕುರಿತು ಸಮಾಜ ಕಲ್ಯಾಣ ಇಲಾಖೆಯವರಿಗೆ ಸೂಚಿಸಲಾಗಿರುತ್ತದೆ.

• ತಮಿಳುನಾಡು ಮೂಲದವರು ಉಡುಪಿಯಲ್ಲಿ ಸುಳ್ಳು ಜಾತಿ ಸರ್ಟಿಫಿಕೇಟ್‌ ಪಡೆದಿದ್ದು, ಈ ಬಗ್ಗೆ ನಾವು ನೀಡಿದ ದೂರಿನಂತೆ DCRE ಪೊಲೀಸ್‌ ಠಾಣೆಯಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು.

• ದಲಿತರಿಗೆ ಸಹಾಯವಾಗಲು ಪ್ರತಿಯೊಂದು ಜಿಲ್ಲೆಯಲ್ಲಿಯೂ DCRE ಠಾಣೆ ಸ್ಥಾಪನೆಯಾಗಿದ್ದು, ಆದರೆ ಅಗತ್ಯ ಅಧಿಕಾರಿ ಹಾಗೂ ಸಿಬ್ಬಂದಿಗಳ ನೇಮಕ ಆಗಿರುವುದಿಲ್ಲ. ಇದರಿಂದ ದಲಿತರಿಗೆ ನ್ಯಾಯ ದೊರೆಯಲು ವಿಳಂಬವಾಗುತ್ತಿದೆ ಎನ್ನುವ ಬಗ್ಗೆ ಸರಕಾರದ ಗಮನ ಸೆಳೆಯುವಂತೆ ಕೋರಿಕೊಂಡಿರುತ್ತಾರೆ.

• SC/ST ಪ್ರಕರಣದಲ್ಲಿ ಆರೋಪಿತರು ನ್ಯಾಯಾಲಯದ ತಡೆ ಆಜ್ಞೆ ತರುತ್ತಿದ್ದು, ಅದನ್ನು ತೆರವುಗೊಳಿಸುವ ಬಗ್ಗೆ ಡಿಸಿಆರ್‌ಇ ಠಾಣೆಯವರು ಸರಿಯಾಗಿ ಕ್ರಮ ಕೈಗೊಳ್ಳದೇ ಇರುವ ಬಗ್ಗೆ ತಿಳಿಸಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಡಿಸಿಆರ್‌ ಇ ಠಾಣೆಯವರು ಸೂಕ್ತ ಕ್ರಮ ವಹಿಸುವಂತೆ ಸೂಚನೆ ನೀಡಲಾಯಿತು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now