ರಾಷ್ಟ್ರೀಯ ದೇಹಾಂಗದಾನ ಜಾಗೃತಿ ಸಮಿತಿಯ ಉಡುಪಿ ಜಿಲ್ಲಾ ಸಂಚಾಲಕರಾಗಿ ರಮೇಶ ಕರ್ಕೇರ ಉಗ್ಗೆಲ್ಬೆಟ್ಟು ಆಯ್ಕೆ*

ರಾಷ್ಟ್ರೀಯ ದೇಹಾಂಗದಾನ ಜಾಗೃತಿ ಸಮಿತಿಯ ಉಡುಪಿ ಜಿಲ್ಲಾ ಸಂಚಾಲಕರಾಗಿ ರಮೇಶ ಕರ್ಕೇರ ಉಗ್ಗೆಲ್ಬೆಟ್ಟು ಆಯ್ಕೆ*
0Shares

ರಾಷ್ಟ್ರೀಯ ದೇಹಾಂಗದಾನ ಜಾಗೃತಿ ಸಮಿತಿಯ ಉಡುಪಿ ಜಿಲ್ಲಾ ಸಂಚಾಲಕರಾಗಿ ರಮೇಶ ಕರ್ಕೇರ ಉಗ್ಗೆಲ್ಬೆಟ್ಟು ಆಯ್ಕೆ
ರಾಷ್ಟ್ರೀಯ ದೇಹಾಂಗದಾನ ಜಾಗೃತಿ ಸಮಿತಿಯ ಉಡುಪಿ ಜಿಲ್ಲಾ ಸಂಚಾಲಕರನ್ನಾಗಿ ಸಾಮಾಜಿಕ ಕಾರ್ಯಕರ್ತ, ರಕ್ತದಾನಿ ರಮೇಶ ಕರ್ಕೇರ ಉಗ್ಗೆಲ್ಬೆಟ್ಟು ಇವರನ್ನು ನೇಮಕ ಮಾಡಲಾಗಿದೆ. ನಿರಂತರ ರಕ್ತದಾನ ಮಾಡುತ್ತಾ, ರಕ್ತದಾನ ಶಿಬಿರ ಆಯೋಜಿಸುತ್ತಾ ಕೆಲವು ವರ್ಷಗಳ ಹಿಂದೆಯೇ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ದೇಹದಾನದ ನೋಂದಣಿ ಮಾಡಿಕೊಂಡಿರುವ ಇವರು ರಾಜಕೀಯ, ಧಾರ್ಮಿಕ, ಸಹಕಾರ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ಡು ದೇಹಾಂಗದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಾ ಬಂದಿದ್ದು ಇವರಿಂದ ಪ್ರೇರಿತರಾಗಿರುವ ಕೆಲವು ಮಂದಿ ಅಂಗಾಂಗದಾನಕ್ಕೆ ನೋಂದಾಯಿಸಿಕೊಂಡಿರುತ್ತಾರೆ. “ಈಗಿನ ಪರಿಸ್ಥಿತಿಯಲ್ಲಿ ರಕ್ತದಾನದಂತೆ ಅಂಗಾಂಗದಾನದ ಮಹತ್ವವೂ ಅತಿಯಾಗಿದೆ, ಈ ನಿಟ್ಟಿನಲ್ಲಿ ಜನರಲ್ಲಿ ಅರಿವು, ಜಾಗೃತಿ ಮೂಡಿಸುವ ಕಾರ್ಯ ಇನ್ನಷ್ಟು ಆಗಬೇಕಿದೆ. ಸಹೃದಯಿಗಳ ಸಹಕಾರ ಪ್ರೋತ್ಸಾಹ, ರಾಷ್ಟ್ರೀಯ ದೇಹಾಂಗದಾನ ಸಮಿತಿಯವರ ಮಾರ್ಗದರ್ಶನದಲ್ಲಿ ತನ್ನ ಕೈಲಾದಷ್ಷು ಕೆಲಸ ಮಾಡುವ ವಿಶ್ವಾಸ ವ್ಯಕ್ತಪಡಿಸಿದ ಅವರು ಗುರುತಿಸಿ ಅವಕಾಶ ನೀಡಿದಕ್ಕೆ ಸಮಿತಿಯವರಿಗೆ ಮತ್ತು ತನ್ನ ಸೇವಾ ಚಟುವಟಿಕೆಗಳ ಬಗ್ಗೆ ಪ್ರಕಟಿಸುವ ಸುದ್ದಿ ಮಾಧ್ಯಮಗಳಿಗೂ ಧನ್ಯವಾದ ಸಲ್ಲಿಸಿರುತ್ತಾರೆ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now