
ಪಿ.ಎಂ.ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಕ್ಕೆಹಳ್ಳಿಯಲ್ಲಿ ಇಂದು ಶಾಲಾ ಪ್ರಾರಂಭೋತ್ಸವವು ವಿಜೃಂಭಣೆಯಿಂದ ನಡೆಯಿತು . ಬ್ಯಾಂಡ್ ವಾದ್ಯದೊಂದಿಗೆ ಮೆರವಣಿಗೆಯಲ್ಲಿ ಬಂದ ಶಾಲಾ ಮಕ್ಕಳನ್ನು ಅಧ್ಯಾಪಕ ವೃಂದದವರು ಆರತಿಯನ್ನು ಬೆಳಗಿಸಿ ಶಾಲೆಗೆ ಬರಮಾಡಿಕೊಂಡರು. ಸಭಾಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾದಾನಿಗಳಾದ ಗುಣಕರ ಹೆಗ್ಡೆ ನೆರವೇರಿಸಿದರು . ಶಾಲಾಮಕ್ಕಳಿಗೆ ಉಚಿತ ಪಠ್ಯಪುಸ್ತಕವನ್ನು ಸುಕೇಶ್ ಮಡಿವಾಳ ವಿತರಿಸಿದರು .ವೇದಿಕೆಯಲ್ಲಿ ಕುಕ್ಕೆಹಳ್ಳಿ ಗ್ರಾಮಪಂಚಾಯತ್ ನ ಮಾಜಿ ಅಧ್ಯಕ್ಷರಾದ ಪುರಂದರ ಕೋಟ್ಯಾನ್, ಕುಕ್ಕೆಹಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರಾದ ಹರಿಜೀವನ್ ಹೆಗ್ಡೆ , ಹಿರಿಯ ಶಿಕ್ಷಕಿ ಶ್ರೀಮತಿ ಜಯಶ್ರೀ ಹಾಗೂ ಶಾಲಾಭಿವೃದ್ದಿ ಸಮಿತಿಯ ಉಪಾಧ್ಯಕ್ಷರಾದ ರವೀಂದ್ರ ಕುಮಾರ್ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸರಸ್ವತಿ ಇವರು ಸರ್ವರನ್ನು ಸ್ವಾಗತಿಸಿದರು . ದೈಹಿಕ ಶಿಕ್ಷಣ ಶಿಕ್ಷಕರಾದ ಗಣೇಶ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀಮತಿ ಜ್ಯೋತಿಕಲಾ ಸರ್ವರಿಗೂ ವಂದನಾರ್ಪಣೆಗೈದರು. ಪೋಷಕರು, ಅಧ್ಯಾಪಕರು, ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.




Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now