ಅರ್ಜೆಂಟೀನಾಗೆ ಸೋಲು, ಮೆಸ್ಸಿಯ ಕನಸು ಭಗ್ನ, 2ನೇ ಬಾರಿಗೆ ಚಾಂಪಿಯನ್ ಆದ ಸ್ಪೇನ್!

ಅರ್ಜೆಂಟೀನಾಗೆ ಸೋಲು, ಮೆಸ್ಸಿಯ ಕನಸು ಭಗ್ನ, 2ನೇ ಬಾರಿಗೆ ಚಾಂಪಿಯನ್ ಆದ ಸ್ಪೇನ್!
0Shares

ನ್ಯೂಜೆರ್ಸಿ: ಲಿಯೋನೆಲ್ ಮೆಸ್ಸಿಯ ವಿಶ್ವಕಪ್‌ ಪಯಣಕ್ಕೆ ಅದ್ಭುತ ವಿದಾಯ ನೀಡಲು ಕಾಯುತ್ತಿದ್ದ ಅರ್ಜೆಂಟೀನಾ ಅಭಿಮಾನಿಗಳಿಗೆ ತೀವ್ರ ನಿರಾಶೆಯಾಗಿದೆ. ತೀವ್ರ ಕುತೂಹಲ ಕೆರಳಿಸಿದ್ದ ಫೀಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾವನ್ನು 1-0 ಗೋಲುಗಳಿಂದ ಮಣಿಸಿದ ಸ್ಪೇನ್, ಭರ್ಜರಿ ಜಯ ಸಾಧಿಸಿ 2ನೇ ಬಾರಿಗೆ ವಿಶ್ವಕಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಹೆಚ್ಚುವರಿ ಸಮಯದಲ್ಲಿ ಫೆರಾನ್ ಟೊರೆಸ್ ಗಳಿಸಿದ ಏಕೈಕ ಗೋಲು ಸ್ಪೇನ್‌ಗೆ ಐತಿಹಾಸಿಕ ಗೆಲುವು ತಂದುಕೊಟ್ಟಿತು.

ಆರಂಭದಿಂದಲೇ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ಸ್ಪೇನ್, ಚೆಂಡಿನ ನಿಯಂತ್ರಣ ಹಾಗೂ ಆಕ್ರಮಣಕಾರಿ ಆಟದ ಮೂಲಕ ಅರ್ಜೆಂಟೀನಾಗೆ ಯಾವುದೇ ಅವಕಾಶ ನೀಡಲಿಲ್ಲ. ವಿಶ್ವದ ಶ್ರೇಷ್ಠ ಆಟಗಾರ ಲಿಯೊನೆಲ್ ಮೆಸ್ಸಿಯನ್ನು ಸ್ಪೇನ್ ಮಧ್ಯರೇಖೆಯ ಆಟಗಾರರು ಸಂಪೂರ್ಣವಾಗಿ ಕಟ್ಟಿಹಾಕಿದ್ದು, ಅರ್ಜೆಂಟೀನಾ ಮೊದಲ 70 ನಿಮಿಷಗಳವರೆಗೆ ಒಂದೇ ಒಂದು ಶಾಟ್ ಕೂಡ ದಾಖಲಿಸಲು ವಿಫಲವಾಯಿತು.

ಸ್ಪೇನ್ ಹಲವು ಬಾರಿ ಗೋಲು ಗಳಿಸುವ ಅವಕಾಶ ಸೃಷ್ಟಿಸಿದರೂ, ಅರ್ಜೆಂಟೀನಾ ಗೋಲ್‌ಕೀಪ‌ರ್ ಎಮಿಲಿಯಾನೊ ಮಾರ್ಟಿನೆಸ್ ಅದ್ಭುತ ಸೇವ್‌ಗಳ ಮೂಲಕ ತಂಡವನ್ನು ಪಂದ್ಯದಲ್ಲಿ ಉಳಿಸಿದರು. ಮಿಕೆಲ್ ಮೆರಿನೊ ಅವರ ಹೆಡ‌ರ್ ಗೋಲಿನಿಂದ ಹೊರಬಿದ್ದರೆ, ಸ್ಪೇನ್‌ನ ಎರಡು ಗೋಲುಗಳು ಫೌಲ್ ಹಾಗೂ ಆಫ್‌ಸೈಡ್ ಕಾರಣದಿಂದ ಅಮಾನ್ಯಗೊಂಡವು.

ನಿಗದಿತ ಸಮಯದಲ್ಲಿ ಗೋಲುರಹಿತ ಸಮಬಲ ಕಂಡುಬಂದ ಬಳಿಕ ಪಂದ್ಯ ಹೆಚ್ಚುವರಿ ಸಮಯಕ್ಕೆ ಸಾಗಿತು.

