ಜು.12) : 2ನೇ ವರ್ಷದ ‘ಕೆಸರ್ಡ್ ಒಂಜಿ ದಿನ ಕುಸಲ್ದ ಗೊಬ್ಬು’ ಪರವಾಗಿ ನಂದಿ ಫ್ರೆಂಡ್ಸ್ ಬೆದ್ರಾಳ : ಆಮಂತ್ರಣ ಪತ್ರಿಕೆ ಬಿಡುಗಡೆ, ಲೋಗೋ ಅನಾವರಣ..!!

ಜು.12) : 2ನೇ ವರ್ಷದ ‘ಕೆಸರ್ಡ್ ಒಂಜಿ ದಿನ ಕುಸಲ್ದ ಗೊಬ್ಬು’ ಪರವಾಗಿ ನಂದಿ ಫ್ರೆಂಡ್ಸ್ ಬೆದ್ರಾಳ : ಆಮಂತ್ರಣ ಪತ್ರಿಕೆ ಬಿಡುಗಡೆ, ಲೋಗೋ ಅನಾವರಣ..!!
0Shares

ಬೆದ್ರಾಳ: ಜುಲೈ 12ರಂದು ನಡೆಯಲಿರುವ ನಂದಿ
ಫ್ರೆಂಡ್ಸ್ ಬೆದ್ರಾಳ ವತಿಯಿಂದ ಆಯೋಜಿಸಿರುವ ಎರಡನೇ ವರ್ಷದ ‘ಕೆಸರ್ಡ್ ಒಂಜಿ ದಿನ ಕುಸಲ್ದ ಗೊಬ್ಬು’ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಲೋಗೋ ಅನಾವರಣ ಸಮಾರಂಭವು ಭಾನುವಾರ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನೆರವೇರಿತು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವ‌ರ್ ಭಟ್‌ ಪಂಜಿಗುಡ್ಡೆ ಅವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ, ಕಾರ್ಯಕ್ರಮದ ಲೋಗೋವನ್ನು ಅನಾವರಣ ಮಾಡಿದರು. ಈ ವೇಳೆ ಮಾತನಾಡಿದ ಅವರು, ಯುವಜನರು ಸಮಾಜಮುಖಿ, ಸಾಂಸ್ಕೃತಿಕ ಹಾಗೂ ಪರಂಪರೆಯನ್ನು ಉಳಿಸುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ.

ಕಾರ್ಯಕ್ರಮ ಯಶಸ್ವಿಯಾಗಲೆಂದು ಶುಭಹಾರೈಸಿದರು.

ಈ ಸಂದರ್ಭದಲ್ಲಿ ನಂದಿ ಫ್ರೆಂಡ್ಸ್ ಬೆದ್ರಾಳದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದು, ಕಾರ್ಯಕ್ರಮದ ಸಿದ್ಧತೆಗಳ ಕುರಿತು ಮಾಹಿತಿ ನೀಡಿದರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆಹ್ವಾನಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now