ಅಸಹಾಯಕರ ನೆರವಿಗೆ ಮುಂದಾದ ನಮ್ಮ ಕರ್ನಾಟಕ ಸೇನೆ ಉಡುಪಿ ಜಿಲ್ಲೆ

ಅಸಹಾಯಕರ ನೆರವಿಗೆ ಮುಂದಾದ ನಮ್ಮ ಕರ್ನಾಟಕ ಸೇನೆ ಉಡುಪಿ ಜಿಲ್ಲೆ
0Shares

ದಿನಾಂಕ –05/07/2026 ರಂದು ಅಸಹಾಯಕರ ನೆರವಿಗೆ ಮುಂದಾದ ನಮ್ಮ ಕರ್ನಾಟಕ ಸೇನೆಯ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿಯವರು ಇಂದು ಉಡುಪಿಯ ಹಳೆ ಪೋಸ್ಟ್ ಆಫೀಸ್ ರಸ್ತೆ ಕೆಲಪೇಟೆಯಲ್ಲಿ. ರಮಾ ಮರಕಾಲತಿ ಮತ್ತು ಅವರ ಮಗಳು ಇಬ್ಬರೂ ಕೂಡ ತೀವ್ರವಾಗಿ ಆರೋಗ್ಯ ಕೆಟ್ಟಿರುವುದಲ್ಲದೆ ಮನೆಯಿಂದ ಹೊರಬರಲು ಸಾಧ್ಯವಿಲ್ಲದ ಇವರಿಗೆ ಯಾರು ? ಮನೆಯಲ್ಲಿ ಗಂಡಸರ ಸಹಕಾರ ಇಲ್ಲ ಇಬ್ಬರು ಮಹಿಳೆಯರು ಮಾತ್ರ ಇದ್ದಾರೆ ಪರಿಸ್ಥಿತಿಯಲ್ಲಿ ಮಲಗಿದ್ದು ಅವರಿಗೆ ತುರ್ತು ಸಂದರ್ಭದಲ್ಲಿ ಕೂಡ ಆಸ್ಪತ್ರೆ ಹೋಗಲು ಸರಿಯಾದ ಮಾರ್ಗವು ಕೂಡ ಇಲ್ಲ ಇದನ್ನು ಪರಿಶೀಲಿಸಿದ ನಮ್ಮ ಕರ್ನಾಟಕ ಸೇನೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಒಂದು ಪಕ್ಷ ನಗರಸಭೆಯವರು ಸಿಮೆಂಟ್ ಅನ್ನು ಹಾಕಿ ದುರಸ್ತಿ ಮಾಡಿದಲ್ಲಿ ವೀಲ್ ಚೇರ್ ಮೂಲಕ ಆಸ್ಪತ್ರೆ ಹೋಗಲು ಅನುಕೂಲವಾಗಬಹುದು ಹಾಗೆಯೇ ಅವರಿಗೆ ಸಂಧ್ಯಾ ಸುರಕ್ಷೆ ಯೋಜನೆಯನ್ನು ಮಾಡುವುದರ ಬಗ್ಗೆ ಬ್ಲಾಕ್ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ನನ್ನ ಸಂಪೂರ್ಣ ಸಹಕಾರ ಇದೆ ಅದಕ್ಕಾಗಿ ವಿಲೇಜ್ ಅಕೌಂಟೆಂಟ್ ಹತ್ತಿರ ನೇರವಾಗಿ ಮಾತಾಡಿ ಸಹಕರಿಸುವಂತೆ ವಿನಂತಿಸಿಕೊಂಡಿದ್ದಾರೆ.

ಈಗಾಗಲೇ ಅವರಿಗೆ ಬರುವ ಗೃಹಲಕ್ಷ್ಮಿ ಮತ್ತು ಭಾಗ್ಯಜ್ಯೋತಿಯು ನಮಗೆ ತುಂಬಾ ಅನುಕೂಲವಾಗಿದೆ ಎಂದು ತಿಳಿಸಿರುತ್ತಾರೆ . ಅವರು ನಮ್ಮಲ್ಲಿ ಸಂಧ್ಯಾ ಸುರಕ್ಷಾ ಯೋಜನೆಯನ್ನು ಮಾಡಿಕೊಡುವಂತೆ ವಿನಂತಿಸಿದ್ದಾರೆ ಅದರಂತೆ ನಮ್ಮ ಕನ್ನಡ ನಾಡು ಸೇನೆ ಸಂಪೂರ್ಣವಾಗಿ ಜವಾಬ್ದಾರಿಯನ್ನು ತೆಗೆದುಕೊಂಡು ಸಂಧ್ಯಾ ಸುರಕ್ಷೆಯೋಜನೆಯನ್ನು ಮಾಡಿಕೊಡುವುದರ ಬಗ್ಗೆ ಭರವಸೆಯನ್ನು ನೀಡುವುದಲ್ಲದೆ ಮುಂದಿನ ದಿನದಲ್ಲಿ ನಮ್ಮಿಂದಾದ ಸಹಕಾರವನ್ನು ನೀಡುತ್ತಿವೆ ಎಂದು ಭರವಸೆಯನ್ನು ಕೊಟ್ಟಿರುತ್ತೇವೆ. ಈ ಸಂದರ್ಭದಲ್ಲಿ ಜಿಲ್ಲಾ ಗೌರವಾಧ್ಯಕ್ಷರಾದ ಲಕ್ಷ್ಮೀಶ ಶೆಟ್ಟಿ. ಜಿಲ್ಲಾ ಪ್ರಧಾನ ಜಯಪ್ರಕಾಶ್ ಶೆಟ್ಟಿ. ಜಿಲ್ಲಾ ಉಪಾಧ್ಯಕ್ಷರಾದ ಆನಂದ್ ಶೆಟ್ಟಿ. ಜಿಲ್ಲಾ ಕಾರ್ಯದರ್ಶಿ ಸುಬ್ಬಣ್ಣ ಕಾಮತ್. ಮತ್ತು ಸದಸ್ಯರು ಶಾಲಿನಿ ಉಪಸ್ಥಿತಿದ್ದರು

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now