
ದಿನಾಂಕ 14/09/2026 ರಂದು ಗಣೇಶ ಚತುರ್ಥಿಯ ದಿನ ಕುಂಭಾಶಿ ಶ್ರೀ ವಿನಾಯಕ ದೇವಸಾನದ ಒಳಗೆ ಜನ ಜಂಗುಳಿಯ ಮಧ್ಯೆ ಪ್ರದಕ್ಷಿಣೆ ಬರುತ್ತಿದ್ದ ಬೈಂದೂರು ತಾಲೂಕು ನಾಡ ಗುಡ್ಡೆಯಂಗಡಿ ನಿವಾಸಿ ಶ್ರೀಮತಿ ಮುತ್ತು, ಪ್ರಾಯ: 75 ವರ್ಷ, ಇವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಯಾರೋ ದುಷ್ಕರ್ಮಿಗಳು ಸುಲಿಗೆ ಮಾಡಿಕೊಂಡು ಹೋಗಿದ್ದು, ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖಾ ಸಮಯ ಈ ಪ್ರಕರಣದಲ್ಲಿ ಚಿನ್ನದ ಸರವನ್ನು ದೋಚಿಕೊಂಡು ಹೋದ ತಮಿಳುನಾಡು ಮೂಲದ 1. ವಲ್ಲಿಯಮ್ಮ 2. ದೇವಿ @ ತಿಲೋತ್ತಮ 3. ಪೊನ್ನಿ ಎಂಬವರನ್ನು ಕೇರಳ ರಾಜ್ಯದ ವಯನಾಡು ಜಿಲ್ಲೆಯ ಮಾನಂತವಾಡಿ ತಾಲೂಕಿನ ತಿರುನೆಲ್ಲಿ ಪೊಲೀಸ್ ಠಾಣೆಯ ಪೊಲೀಸರು ದಸ್ತಗಿರಿ ಮಾಡಿದ್ದು, ಬಳಿಕ ಪೊಲೀಸ್ ಉಪಾಧೀಕ್ಷಕರು ಕುಂದಾಪುರ ಉಪ ವಿಭಾಗರವರ ನಿರ್ಧೇಶನದಂತೆ ಪೊಲೀಸ್ ನಿರೀಕ್ಷಕರು ಕುಂದಾಪುರ ಪೊಲೀಸ್ ಠಾಣೆ ರವರು ತನಿಖೆ ಕೈಗೊಂಡು ಮಾನ್ಯ ನ್ಯಾಯಾಲಯದ ಆದೇಶ ಪಡೆದು ಸದರಿ ಆರೋಪಿತರನ್ನು ಈ ಪ್ರಕರಣಕ್ಕೆ ಸಂಬಂಧಿಸಿ ಕೇರಳದ ವಯನಾಡ್ ಜಿಲ್ಲೆಯ ಮಾನಂತವಾಡಿ ಜೈಲಿನಿಂದ ವಶಕ್ಕೆ ಪಡೆದು ಕುಂದಾಪುರಕ್ಕೆ ತರೆತಂದು ತನಿಖೆ ನಡೆಸಿ ಆರೋಪಿತರು ಸುಲಿಗೆ ಮಾಡಿದ ಸುಮಾರು 2 ಲಕ್ಷ ರೂಪಾಯಿ ಮೌಲ್ಯದ 15.340 ಗ್ರಾಂ ತೂಕದ ಚಿನ್ನದ ಸರವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಪ್ರಕರಣದ ತನಿಖೆಯಲ್ಲಿ ಕುಂದಾಪುರ ಪೊಲೀಸ್ ಠಾಣೆಯ ಪಿ.ಎಸ್.ಐ. ರವರು ಮತ್ತು ಸಿಬ್ಬಂದಿಯವರು ಸಹಕರಿಸಿರುತ್ತಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now