
ನೇಮಕಾತಿಗಾಗಿ ಸೆ. 28ರಂದು ನಗರದ ಮಂಗಳಾ ಸ್ಟೇಡಿಯಂನಲ್ಲಿ ನಡೆದ ದೇಹದಾರ್ಡ್ಯ ಪರೀಕ್ಷೆ ವೇಳೆ ಯುವಕನೊಬ್ಬ ನಕಲಿ ಆನ್ಲೈನ್ ಹಾಲ್ ಟಿಕೆಟ್ ತೋರಿಸಿ ವಂಚಿಸಲು ಯತ್ನಿಸಿದ ಘಟನೆ ಸಂಭವಿಸಿದೆ. ಕಡಬ ತಾಲೂಕಿನ ಕೋಡಿಂಬಾಳ ಬೆದ್ರಾಜೆ ನಿವಾಸಿ ಯಜೇಶ್ ಬಿ. ಜೆ. ರೈ (23) ಬಂಧಿತ ಆರೋಪಿ.
ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯ ಸಹಾಯಕ ಆಡಳಿತಾಧಿಕಾರಿ ಪ್ರಕಾಶ್ ರುದ್ರಪ್ಪ ಹೂವಿನ ಅವರು ನೀಡಿದ ದೂರಿ ನಂತೆ ಮಂಗಳೂರಿನ ಬರ್ಕೆ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. ಯುವಕನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now