ನಕಲಿ ಸಹಿಯೊಂದಿಗೆ 6 ಚೆಕ್‌ಗಳನ್ನು ನಗದೀಕರಿಸಲು ಯತ್ನ: ಪೆರ್ವಾಜೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಂಚನೆ

ನಕಲಿ ಸಹಿಯೊಂದಿಗೆ 6 ಚೆಕ್‌ಗಳನ್ನು ನಗದೀಕರಿಸಲು ಯತ್ನ: ಪೆರ್ವಾಜೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಂಚನೆ
0Shares

ಕರ್ನಾಟಕ ಸರಕಾರದ ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದಿನಾಂಕ 01-12-2022 ರಿಂದ 07-05-2026ರ ತನಕ ಆರೋಪಿ ಅಕ್ಷಯ ದೇವಾಡಿಗ ಇವರು ಡಾಟಾ ಎಂಟ್ರಿ ಆಪರೇಟರ್‌ ಆಗಿ ಕಾರ್ಯ ನಿರ್ವಹಿಸಿಕೊಂಡಿದ್ದು, ಇಲಾಖಾ ಲೆಕ್ಕ ಪರಿಶೋಧನೆಯ ಸಂಧರ್ಭದಲ್ಲಿ ಆರೋಪಿಯು ಕರ್ತವ್ಯದಲ್ಲಿ ಲೋಪ ಮತ್ತು ಅಕ್ರಮ ಮಾಡಿರುವುದು ಕಂಡು ಬಂದ ಮೇರೆಗೆ ಆರೋಪಿಯಲ್ಲಿ ಈ ಬಗ್ಗೆ ವಿವರಣೆಯನ್ನು ಕೇಳಿದಾಗ, ವಿವರಣೆ ನೀಡದೆ ಯಾವುದೇ ಮಾಹಿತಿಯನ್ನು ನೀಡದೆ ದಿನಾಂಕ 7-5-2026 ರಂದು ರಾಜಿನಾಮೆ ಪತ್ರ ನೀಡಿ ಕರ್ತವ್ಯಕ್ಕೆ ಹಾಜಾರಾಗಿರುವುದಿಲ್ಲ. ಧಾರ್ಮಿಕ ಸಂಸ್ಥೆಯು ಹೊಂದಿರುವ ಇಂಡಿಯನ್‌ ಓವರ್‌ ಸೀಸ್‌ ಬ್ಯಾಂಕ್‌ ಗೆ ಆರೋಪಿಯು ದೇವಸ್ಥಾನಕ್ಕೆ ಸಂಬಂದಿಸಿದ ಸಂಸ್ಥೆಯ ಬ್ಯಾಂಕ್‌ ನಲ್ಲಿ ಹೊಂದಿರುವ ಕರೆಂಟ್‌ ಎಕೌಂಟ್‌ ಗಳ ಒಟ್ಟು 6 ಚೆಕ್ ಲೀಫ್ ಗಳನ್ನು ದಿನಾಂಕ 24-6-2026 ರಂದು ಬ್ಯಾಂಕ್‌ ಗೆ ನಗದೀಕರಣಕ್ಕಾಗಿ ಹಾಜಾರುಪಡಿಸಿದಾಗ ಬ್ಯಾಂಕ್‌ ಮೇನೆಜರ್‌ ಮತ್ತು ಸಿಬ್ಬಂದಿಯವರಿಗೆ ಅನುಮಾನ ಬಂದಾಗ ವಿಚಾರಿಸಿದಾಗ ಸರಿಯಾದ ವಿವರಣೆ ನೀಡದೆ ಇದ್ದರಿಂದ ನಗದೀಕರಣ ಮಾಡಿರುವುದಿಲ್ಲ. ಆರೋಪಿಯು ಖಾಲಿ ಚೆಕ್‌ ಲೀಪ್ಗಳನ್ನು ನಗದೀಕರಣ ಮಾಡಿಸುವರೇ ದೇವಸ್ಥಾನದ ಸಮಿತಿಯ ಅಧ್ಯಕ್ಷರ ಗಮನಕ್ಕೆ ತಾರದೆ ಸಹಿಯನ್ನು ನಕಲಿಯಾಗಿ ಮಾಡಿ ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 88/2026 ಕಲಂ:316(2), 318 (4) 340 (2) BNS 2023 ರಂತೆ ಪ್ರಕರಣದ ಹಾಕಲಾಗಿರುತ್ತದೆ.

ಪ್ರಕರಣದ ಆರೋಪಿತ ಅಕ್ಷಯ ದೇವಾಡಿಗ (29) ಎಣ್ಣೆಹೊಳೆ ಮರ್ಣೆ ಗ್ರಾಮ ಈತನನ್ನು ಮಾಡಿದ್ದು, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now