ಬ್ಯಾರಿಸ್ ಬಿಎಡ್ ಕಾಲೇಜು ಕುಂದಾಪುರದಲ್ಲಿ ಶಿರ್ವ ಪೊಲೀಸರಿಂದ ಡ್ರಗ್ಸ್ ಮಾಹಿತಿ ಶಿಬಿರ

ಬ್ಯಾರಿಸ್ ಬಿಎಡ್ ಕಾಲೇಜು ಕುಂದಾಪುರದಲ್ಲಿ ಶಿರ್ವ ಪೊಲೀಸರಿಂದ ಡ್ರಗ್ಸ್ ಮಾಹಿತಿ ಶಿಬಿರ
0Shares

ಕುಂದಾಪುರ: ಬ್ಯಾರಿಸ್ ಬಿ ಎಡ್ ಕಾಲೇಜಿನಲ್ಲಿ ಶಿರ್ವ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಮಂಜುನಾಥ ಅಡಿಗ ರವರಿಂದ ಮಾಹಿತಿ ಶಿಬಿರ ನೆರವೇರಿತು. ಶಿಬಿರದಲ್ಲಿ ಸುಮಾರು 125 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು

ಬಿ.ಎಡ್ ಓದುತ್ತಿರುವ ನೀವು ಭವಿಷ್ಯದ ಶಿಕ್ಷಕರು, ಮಕ್ಕಳಿಗೆ ಮಾರ್ಗದರ್ಶಕರಾಗಿರುವುದರಿಂದ ಮಾದಕ ದ್ರವ್ಯಗಳ ಬಗ್ಗೆ ಸ್ಪಷ್ಟ ಅರಿವು ಇರಬೇಕು.

1. ಸಾಮಾನ್ಯ ಮಾದಕ ದ್ರವ್ಯಗಳು

  • ಗಾಂಜಾ, ಚರಸ್: ನೆನಪಿನ ಶಕ್ತಿ, ಗಮನ ಕಡಿಮೆ ಮಾಡುತ್ತದೆ
  • ತಂಬಾಕು, ಗುಟ್ಕಾ: ಬಾಯಿ ಕ್ಯಾನ್ಸರ್, ಉಸಿರಾಟದ ತೊಂದರೆ
  • ಮದ್ಯ: ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಹಾಳು ಮಾಡುತ್ತದೆ
  • ಡ್ರಗ್ಸ್/ಇಂಜೆಕ್ಷನ್: HIV, ಹೆಪಟೈಟಿಸ್ ನಂತಹ ರೋಗಗಳ ಅಪಾಯ

2. ಯಾಕೆ ವಿದ್ಯಾರ್ಥಿಗಳು ಸಿಲುಕಿಕೊಳ್ಳುತ್ತಾರೆ?
ಪರೀಕ್ಷೆಯ ಒತ್ತಡ, “ಸ್ನೇಹಿತರು ಹೇಳ್ತಾರೆ ಅಂತ”, ಕ್ಯೂರಿಯಾಸಿಟಿ, ಖಿನ್ನತೆ. ಮೊದಲ ಸಲ ಟ್ರೈ ಮಾಡಿದ್ರೂ ಅದಕ್ಕೆ ಅಡಿಕ್ಟ್ ಆಗಬಹುದು.

3. ಶಿಕ್ಷಕರಾಗಿ ನಿಮ್ಮ ಪಾತ್ರ

  • ಮಕ್ಕಳಿಗೆ “ಇಲ್ಲ” ಅಂತ ಹೇಳೋ ಧೈರ್ಯ ಕಲಿಸಿ
  • ಸ್ಟ್ರೆಸ್ ಮ್ಯಾನೇಜ್‌ಮೆಂಟ್ ಟೆಕ್ನಿಕ್ ಹೇಳಿಕೊಡಿ: ಯೋಗ, ಓದಿನ ವೇಳಾಪಟ್ಟಿ, ಮಾತಾಡೋ ಸ್ನೇಹಿತರು
  • ಯಾರಾದರೂ ಸಿಲುಕಿದ್ರೆ ಜಡ್ಜ್ ಮಾಡದೆ ಕೌನ್ಸೆಲಿಂಗ್‌ಗೆ ಕಳಿಸಿ ಎಂದು ಪೊಲೀಸ್ ಹೆಡ್ ಕಾನ್ಸ್ಟೇಬಲ್ ಮಂಜುನಾಥ ಅಡಿಗ ವಿದ್ಯಾರ್ಥಿಗಳಿಗೆ ತಿಳಿಸಿದರು ಕಾಲೇಜಿನ ಪ್ರಾಂಶುಪಾಲರಾದ ಡಾ. ಫಿರ್ದೋಸ್,
    ಸಹಾಯಕ ಪ್ರಾಧ್ಯಾಪಕ. ಪ್ರವೀಣ್ ಕುಮಾರ್ ಪಿ,
    ಸಹಾಯಕ ಪ್ರಾಧ್ಯಾಪಕ. ಅನಂತ್ ಭಟ್, ಡ್ರಗ್ಸ್ ಎವರ್ನೆಸ್ ಶಿಬಿರದಲ್ಲಿ ಪಾಲ್ಗೊಂಡಿದ್ದರು

ನಮ್ಮ ವರದಿಗಾರರು

ವಿಲ್ಸನ್ ಡಿಸೋಜ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now