ಹೆಚ್ಚುವರಿ ಸಮಯದ ಎರಡನೇ ಅವಧಿಯ 37ನೇ ಸೆಕೆಂಡ್‌ನಲ್ಲಿ ಪೆಟ್ರೊ ಪೊರೊ ಅವರ ಕ್ರಾಸ್ ಅನ್ನು ನಿಕೊ ವಿಲಿಯಮ್ಸ್ ಹೆಡ್ ಮೂಲಕ ಹಿಂದಿರುಗಿಸಿದಾಗ, ಫೆರಾನ್ ಟೊರೆಸ್ ಅದನ್ನು ಬಲಿಷ್ಠ ಎಡಗಾಲಿನ ಶಾಟ್ ಮೂಲಕ ಜಾಲಕ್ಕೊಪ್ಪಿಸಿ ಸ್ಪೇನ್‌ಗೆ ಮುನ್ನಡೆ ತಂದುಕೊಟ್ಟರು.

ಕೊನೆಯ ಕ್ಷಣಗಳಲ್ಲಿ ಅರ್ಜೆಂಟೀನಾ ಸಮಬಲ ಸಾಧಿಸಲು ಪ್ರಯತ್ನಿಸಿದರೂ ಸ್ಪೇನ್ ಆಟಗಾರರು ಯಾವುದೇ ಅವಕಾಶ ನೀಡಲಿಲ್ಲ. ಮೆಸ್ಸಿ ನೀಡಿದ ಕೆಲವು ಅಪಾಯಕಾರಿ ಕ್ರಾಸ್‌ಗಳನ್ನು ಸಹ ಸ್ಪೇನ್ ಯಶಸ್ವಿಯಾಗಿ ತಡೆದಿತು.

ಅರ್ಜೆಂಟೀನಾದ ಗೋಲ್ ಕೀಪ‌ರ್ ಎಮಿಲಿಯಾನೋ ಮಾರ್ಟಿನೆಜ್ ಸ್ಪೇನ್‌ನ ಅನೇಕ ಗೋಲಿನ ಯತ್ನಗಳನ್ನು ಅದ್ಭುತವಾಗಿ ತಡೆದರು. ಡಾನಿ ಓಲ್ಮ, ನಿಕೊ ವಿಲಿಯಮ್ಸ್ ಮತ್ತು ಲಾಮಿನ್ ಯಮಲ್ ಅವರ ಅಪಾಯಕಾರಿ ಯತ್ನಗಳಿಗೆ ಮಾರ್ಟಿನೆಜ್ ಗೋಡೆಯಾಗಿ ನಿಂತರು. ನಿಗದಿತ 90 ನಿಮಿಷಗಳಲ್ಲಿ ಯಾವುದೇ ಗೋಲು ದಾಖಲಾಗದಿದ್ದರೂ, ದ್ವಿತೀಯಾರ್ಧದ ಅಂತ್ಯದಲ್ಲಿ ಅರ್ಜೆಂಟೀನಾದ ಎಂಜೊ ಫೆರ್ನಾಂಡಿಸ್‌ ಕೆಂಪು ಕಾರ್ಡ್ ಪಡೆದು ಹೊರಬಿದ್ದಿದ್ದರಿಂದ ಅರ್ಜೆಂಟೀನಾ 10 ಆಟಗಾರರೊಂದಿಗೆ ಆಡುವಂತಾಯಿತು.

ಹೆಚ್ಚುವರಿ ಸಮಯದ ದ್ವಿತೀಯಾರ್ಧ ಆರಂಭವಾದ ಕೇವಲ 37 ಸೆಕೆಂಡುಗಳಲ್ಲಿ ಸ್ಪೇನ್ ಆಟಗಾರ ಪೆಟ್ರೊ ಪೊರೊ ನೀಡಿದ ಕ್ರಾಸಿಂಗ್ ಅನ್ನು ನಿಕೊ ವಿಲಿಯಮ್ಸ್ ಹೆಡರ್ ಮೂಲಕ ಪಾಸ್ ಮಾಡಿದರು. ಸೂಕ್ತ ಸಮಯದಲ್ಲಿ ಓಡಿಬಂದ ಫೆರನ್ ಟೊರೆಸ್ ಎಡಗಾಲಿನಿಂದ ಚೆಂಡನ್ನು ಗೋಲ್ ಪೋಸ್ಟ್‌ನೊಳಗೆ ತೂರಿಸಿ ತಂಡಕ್ಕೆ ಐತಿಹಾಸಿಕ ಗೆಲುವು ತಂದಿತ್ತರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now