
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಕೊಳಲಗಿರಿ ಯುವ ವಿಚಾರ ವೇದಿಕೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಜರುಗಿತು. ಜಾತ ಬೆಟ್ಟು ಬಿಲ್ಲಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಹಾಗೂ ಸಂಘದ ಸ್ಥಾಪಕ ಅಧ್ಯಕ್ಷರಾದ ಜಯಪ್ರಕಾಶ್ ಸರ್ ಧ್ವಜಾರೋಹಣ ನೆರವೇರಿಸಿದರು. ಅತಿಥಿಗಳಾಗಿ ರಮೇಶ್ ಕರ್ಕೇರಾ ಉಗ್ಗೆಲ್ ಬೆಟ್ಟು, ಸಂಘದ ಅಧ್ಯಕ್ಷರಾದ ಸಂದೀಪ್ ಶೆಟ್ಟಿ ಪ್ರಧಾನ ಕಾರ್ಯದರ್ಶಿ ಸದಾಶಿವ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಸದಸ್ಯರಿಂದ ಒಂದೇ ಮಾತರಂ, ಧ್ವಜ ಗೀತೆ, ರಾಷ್ಟ್ರ ಗೀತೆಯನ್ನು ಹೆಮ್ಮೆಯಿಂದ ಗೌರವಯುತವಾಗಿ ನೆರವೇರಿಸಲಾಯಿತು.
ಪ್ರಧಾನ ಕಾರ್ಯದರ್ಶಿ ಸದಾಶಿವ್ ಕುಮಾರ್ ಸ್ವಾಗತಿಸಿದರು . ಸಾರ್ವಜನಿಕರಿಗಾಗಿ ಹಮ್ಮಿಕೊಂಡ ಕ್ರೀಡಾ ಸ್ಪರ್ಧಾ ವಿಜೇತರ ಬಹುಮಾನದ ಪಟ್ಟಿಯನ್ನು ದಿನೇಶ ಶೆಟ್ಟಿ ವಾಚಿಸಿದರು. ಶಶಿಕುಮಾರ್ ಧನ್ಯವಾದ ನೀಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಜಯಲಕ್ಷ್ಮಿ ಅಮ್ಮುಂಜೆ ನಿರ್ವಹಿಸಿದರು.






Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now