ಪೆರ್ಡೂರು ರೆಸಾರ್ಟ್‌ನಲ್ಲಿ ಅಂದರ್-ಬಾಹರ್ ಜೂಜು: 26 ಜನರ ಬಂಧನ, 16.5 ಲಕ್ಷ ಮೌಲ್ಯದ ಸ್ವತ್ತು ವಶ

ಪೆರ್ಡೂರು ರೆಸಾರ್ಟ್‌ನಲ್ಲಿ ಅಂದರ್-ಬಾಹರ್ ಜೂಜು: 26 ಜನರ ಬಂಧನ, 16.5 ಲಕ್ಷ ಮೌಲ್ಯದ ಸ್ವತ್ತು ವಶ
0Shares

ಪೆರ್ಡೂರು ಗ್ರಾಮದ ಪುತ್ತಿಗೆ ಸ್ವರ್ಣ ಗ್ರೀನ್‌ ವ್ಯಾಲಿ ರೆಸಾರ್ಟ್‌ ನ ರೂಮ್‌ ನಲ್ಲಿ ಅಂದರ್ ಬಾಹರ್‌ ಜುಗಾರ ಆಟ 26 ಜನ ಆರೋಪಿತರ ಬಂಧನ

ದಿನಾಂಕ:07/07/2026 ರಂದು ರಾತ್ರಿ ಹಿರಿಯಡಕ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಡೂರು ಗ್ರಾಮದ ಪುತ್ತಿಗೆ ಸ್ವರ್ಣ ಗ್ರೀನ್‌ ವ್ಯಾಲಿ ರೆಸಾರ್ಟ್‌ ನ ರೂಮ್‌ ನಲ್ಲಿ ಅಂದರ್-ಬಾಹರ್‌ ಜುಗಾರ ಆಟ ನಡೆದಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಜೂಜಾಟದಲ್ಲಿ ಭಾಗಿಯಾದ 1) ಸತೀಶ(49) ,ಉಳಿಯಾರುಗೋಳಿ ಕಾಪು. 2)ಅಕ್ಷಯ(31) ಮೂಡಬಿದ್ರೆ 3)ದಿನೇಶ ಕಾಪು 4) ಮಾಧವ ಪೂಜಾರಿ ಬೆಳಪು ನ5) ಪ್ರಶಾಂತ ಕಾಪು 6) ಅಕ್ಷಯ ಕಾಪು 7) ದಿನೇಶ ಕಾಪು 8) ಭರತ್‌ ಕಾಪು 9) ಸಂತೋಷ ಕಣಜಾರು 10) ಅರುಣ ಕಾಪು 11) ರೋಶನ್‌ ಕಾಪು 12) ಚರನ್‌ ಕಾಪು 13) ಲೋಹಿತ್‌ ಮೂಡಬಿದ್ರೆ 14) ಶಿವ ಉಚ್ಚಿಲ 15) ಮನಿಷ ಕಾಪು 16)ರಂಜಿತ್‌ ಕಾಪು 17)ಯಾದವ್‌ ಕಾಪು 18) ಪೃಥ್ವಿನ್‌ ಕಾಪು 19) ಶಿವ ಕಾಪು 20) ದೀಪಕ್‌ ಕಾಪು 21) ವಿತೇಶ ಕಾಪು 22) ಅಬ್ದುಲ್‌ ಹಮೀದ್‌ ಶಿರ್ವ 23) ಹರೋನ್‌ ಶಿರ್ವ 24)ಕೃಷ್ಣ ಕಾಪು 25)ಅಶೋಕ ಉಡುಪಿ 26)ಶೈಲೇಶ ರವರನ್ನು ವಶಕ್ಕೆ ಪಡೆದು, ಜೂಜಾಟಕ್ಕೆ ಬಳಸಿದ ನಗದು ಹಣ 1,31,630/- ರೂಪಾಯಿ ,ಇಸ್ಪೀಟ್‌ ಎಲೆಗಳು,ವಿವಿಧ ಕಂಪನಿಯ ಮೊಬೈಲ್‌ ಪೋನಗಳು-25 ಅದರ ಮೌಲ್ಯ:2,00000/- ವಿವಿಧ ಕಂಪನಿಯ ಕಾರುಗಳು-05 ಮೋಟಾರ್‌ ಸೈಕಲ್‌ ಗಳು-3 ಅಂದಾಜು ಮೌಲ್ಯ 14,50,000/- ಹಾಗೂ ಟೇಬಲ್‌ ಚೇರ್‌ ಗಳು ಹೀಗೆ ಒಟ್ಟು 16,50,000 /-ರೂಪಾಯಿ ಮೌಲ್ಯದ ಸ್ವತ್ತು ಮತ್ತು 1,31,630/- ನಗದು ಹಣವನ್ನು ಸ್ವಾದೀನಪಡಿಸಿಕೊಂಡು ಹಿರಿಯಡಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೊಳ್ಳಲಾಗಿರುತ್ತದೆ,ಹಾಗೂ ಪೆರ್ಡೂರು ಗ್ರಾಮದ ಪುತ್ತಿಗೆ ಸ್ವರ್ಣ ಗ್ರೀನ್‌ ವ್ಯಾಲಿ ರೆಸಾರ್ಟ್‌ ನ ಪರವಾನಿಗೆ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುವುದು,

