
ದಿನಾಂಕ: 18-03-2026 ರ ಸಂಜೆ 08:30 ಗಂಟೆಯಿಂದ ದಿನಾಕ:19-03-2026 ರ ಬೆಳಿಗ್ಗೆ 10:00 ಗಂಟೆಯ ಮದ್ಯಾವಧಿಯಲ್ಲಿ ಕುಂದಾಪುರ ತಾಲೂಕು ಸಂಗಮ್ ಜಂಕ್ಷನ್ ಹತ್ತಿರ ವಿರುವ ಜೆ ಎಮ್ ಜೆ ವಿಲ್ಲಾ ಎಂಬ ಹೆಸರಿನ ಪಿರ್ಯಾದಿದಾರರ ಮನೆಯಲ್ಲಿ ಮನೆಯ ಎದುರಿನ ಬಾಗಿಲಿನ ಚೀಲಕವನ್ನು ಮುರಿದು ಮನೆಯ ಒಳಗೆ ಪ್ರವೇಶಿಸಿ ಮನೆಯಲ್ಲಿದ್ದ ಕಪಾಟಿನ ಬೀಗ ತೆಗೆದು ಕಪಾಟಿನಲ್ಲಿಟ್ಟಿದ್ದ ರೂಪಾಯಿ 10000/- ನಗದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ, ಎಂಬುದಾಗಿ ಕುಂದಾಪುರ ಪೊಲೀಸ್ ಠಾಣಾ ಅಪರಾದ ಕ್ರಮಾಂಕ : 22/2026 ಕಲಂ: 331(3) 331(4) 305 BNS ರಂತೆ ಪ್ರಕರಣ ದಾಖಲಾಗಿರುತ್ತದೆ. ಹಾಗೂ ಹಾಗೂ ಅದೇ ದಿನ ದಿನಾಂಕ: 18-03-2026 ರಂದು ಸಂಜೆ 7:45 ಗಂಟೆಯಿಂದ ದಿನಾಂಕ:19-03-2026 ಬೆಳಿಗ್ಗೆ 8:15 ಗಂಟೆಯ ಮದ್ಯಾವದಧಿಯಲ್ಲಿ ಕುಂದಾಪುರ ತಾಲೂಕು ಕಸಬ ಗ್ರಾಮದ ವಿನಯ್ ಆಸ್ಪತ್ರೆಯ ಸಮೀಪದ ಪಾರ್ಕಿಂಗ್ ಸ್ಥಳದಲ್ಲಿ ಮೋಟಾರು ಸೈಕಲ್ ಅನ್ನು ನಿಲ್ಲಿಸಿ ಹೋಗಿದ್ದು ದಿನಾಂಕ 19-03-2026 ರಂದು ಬೆಳಿಗ್ಗೆ 8:15ಗಂಟೆಯ ಸಮಯಕ್ಕೆ ವಿನಯ್ ಆಸ್ಪತ್ರೆಯ ಸಮೀಪದ ಪಾರ್ಕಿಂಗ್ ಸ್ಥಳದಲ್ಲಿ ಹೋಗಿ ನೋಡಲಾಗಿ ಪಿರ್ಯಾದಿದಾರರ ಬಾಬ್ತು ಮೋಟಾರು ಸೈಕಲ್ ಇಲ್ಲದೇ ಇದ್ದು ಯಾರೋ ಕಳ್ಳರು ದಿನಾಂಕ: 18-03-2026 ರಂದು ಸಂಜೆ 7:45 ಗಂಟೆಯಿಂದ ದಿನಾಂಕ:19-03-2026 ಬೆಳಿಗ್ಗೆ 8:15 ಗಂಟೆಯ ಮದ್ಯಾವಧಿಯಲ್ಲಿ KA20V2868 ಹಿರೋ ಹೊಂಡ ಮೋಟಾರು ಸೈಕಲನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಮೋಟಾರು ಸೈಕಲ್ ಅಂದಾಜು ಮೌಲ್ಯ 20,000/- ರೂ ಆಗಿರುತ್ತದೆ ಎಂಬುವುದಾಗಿ ಕುಂದಾಪುರ ಪೊಲೀಸ್ ಠಾಣಾ ಅಪರಾದ ಕ್ರಮಾಂಕ : 23/2025 ಕಲಂ 303(2) BNS ರಂತೆ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣದ ತನಿಖೆಯ ಸಂಬಂಧ ಹೆಚ್ ಡಿ ಕುಲಕರ್ಣಿ, ಪೋಲೀಸ್ ಉಪಾಧೀಕ್ಷಕರು ಕುಂದಾಪುರ ಹಾಗೂ ಕುಂದಾಫುರ ಪೊಲೀಸ್ ಠಾಣಾ ನಿರೀಕ್ಷಕರಾದ ಜಯರಾಮ್ ಡಿ ಗೌಡ ರವರ ನಿರ್ದೇಶನದಂತೆ ಠಾಣಾ ಪಿ.ಎಸ್.ಐ ರವರಾದ ನಂಜಾನಾಯ್ಕ್ ಎನ್(ಕಾ&ಸು), ಪಿ.ಎಸ್.ಐ ಶ್ರೀಮತಿ ಪುಷ್ಪ (ತನಿಖೆ), ಹಾಗೂ ಸಿಬ್ಬಂದಿಗಳಾದ ಮೋಹನ ಹೆಚ್‌ಸಿ, ಸಂತೋಷ ಹೆಚ್‌ಸಿ, ಪ್ರೀನ್ಸ್, ಮಹಾಬಲ ಶೆಟ್ಟಿಗಾರ ಹೆಚ್‌ಸಿ, ಸಂತೋಷ ದೇವಾಡಿಗ ಪಿಸಿ, ಘನಶ್ಯಾಮ್ ಪಿಸಿ ರವರ ತಂಡದ ಕಾರ್ಯಚರಣೆಯಲ್ಲಿ, ಆರೋಪಿಯ ಪತ್ತೆಯ ಬಗ್ಗೆ ಆತನ ವಿಳಾಸವಾದ ಗುಜರಾತ್ ರಾಜ್ಯದ ಅಮ್ರೇಲಿ ಜಿಲ್ಲೆಯ ಸಾವರ್ ಕುಂಡ್ಲ ಎಂಬಲ್ಲಿಗೆ ತೆರಳಿ ಪತ್ತೆಗೆ ಪ್ರಯತ್ನಿಸಿದಲ್ಲಿ ಆತನು ಉತ್ತರಕನ್ನಡ ಜಿಲ್ಲೆಯ ಮುರಡೇಶ್ವರದಲ್ಲಿ ಇರುವ ಮಾಹಿತಿಯ ಮೇರೆಗೆ ಮುರಡೇಶ್ವರದಲ್ಲಿ ವಶಕ್ಕೆ ಪಡೆದು ವಿಚಾರಣೆ ಮಾಡಿದ ಸಮಯ ಕುಂದಾಪುರದಲ್ಲಿ ಮನೆ ಹಾಗೂ ಬೈಕ್ ಕಳ್ಳತನ ಮಾಡಿರುವುದಾಗಿ ತಿಳಿಸಿರುತ್ತಾನೆ. ಇತನಿಂದ ಕಳುವು ಮಾಡಿದ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ನಮ್ಮ ವರದಿಗಾರರು
ವಿಲ್ಸನ್ ಡಿಸೋಜ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now