ಕಟಪಾಡಿ : ಉದ್ಯಾವರ ಸೇತುವೆಯ ಮೇಲೆ ದ್ವಿಚಕ್ರ ಇಟ್ಟು ನದಿಗೆ ಹಾರಿ ಆತ್ಮಹತ್ಯೆ ಮಾಡಿದ ಯುವಕ

ಕಟಪಾಡಿ : ಉದ್ಯಾವರ ಸೇತುವೆಯ ಮೇಲೆ ದ್ವಿಚಕ್ರ ಇಟ್ಟು ನದಿಗೆ ಹಾರಿ ಆತ್ಮಹತ್ಯೆ ಮಾಡಿದ ಯುವಕ
0Shares

ಕಟಪಾಡಿ : ಕಾಪು ಠಾಣಾ ವ್ಯಾಪ್ತಿಯ ಉದ್ಯಾವರ ಪಾಪನಾಶಿನಿ ಸೇತುವೆಯ ಮೇಲೆ ದ್ವಿಚಕ್ರ ವಾಹನ ಪತ್ತೆಯಾಗಿದ್ದು, ಕೊನೆಗೂ ಸತತ ಹುಡುಕಾಟದ ಬಳಿಕ ಉದ್ಯಾವರ ಪಿತ್ರೋಡಿ ಯುವಕ ನದಿಗೆ ಹಾರಿ ಆತ್ಮಹತ್ಯೆ ಮಾಡಿದ್ದು, ಮೃತ ದೇಹ ಪತ್ತೆಯಾಗಿದೆ.

ಮೃತ ಯುವಕ ಹರ್ಷಿತ್ ಶೆಟ್ಟಿ (28), ಉದ್ಯಾವರ ಪಿತ್ರೋಡಿಯ ನಿವಾಸಿಯಾಗಿದ್ದಾನೆ. ಬೆಳಿಗ್ಗೆ ಐದು ಗಂಟೆಗೆ ಬೋಳಾರುಗುಡ್ಡೆ ಮೈದಾನದಲ್ಲಿ ಕ್ರಿಕೆಟ್ ಆಡಲು ತೆರಳುತ್ತೇನೆ ಎಂದು ತೆರಳಿದ್ದ ಯುವಕ, ಬಳಿಕ ಮನೆಗೆ ಹಾಜರಾಗಿರಲಿಲ್ಲ. ಮೊಬೈಲ್ ಸ್ವಿಚ್ ಆಫ್ ಆಗಿದ್ದು, ದ್ವಿಚಕ್ರ ವಾಹನ ಸೇತುವೆಯ ಮೇಲೆ ಪತ್ತೆಯಾಗಿತ್ತು.

ಯುವಕನ ಪತ್ತೆಗಾಗಿ ನದಿಯಲ್ಲಿ ಖ್ಯಾತ ಮುಳುಗು ತಜ್ಞರು ಈಶ್ವರ್ ಮಲ್ಪೆ ಸಹಿತ ಹಲವರು ಹುಡುಕಾಟ ಮಾಡಿದ್ದರು.

ರಮೇಶ್ ಮತ್ತು ಪ್ರಮೋದಿನಿ ಶೆಟ್ಟಿ ಪುತ್ರನಾಗಿರುವ ಇವರು, ಇಬ್ಬರು ಸಹೋದರರನ್ನು ಅಗಲಿದ್ದಾರೆ. ಮೃತ ಯುವಕ ಮಲ್ಪೆಯ ಸೊಸೈಟಿ ಒಂದರಲ್ಲಿ ಉದ್ಯೋಗದಲ್ಲಿದ್ದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now