ಬೆಳ್ಳಿಯಪ್ಪ.ಕೆ. ಮಾನ್ಯ ಪೊಲೀಸ್‌ ಉಪಾಧೀಕ್ಷಕರು ಉಡುಪಿ ಉಪ ವಿಭಾಗ ಹಾಗೂ ವಿಜಯಪ್ರಸಾದ್‌ ಮಾನ್ಯ ಪ್ರಭಾರ ಪೊಲೀಸ್‌ ಉಪಾಧೀಕ್ಷಕರು ಉಡುಪಿ ಉಪ ವಿಭಾಗ ರವರ ನಿರ್ದೇಶನದಂತೆ ಗೋಪೀಕೃಷ್ಣ ರವರ ಪೊಲೀಸ್‌ ನಿರೀಕ್ಷಕರು ಬೃಹ್ಮಾವರ ವೃತ್ತ ರವರ ಮಾರ್ಗದರ್ಶನದಲ್ಲಿ ಪುನೀತ್‌ ಕುಮಾರ್‌ ಬಿ.ಇ ಪಿ.ಎಸ್‌.ಐ (ಕಾ&ಸು) ಮತ್ತು ವಿಠ್ಠಲ ಮಲವಡಕರ-ಪಿಎಸ್‌ ಐ(ತನಿಖೆ) ಹಿರಿಯಡಕ ಪೊಲೀಸ್‌ ಠಾಣೆ ಹಾಗೂ ಸಿಬ್ಬಂದಿಗಳಾದ ಪ್ರವೀಣ್‌ ರೈ,ಪ್ರವೀಣ್‌ ಶೆಟ್ಟಿ, ಯತೀಶ ,ಕೃಷ್ಣ ಪೂಜಾರಿ,ಉಲ್ಲಾಸ್‌ ,ಚನ್ನೇಶ,ಕಾರ್ತಿಕ್‌, ಜೀಪ್‌ ಚಾಲಕ ಶಾಂತರಾಮ್‌ ಶೆಟ್ಟಿ ರವರು ದಾಳಿಯಲ್ಲಿ ಪಾಲ್ಗೋಂಡು ಆರೋಪಿತರನ್ನು ಹಿಡಿಯುವಲ್ಲಿ ಸ್ವತ್ತುಗಳನ್ನು ವಶಪಡಿಸಿಕೊಳ್ಳವಲ್ಲಿ ಸಹಕರಿಸಿರುತ್ತಾರೆ.

ನಮ್ಮ ವರದಿಗಾರರು

ವಿಲ್ಸನ್ ಡಿಸೋಜ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now