ಉಪ್ಪುಂದದ ಡಾಕ್ಟರ್ ಪಡಿಯಾರ್ ಇನ್ನಿಲ್ಲ

ಉಪ್ಪುಂದದ ಡಾಕ್ಟರ್ ಪಡಿಯಾರ್ ಇನ್ನಿಲ್ಲ
0Shares

ರಾಷ್ಟ್ರಚಿಂತನೆಯಲ್ಲೇ ಬದುಕು ಮುಗಿಸಿದ ಡಾ ಎಸ್ ಎನ್ ಪಡಿಯಾರ್ (84) ನಾಡು ಕಂಡ ಆದರ್ಶದಲ್ಲೊಬ್ಬರು . ಅರವತ್ತರ ದಶಕದಲ್ಲಿ ನಮ್ಮೂರ ನಮ್ಮ ಸಮಾಜದ ಪ್ರಥಮ ಡಾಕ್ಟರ್ ಇವರು ಆಗಲೇ ಊರಲ್ಲಿ ತಮ್ಮ ಸೇವೆಗೆ ಕನಸು ಕಂಡವರು . ಬಳಿಕ ಕುಂದಾಪುರದಲ್ಲಿ ಪ್ರಪ್ರಥಮ ಪಡಿಯಾರ ನರ್ಸಿಂಗ್ ಹೋಮ್ ಇವರದ್ದು . ಪ್ರಪ್ರಥಮ ಆ್ಯಂಬುಲೆನ್ಸ್ ಸೇವೆ ಹೀಗೆ ವೈದ್ಯಕೀಯ ರಂಗದಲ್ಲಿ ಕುಂದಾಪುರ ಬೆಳೆದ ಇಂದಿನ ಸ್ಥಿತಿಯ ನಾಂದಿಗೆ ಇವರೂ ಕಾರಣಿಕರು . ಆದರೆ ಈ ಎಲ್ಲ ಒತ್ತಡದಲ್ಲೂ ಅವರಿಗೆ ಇದ್ದ ಆಕರ್ಷಣೆ ರಾಷ್ಟ್ರ ಚಿಂತನೆ ಹೊರತು ವೈದ್ಯಕೀಯ ವ್ಯವಹಾರ ಆಗಿರಲಿಲ್ಲ . ಈ ಕಾರಣದಿಂದ ತನ್ನ ಒಳ ಕೂಗು ಆಲಿಸಿದ ಡಾಕ್ಟರ್ ಪಡಿಯಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಲವು ಜವಬ್ದಾರಿ ನಿಭಾಯಿಸುತ್ತಾ ತನ್ನನ್ನು ನಾಡಿಗೆ ಅರ್ಪಿಸುತ್ತಾ ಬಂದವರು . ವಿಶೇಷವಾಗಿ ನಮ್ಮ ಜಿಲ್ಲಾ ಶಿಶು ಮಂದಿರದ ಕನಸನ್ನು ನನಸಾಗಿಸಿ ಬಳಿಕ ವಿಷ್ಣು ಸಹಸ್ರನಾಮದ ವಿಶೇಷತೆಯನ್ನು ಸಾರುತ್ತಾ ನಮ್ಮೂರ ಪ್ರಪ್ರಥಮ ಎಮ್ ಬಿ ಬಿ ಎಸ್ ಡಾಕ್ಟರ್ ಓರ್ವ ಸಂತರಂತೆ ನಾಡಿನ ಆರೋಗ್ಯ ಗಮನಿಸುತ್ತಾ ಸಮಾಜಕ್ಕೆ ಸರ್ವಸ್ವ ಎಂಬ ನಿಲುವಿಗೆ ಬಂದವರು . ತನ್ಮಧ್ಯೆ ಮಗನ ಅಗಲುವಿಕೆಯ ನೋವನ್ನೂ ಸಮಾಜ ಚಿಂತನೆ ಸೇವೆ ಮೂಲಕ ಮರೆಸಿ ಕೊಂಡ ಡಾಕ್ಟರ್ ಪಡಿಯಾರ್ ನಮ್ಮೂರ ಅಸಲಿ ಮಾಣಿಕ್ಯ . ಇಂದು ಡಾಕ್ಟರ್ ಪಡಿಯಾರ್ ಮಾಮ್ ಅಗಲಿದ್ದಾರೆ . ಮಡದಿ ಹಾಗೂ ಇಬ್ಬರು ಪುತ್ರರು ಸೊಸೆಯಂದಿರು ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ . ನಮ್ಮ ಪರಿಸರದ ಶ್ರೇಷ್ಠ ಚಿಂತನೆಯ ಮರವೊಂದು ಧರೆಗೊರಗಿದೆ!! ಈ ಹಿರಿಯ ಚೇತನ ಇನ್ನು ಸ್ಮರಣೆ ಮಾತ್ರ .

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now