ಪಡುಬಿದ್ರಿ ಠಾಣೆ ಪೊಲೀಸ್ ದಾಳಿ – ಅಂಗಡಿಯಲ್ಲಿ 625.83 ಗ್ರಾಂ ಗಾಂಜಾ ಪತ್ತೆ, ಆರೋಪಿ ನ್ಯಾಯಾಂಗ ಬಂಧನ

ಪಡುಬಿದ್ರಿ ಠಾಣೆ ಪೊಲೀಸ್ ದಾಳಿ – ಅಂಗಡಿಯಲ್ಲಿ 625.83 ಗ್ರಾಂ ಗಾಂಜಾ ಪತ್ತೆ, ಆರೋಪಿ ನ್ಯಾಯಾಂಗ ಬಂಧನ
0Shares

ದಿನಾಂಕ 22.07.2026 ರಂದು ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಫು ತಾಲೂಕು ಬಡಾ ಗ್ರಾಮದ ಎರ್ಮಾಳು ಎಂಬಲ್ಲಿ ಇರುವ ಅನೀಲಾ ಪಾನ್ ಸ್ಟಾಲ್ ನಲ್ಲಿ ಅಕ್ರಮವಾಗಿ ನಿಷೇದಿತ ಮಾದಕ ವಸ್ತು ಗಾಂಜಾ ವನ್ನು ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಬಂದ ಮಾಹಿತಿಯಂತೆ ಸ್ಥಳಕ್ಕೆ ದಾಳಿ ನಡೆಸಿ ಅನಿಲ್ ಎಂಬಾತನನ್ನು ವಶಕ್ಕೆ ಪಡೆದು ಆತನ ಬಾಬ್ತು ಪಾನ್ ಸ್ಟಾಲ್ ಅಂಗಡಿಯಲ್ಲಿ ಗಿರಾಕಿಗಳಿಗೆ ಮಾರಾಟ ಮಾಡಲು ಇಟ್ಟಿದ್ದ ಒಟ್ಟು ಸುಮಾರು 625.83 ಗ್ರಾಂ ತೂಕದ ಗಾಂಜಾವನ್ನು ಹಾಗೂ ಗಾಂಜಾ ಮಾರಾಟ ಮಾಡಿ ಸಂಗ್ರಹಿಸಿದ ನಗದು ರೂ 600/-ನ್ನು ಸ್ವಾದೀನಪಡಿಸಿ ಆರೋಪಿ ಅನಿಲ್ ಈತನ ಮೇಲೆ ಅಪರಾಧ ಕ್ರಮಾಂಕ: 84/2026 ಕಲಂ: ಕಲಂ 8 (c), 20(b)(II)(A) NDPS Act 1985 ರಂತೆ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ.

ಕಾರ್ಕಳ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಎಸ್ ವಿಜಯಪ್ರಸಾದ್, ಕಾಪು ವೃತ್ತ ನಿರೀಕ್ಷಕ ಅಜ್ಮತ್ ಆಲಿ ರವರ ಮಾರ್ಗದರ್ಶನದಂತೆ ಪಡುಬಿದ್ರಿ ಪೊಲೀಸ್ ಠಾಣಾ ಪಿಎಸ್ಐ ಸಕ್ತಿವೇಲು ಈ ಮತ್ತು ಅನಿಲ್ ಕುಮಾರ್ ಟಿ ನಾಯಕ್ ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ
ಎ ಎಸ್ ಐ ಗಿರೀಶ್ ಯು ಆರ್, ಹೆಚ್ ಸಿ ಕೃಷ್ಣಪ್ರಸಾದ್, ಹೆಚ್ ಸಿ ಮಿಥುನ್, ಪಿಸಿ ಸಂದೇಶ್ ಭಂಡಾರಿ ಹಾಗೂ ಪಿಸಿ ರಾಘವೇಂದ್ರ ರವರು ದಾಳಿಯಲ್ಲಿ ಭಾಗವಹಿಸಿರುತ್ತಾರೆ ಹಾಗೂ ಉಡುಪಿ ಜಿಲ್ಲಾ SOCO ಅಧಿಕಾರಿಗಳು ಧಾಳಿ ಸಂದರ್ಭ ಮಾದಕ ವಸ್ತುವನ್ನು ಪರೀಕ್ಷಿಸಿ ತನಿಖಾಧಿಕಾರಿಯವರಿಗೆ ಸಹಕರಿಸಿರುತ್ತಾರೆ.

ಆರೋಪಿ ಅನಿಲ್ ಈತನನ್ನು ವಶಕ್ಕೆ ಪಡೆದು ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಮಾನ್ಯ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

ನಮ್ಮ ವರದಿಗಾರರು

ವಿಲ್ಸನ್ ಡಿಸೋಜ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now