ಉಡುಪಿ ಕಲಾಕ್ಷೇತ್ರ: ಯಕ್ಷಗಾನ ತರಗತಿ ಉದ್ಘಾಟನೆ

ಉಡುಪಿ ಕಲಾಕ್ಷೇತ್ರ: ಯಕ್ಷಗಾನ ತರಗತಿ ಉದ್ಘಾಟನೆ
0Shares

ಗುಂಡಿಬೈಲು ಯಕ್ಷಗಾನ ಕಲಾಕ್ಷೇತ್ರದಲ್ಲಿ ಈ ವರ್ಷ ದ ಉಚಿತ ಯಕ್ಷಗಾನ ತರಗತಿಯ ಉದ್ಘಾಟನೆ ಜರಗಿತು, ದೀಪ ಬೆಳಗಿಸಿ ಚಾಲನೆ ನೀಡಿದ ಅಧ್ಯಕ್ಷ ಕೇಶವಮೂರ್ತಿ ಬೆಲ್ಪತ್ರೆ ಯವರು ಎಪ್ಪತ್ತೈದು ವರ್ಷಗಳ ಹಿಂದೆ ಸಂಘ ಸ್ಥಾಪನೆಗೆ ಕಾರಣೀಕರ್ತ ರಾದ ಮಹನೀಯರು ಮತ್ತು ಸುಧೀರ್ಘ ಕಾಲ ಸಂಸ್ಥೆ ಯನ್ನು ಮುನ್ನಡೆಸಿದ ಎಲ್ಲರನ್ನೂ ಅಮೃತ ಮಹೋತ್ಸವದ ಈ ಕಾಲಘಟ್ಟದಲ್ಲಿ ಸ್ಮರಿಸುವ ಮೂಲಕ ಮುಂದಡಿ ಇಡುತ್ತಿದ್ದೇವೆ, ನೂರಾರು ಹವ್ಯಾಸಿ ಕಲಾವಿದರನ್ನು ರೂಪಿಸಿದ ಸಂಘವು ಪ್ರತಿ ವರ್ಷ ಸುಮಾರು ಐವತ್ತು ಮಕ್ಕಳಿಗೆ ಯಕ್ಷ ಶಿಕ್ಷಣ ನೀಡುವುದರ ಮೂಲಕ ಸಂಪ್ರದಾಯ ಬದ್ಧ ಯಕ್ಷಗಾನ ವನ್ನು ಮುಂದಿನ ತಲೆಮಾರಿಗೆ ತಲುಪಿಸುವ ಕಾರ್ಯ ಮಾಡುತ್ತಾ ಬಂದಿದೆ ಎಂದು ಹೇಳಿದರು,

ಉಪಾಧ್ಯಕ್ಷ ನಿಟ್ಟೂರು ಮಹಾಬಲ ಶೆಟ್ಟಿ ಯವರು ಶಿಕ್ಷಾರ್ಥಿ ಗಳಿಗೆ ಹಾಗೂ ಪೋಷಕರಿಗೆ ಶುಭಹಾರೈಸಿದರು, ಕೋಶಾಧಿಕಾರಿ ನರಸಿಂಹ ಎನ್ ಆರ್, ಕಲಾಕಾರ್ಯದರ್ಶಿ ಶ್ರೀಧರ್ ಭಟ್, ಗುರುಗಳಾದ ಉದಯ ಕುಮಾರ್ ಮಧ್ಯಸ್ಥ, ಚರಿತ್ ಕುಮಾರ್,ಕಾರ್ಯಕಾರಿ ಸದಸ್ಯ ರಮೇಶ್ ಕೋಟ್ಯಾನ್, ಸಂಘದ ಸದಸ್ಯರು, ವಿದ್ಯಾರ್ಥಿ ಗಳು ಮತ್ತು ಪೋಷಕರು ಉಪಸ್ತಿತರಿದ್ದರು, ಕಾರ್ಯದರ್ಶಿ ಗಣೇಶ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು, 18 ವರ್ಷ ದೊಳಗಿನ ಆಸಕ್ತ ಮಕ್ಕಳು ಸಂಘದ ಕಚೇರಿ ಯಲ್ಲಿ ಹೆಸರು ನೋಂದಾಯಿಸಬಹುದು ಎಂದು ಸಂಘದ ಪ್ರಕಟಣೆ ತಿಳಿಸಿದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now