
ಮುಂಬಯಿ, ಮೇ.೦೮: ಕೊಂಕಣಿ ನಾಟಕ ರಂಗದ ಹಿರಿಯಣ್ಣ ಪ್ರಖ್ಯಾತ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ, ಕೊಮೆಡಿ ಕಿಂಗ್ ನಟ ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ ಇವರ ಫ್ರಾಂಕ್ ಪ್ರೊಡಕ್ಷನ್ ಮುಂಬಯಿ ಕೊಂಕಣಿ ನಾಟಕ ತಂಡವು ತನ್ನ ೯೮ನೇ ಪ್ರದರ್ಶನವನ್ನು ‘ಕೊಂಕಣಿ ಫ್ರೆಂಡ್ಸ್ ಜೆರಿಮೆರಿ’ ಸಂಯೋಜನೆಯಲ್ಲಿ ಇಂದಿಲ್ಲಿ ಶುಕ್ರವಾರ ರಾತ್ರಿ ಕುರ್ಲಾ ಪಶ್ಚಿಮದ ಜೆರಿಮೆರಿ ಇಲ್ಲಿನ ಸೈಂಟ್ ಜೂಡ್ ಬಾಲವಾಡಿ ಶಾಲಾ ಮೈದಾನದಲ್ಲಿ ಧರ್ಮಾರ್ಥವಾಗಿ ‘ಮ್ಹಾತಾರೊ ಚರ್ಬೆಲಾ’ ಹಾಸ್ಯಮಯ ಸಾಮಾಜಿಕ ಕೊಂಕಣಿ ನಾಟಕವನ್ನು ಪ್ರದರ್ಶಿಸಿತು.
ಈ ಮಧ್ಯೆ ನಡೆಸಲಾಗಿದ್ದ ಸರಳ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಸೈಂಟ್ ಜೂಡ್’ಸ್ ಚರ್ಚ್‌ನ ಪ್ರಧಾನ ಧರ್ಮಗುರು ರೆ| ಫಾ| ಎಲಿಯಾಸ್ ಡಿ’ಸೋಜಾ (ಕಿನ್ನಿಗೋಳಿ), ಗೌರವ ಅತಿಥಿಗಳಾಗಿ ಭನಿಯರಾದ ಸಿ| ಸೀಮಾ, ಸಿ| ಜೋನ್ಹಾ, ಸಿ| ಸಂಜನಾ ಉಪಸ್ಥಿತರಿದ್ದು ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ ಮತ್ತು ಫ್ಲೋರಾ ಡಿ’ಸೋಜಾ ಕಲ್ಮಾಡಿ ಇವರನ್ನು ವಿಶೇಷಸನ್ಮಾನಿಸಿ ಅಭಿನಂದಿಸಿದರು ಹಾಗೂ ಇತರ ಕಲಾವಿದರಿಗೂ ಸತ್ಕರಿಸಿ ಶುಭಕೋರಿದರು.
ಸುಮಾರು ೮೩ರ ಹರೆಯದ ಹಿರಿಯ ಅಪ್ರತಿಮ ಕಲಾವಿದ ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ ರಚಿಸಿ ನಟಿಸಿದ, ಜೊಯ್ ಪಾಲಡ್ಕ ನಿರ್ದೇಶಿಸಿದ ‘ಮ್ಹಾತಾರೊ ಚರ್ಬೆಲಾ’ದ ೯೮ನೇ ಪ್ರಂiಗವನ್ನು ಸುಮಾರು ಮೂರು ದಶಕಗಳ ಹಿಂದಿನ ಕಲಾಕಾರರುಗಳೇ ಬಹುತೇಕ ಪಾತ್ರಧಾರಿಗಳೇ ಯಶಸ್ವೀಯಾಗಿ ಪ್ರದರ್ಶಿಸಿತು. ಜೊಯ್ ಪಾಲಡ್ಕ, ಶ್ರೀಮತಿ ಬೆಟ್ಟಿ ನ್ಹಾಜ್ ಬಾಂದ್ರ, ಶ್ರೀಮತಿ ಜ್ಯೂಲಿ ವಾಜ್ ಮರೋಳ್, ಶ್ರೀಮತಿ ಫ್ಲೋರಾ ಡಿ’ಸೋಜಾ ಕಲ್ಮಾಡಿ (ಜೆರಿಮೆರಿ), ಶ್ರೀಮತಿ ಶಾಂತಿ ಬಾರ್ಬೊಜಾ ಬೊಳಿಯೆ, ಗ್ರೇಗರಿ ಸಿಕ್ವೇರಾ ನಿಡ್ಡೋಡಿ, ಪೀಟರ್ ಪಾಯ್ಸ್ ಬಸ್ರೂರು, ಪೀಟರ್ ಕುಟಿನ್ಹೋ ಮುಂಡ್ಕೂರು, ಲವಿನಾ ಡಿಸೋಜಾ ಜೆರಿಮೆರಿ ಮತ್ತು ಪ್ರಮುಖ ಪಾತ್ರದಲ್ಲಿ ಫ್ರಾನ್ಸಿಸ್ ನಟಿಸಿ ನಾಟಕಾಭಿಮಾನಿಗಳ ಪ್ರಶಂಸೆಗೆ ಪಾತ್ರರಾದರು.
ವೇದಿಕೆಯಲ್ಲಿ ‘ಕೊಂಕಣಿ ಫ್ರೆಂಡ್ಸ್ ಜೆರಿಮೆರಿ’ ಇದರ ಜೋನ್ ಮಸ್ಕರೇನ್ಹಾಸ್, ಎಲಿಯಾಸ್ ಪಿಂಟೊ, ಜೋನ್ ರೋಡ್ರಿಗಸ್, ರೋನಿ ಒಲಿವೆರಾ, ಡಾ| ಮಮತಾ ಚೆಟ್ಟಿಯಾರ್, ಮೆಲ್‌ರಾಯ್ ಅಲ್ಫೊನ್ಸೊ, ಆಟನಿ ಚೆಟ್ಟಿಯಾರ್, ಮೆರ್ಶಿನ್ ಮಿರಾಂಡಾ, ಅನಿತಾ ಫೆರ್ನಾಂಡಿಸ್, ಗ್ರೇಸಿ ತಾವ್ರೊ ಹಾಜರಿದ್ದು ಅತಿಥಿಗಳಿಗೆ ಗೌರವಿಸಿದರು. ಜೊವಿಲಾ ಡಿ’ಸೋಜಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಫ್ಲೋರಾ ಡಿ’ಸೋಜಾ ವಂದಿಸಿದರು.
ಇದೇ ಮೇ.೧೦ನೇ ಭಾನುವಾರ ಸಂಜೆ ೭:೦೦ ಗಂಟೆಗೆ ಅಂಧೇರಿ ಪೂರ್ವದ ಮರೋಳ್ (ವಿಜಯನಗರ) ಪಲೋಟ್ಟಿ ಚರ್ಚ್‌ನ ತೆರೆದ ಸಭಾಂಗಣದಲ್ಲಿ ಫ್ರಾಂಕ್ ಪ್ರೊಡಕ್ಷನ್ ಈ ನಾಟಕದ ೯೯ನೇ ಪ್ರಯೋಗ ಪ್ರದರ್ಶಿಸಲಿದೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now