
ಸುಮಾರು 36 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಉಡುಪಿ ನಗರ ಠಾಣೆಯ ಪ್ರಕರಣದಲ್ಲಿ ಭಾಗಿಯಾಗಿದ್ದ ಎಲ್ ಪಿಸಿ ವಾರೆಂಟ್ ಆಸಾಮಿಯ ಬಂಧನ
ದಿನಾಂಕ:21.06.1990 ರಂದು ಉಡುಪಿ ನಗರ ಠಾಣೆಯಲ್ಲಿ ಅಕ್ರ ನಂ: 83/1990 ಕಲಂ: 86, 87 ಕರ್ನಾಟಕ ಅರಣ್ಯ ಕಾಯ್ದೆಯಂತೆ ದಾಖಲಾದ ಪ್ರಕರಣದ ಆರೋಪಿ ನೂರುಲ್ಲ ಪ್ರಾಯ:66 ವರ್ಷ, ತಂದೆ: ಭಾಷಾ ಸಾಹೇಬ್, ವಾಸ: ನಿಟ್ಟೂರು, ಹಿರೇಕೆರೂರು ತಾಲೂಕು ಹಾವೇರಿ ಜಿಲ್ಲೆ ಎಂಬಾತನನ್ನು ದಿನಾಂಕ: 22.06.1990 ರಂದು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ದಿನಾಂಕ: 06.07.1990 ರವರೆಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ. ತದ ನಂತರ ಮಾನ್ಯ ನ್ಯಾಯಾಲಯದಿಂದ ಜಾಮೀನು ಪಡೆದು ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಆರೋಪಿಯ ವಿರುದ್ಧ ಎಲ್ಪಿಸಿ ನಂ: 01/1998 ರಂತೆ ಹೊರಡಿಸಿರುತ್ತದೆ.
ಸದರಿ ಆರೋಪಿ ನೂರುಲ್ಲ ಎಂಬಾತನನ್ನು ಪತ್ತೆ ಮಾಡಲು ಉಡುಪಿ ನಗರ ಠಾಣೆಯ ಪ್ರಭಾರ ನಿರೀಕ್ಷಕರಾದ ಮಹೇಶ ಪ್ರಸಾದ್ ರವರ ಮಾರ್ಗದರ್ಶನದಲ್ಲಿ , ಉಡುಪಿ ನಗರ ಠಾಣಾ ಪಿಎಸ್ ಐ ಭರತೇಶ ಕಂಕಣವಾಡಿ, ಈರಣ್ಣ ಶಿರಗುಂಪಿ, ರತ್ನಾಕರ ಕೆ ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಹೆಚ್ ಸಿ ಪ್ರಸನ್ನ.ಸಿ. ಹೆಚ್ ಸಿ ಜೀವನ್ ಕುಮಾರ್ ಪಿಸಿ ಹೇಮಂತ್ ಕುಮಾರ್ ರವರನ್ನು ನೇಮಿಸಿದ್ದು, ಸದರಿಯವರು ಆರೋಪಿ ಯ ಬಗ್ಗೆ ವಿವರವಾದ ಮಾಹಿತಿಯನ್ನು ಸಂಗ್ರಹಿಸಿ 36 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ದಿನಾಂಕ: 22.06.2026 ರಂದು ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ನಿಟ್ಟೂರು ಎಂಬಲ್ಲಿ ಪತ್ತೆ ಹಚ್ಚಿ, ವಶಕ್ಕೆ ಪಡೆದುಕೊಂಡು ದಿನಾಂಕ:22.06.2026 ರಂದು ವಾರೆಂಟ್‌ನೊಂದಿಗೆ ಮಾನ್ಯ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಧೀಶರು ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.
ನಮ್ಮ ವರದಿಗಾರರು
ವಿಲ್ಸನ್ ಡಿಸೋಜ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now