
ವಾಹನ ಸವಾರರಿಗೆ ಸಂಕಷ್ಟ – ಬಾಳೆ ಗಿಡ ನೆಟ್ಟು ಆಕ್ರೋಶ
ದುರಸ್ತಿಗೆ ಸಂಸದರು ಸೂಚಿಸಿದರೂ ಇನ್ನೂ ಕೆಲಸ ಆಗಿಲ್ಲ !
ಸುಳ್ಯದ ಜ್ಯೋತಿ ಸರ್ಕಲ್ ಬಳಿಯ ರಸ್ತೆ. ಮೂರು ವಿದ್ಯಾಸಂಸ್ಥೆಗೆ ಪ್ರತೀ ದಿನ ಸಾವಿರಾರು ವಿದ್ಯಾರ್ಥಿಗಳು ನಡೆದಾಡುವ ಈ ರಸ್ತೆ ಹೊಂಡ – ಗುಂಡಿಗಳಿಂದ ಕೂಡಿದ್ದು ಸಂಚಾರಕ್ಕೆ ಕಷ್ಟ ಪಡುವಂತಾಗಿದೆ. ಕೆಲ ತಿಂಗಳ ಹಿಂದೆ ಈ ರಸ್ತೆ ದುರಸ್ತಿಗೆ ಸಂಸದರು ಸೂಚಿಸಿದರೂ ಕೆಲಸ ಮಾತ್ರ ಇನ್ನೂ ಆಗಿಲ್ಲ. ಇದೀಗ ರಸ್ತೆಯ ಗುಂಡಿಯಲ್ಲಿ ಸಾರ್ವಜನಿಕರು ಬಾಳೆಗಿಡ ನೆಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಡಿಯುವ ನೀರಿನ ಪೈಪ್ ಕಾಮಗಾರಿಗಾಗಿ ರಸ್ತೆಯನ್ನು ಅಗೆಯಲಾಗಿತ್ತು. ಪೈಪ್ ಅಳವಡಿಕೆಯ ಬಳಿಕ ರಸ್ತೆ ಮುಚ್ಚಲಾಗಿತ್ತಾದರೂ ಕಾಂಕ್ರೀಟ್ ಹಾಕುವ ಬದಲು ಜಲ್ಲಿ ಮಿಕ್ಸ್ ಹಾಕಲಾಯಿತು. ರಾಷ್ಟ್ರೀಯ ಹೆದ್ದಾರಿ ಇದಾಗಿರುವುದರಿಂದ ಹಲವು ವಾಹನ ಸಂಚರಿಸುತ್ತವೆ. ಇದೀಗ ಹಾಕಿರುವ ಜಲ್ಲಿಮಿಕ್ಸ್ ಎದ್ದು ಹೋಗಿ ಸಂಚಾರ ದುಸ್ತರವೆನಿಸಿದೆ.
ಕೆಲ ತಿಂಗಳ ಹಿಂದೆ ಸಂಸದ ಕ್ಯಾ.ಬ್ರಿಜೇಶ್ ಚೌಟರಿಗೆ ಈ ಕುರಿತು ದೂರು ಹೋಗಿ ಅವರು ಸಂಬಂಧಿಸಿದ ಇಲಾಖೆಗೆ ತಿಳಿದ ಮೇರೆಗೆ ಒಂದು ದಿನ ಕೆಲಸ ನಡೆದಿತ್ತಾದರೂ ಕೆಲಸ ಸಮರ್ಪಕವಾಗಿ ಆಗಲಿಲ್ಲ. ಪರಿಣಾಮ ಆಗ ಹಾಕಲಾದ ಜಲ್ಲಿಯೂ ಈಗ ಎದ್ದು ಹೋಗಿದ್ದು ಸಂಚಾರ ಮತ್ತಷ್ಟು ಕಷ್ಟವೆನಿಸುತ್ತಿದೆ.
ಇಂದು ವಾಹನ ಸವಾರರು ರಸ್ತೆಯ ಈ ಗುಂಡಿಗೆ ಬಾಳೆಗಿಡ ನೆಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now