ಸಂತಮೇರಿ ಕಾಲೇಜು ಶಿರ್ವ ವಿಶ್ವ ಪುಸ್ತಕ ದಿನಾಚರಣೆ

ಸಂತಮೇರಿ ಕಾಲೇಜು ಶಿರ್ವ ವಿಶ್ವ ಪುಸ್ತಕ ದಿನಾಚರಣೆ

0Shares

ಶಿರ್ವ: ಸಂತ ಮೇರಿ ಕಾಲೇಜು, ಶಿರ್ವ ಇಲ್ಲಿನ ಗ್ರಂಥಾಲಯ ಹಾಗೂ ಮಾಹಿತಿ ಕೋಶ ಘಟಕ ಮತ್ತು ಐಕ್ಯೂಎಸಿ ಇವರ ಸಹಯೋಗದೊಂದಿಗೆ ವಿಶ್ವ ಪುಸ್ತಕ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿರುವ ಶ್ರೀ ಪ್ರಮೋದ್ ಕುಮಾರ್ ಸಹಾಯಕ ಗ್ರಂಥಪಾಲಕರು, ಎಸ್. ಡಿ. ಎಮ್. ಆಯುರ್ವೇದ ಕಾಲೇಜು, ಕುತ್ಪಾಡಿ ಇವರು ಮಾತನಾಡಿ ಇಂದು ವಿಶ್ವ ಪುಸ್ತಕ ದಿನಾಚರಣೆ ಇದೊಂದು ವಿಶೇಷವಾದ ದಿವಸ. ಮಕ್ಕಳಲ್ಲಿ ಹಾಗೂ ಯುವಜನತೆಯಲ್ಲಿ ಓದುವ ಉತ್ಸಾಹವನ್ನು ಬಿತ್ತುವ ಕಾಳಜಿಯಿದೆ. ವಿಶ್ವ ಸಾಹಿತ್ಯದ ದಿಗ್ಗಜರಾದ ವಿಲಿಯಂ ಶೇಕ್ಸ್ಫಿಯರ್ ಹಾಗೂ ಮಿಗುಯೆಲ್ ಡಿ ಸೆರ್ವಾಂಟೆಸ್ ಇವರಿಬ್ಬರ ಸ್ಮರಣಾರ್ಥವಾಗಿ ಎಪ್ರಿಲ್ 23, 1995 ರಿಂದ ಯುನೆಸ್ಕೊ ಪುಸ್ತಕ ದಿನಾಚರಣೆಯಾಗಿ ಆಚರಿಸಲು ತೊಡಗಿದರು. ವಿದ್ಯಾರ್ಥಿಗಳಿಗೆ ಪುಸ್ತಕದ ಮಹತ್ವ ಹಾಗೂ ಅದನ್ನು ಓದುವುದರಿಂದ ಸಿಗುವ ಲಾಭಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು.
ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ . ಹೆರಾಲ್ಡ್ ಐವನ್ ಮೋನಿಸ್‌ರವರು ವಿದ್ಯಾರ್ಥಿಗಳು ಪುಸ್ತಕವನ್ನು ಓದುವುದರಿಂದ ಅನೇಕ ಲಾಭಗಳಿವೆ. ಪುಸ್ತಕ ಓದುವುದರಿಂದ ಆರೋಗ್ಯಕ್ಕೂ ಒಳಿತು. ವಿದ್ಯಾರ್ಥಿಗಳು ಕೇವಲ ಪಠ್ಯದ ಜೊತೆಗೆ ಪಠ್ಯಕ್ಕೆ ಹೊರತಾದ ಪುಸ್ತಕವನ್ನು ಓದಬೇಕು ಎಂದು ಹೇಳಿದರು.
ಕಾಲೇಜಿನ ಗ್ರಂಥಪಾಲಕಿ ಶ್ರೀಮತಿ ತನುಜ ಎನ್. ಸುವರ್ಣ ಇವರು ಅತ್ಯುತ್ತಮ ಗ್ರಂಥಾಲಯ ಪ್ರಯೋಜನವನ್ನು ಪಡೆದ ವಿದ್ಯಾರ್ಥಿಗಳಿಗೆ ನೀಡಲಾಗುವ ಬಹುಮಾನಗಳ ಪಟ್ಟಿಯನ್ನು ವಾಚಿಸಿದರು. ಗ್ರಂಥಾಲಯ ಸಹಾಯಕಿ ಶ್ರೀಮತಿ ದಿವ್ಯಾ ಅತಿಥಿ ಪರಿಚಯ ಮಾಡಿದರು. ತೃತೀಯ ಬಿ.ಸಿ.ಎ ವಿದ್ಯಾರ್ಥಿನಿ ಶ್ರೀನಿಧಿ ನೈಕ್ ಸ್ವಾಗತಿಸಿದರು. ತೃತೀಯ ಬಿ.ಎ ವಿದ್ಯಾರ್ಥಿ ಸೀನು ನಾಯಕ್ ವಂದಿಸಿದರು. ತೃತೀಯ ಬಿ.ಕಾಂ. ವಿದ್ಯಾರ್ಥಿನಿ ತೃಶಾ ಪ್ರವೀಣ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಬೋಧಕ- ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ನಮ್ಮ ವರದಿಗಾರರು

ವಿಲ್ಸನ್ ಡಿಸೋಜ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now