
ಪಾಂಬೂರು ಹೋಲಿ ಕ್ರಾಸ್ ಚರ್ಚ್‌ನಲ್ಲಿ ಆಗಸ್ಟ್ 15ರಂದು ಪವಿತ್ರ ಮರಿಯಮ್ಮನ ಸ್ವರ್ಗಾರೋಹಣ ಹಬ್ಬದ ಅಂಗವಾಗಿ ಬೆಳಿಗ್ಗೆ 7:30ಕ್ಕೆ ನಡೆದ ಪವಿತ್ರ ಬಲಿಪೂಜೆಯ ಬಳಿಕ ಚರ್ಚ್ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ವಂದನೀಯ ಫಾ. ಡಾ. ರೋಶನ್ ಡಿಸೋಜಾ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯ ದಿನಾಚರಣೆಯ ಮಹತ್ವ ಹಾಗೂ ದೇಶದ ಮೇಲಿನ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಗಳ ಕುರಿತು ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ PPC ಉಪಾಧ್ಯಕ್ಷ ಫೆಡ್ರಿಕ್ ಸಲ್ದಾನಾ, PPC ಕಾರ್ಯದರ್ಶಿ ಲೆನ್ನಿ ಡಿಸೋಜಾ, ಡೀಕನ್ ಸ್ಟೀವನ್ ಡಿಸೋಜಾ, ರೆ. ಫಾ. ಪ್ಯಾಟ್ರಿಕ್ ವಿನ್ಸೆಂಟ್ ಡಿಸೋಜಾ SVD, ಕ್ಯಾಥೋಲಿಕ್ ಸಭಾ ಪಾಂಬೂರು ಘಟಕದ ಅಧ್ಯಕ್ಷೆ ಅಸ್ಸುಂತಾ ಡಿಸೋಜಾ ಹಾಗೂ ಕಾರ್ಯದರ್ಶಿ ಟೋನಿ ಮೊನಿಸ್ ಉಪಸ್ಥಿತರಿದ್ದರು.
ಕ್ಯಾಥೋಲಿಕ್ ಸಭಾ ಅಧ್ಯಕ್ಷೆ ಅಸ್ಸುಂತಾ ಡಿಸೋಜಾ ಕಾರ್ಯಕ್ರಮವನ್ನು ನಿರೂಪಿಸಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now