
ರಿಚರ್ಡ್ ಡಿಸೋಜ ಮತ್ತು ಅವರ ತಮ್ಮ ಹೆರಾಲ್ಡ್ ಡಿಸೋಜರವರಿಗೆ ಕಾರ್ಕಳ ತಾಲೂಕು ಕಸಬ ಗ್ರಾಮದ ಮಿತ್ತಬೆಟ್ಟು ಹಿರಿಯಂಗಡಿ ಎಂಬಲ್ಲಿ ವಾಸ ಇರುವ ಮನೆಯ ಬಗ್ಗೆ ಹಾಗೂ ಜಾಗದ ಬಗ್ಗೆ ತಕರಾರು ಇದ್ದು, ಇದೇ ವಿಚಾರಕ್ಕೆ ಸಂಬಂದಿಸಿ ದಿನಾಂಕ 02-05-2026 ರಂದು ಸಂಜೆ ಸುಮಾರು 6 ಗಂಟೆಗೆ ಕಾರ್ಕಳ ತಾಲೂಕು ಕಾರ್ಕಳ ಕಸಬ ಗ್ರಾಮದ ಮಿತ್ತಬೆಟ್ಟು ಹಿರಿಯಂಗಡಿ ಎಂಬಲ್ಲಿನ ಜಾಗದಲ್ಲಿ ಹೆರಾಲ್ಡ್ ಡಿಸೋಜ ಮತ್ತು ರಿಚಾರ್ಡ್ ಡಿಸೋಜ ಇವರೊಳಗೆ ಗಲಾಟೆ ಆಗಿದ್ದು, ಆ ಸಮಯದಲ್ಲಿ ಆರೋಪಿ ಹೆರಾಲ್ಡ್ ಡಿ ಸೋಜನು ರಿಚಾರ್ಡ್ ಡಿಸೋಜರವರಿಗೆ ಮರದ ರೀಪು ಅಥವಾ ಯಾವುದೋ ಆಯುಧದಿಂದ ಹೊಡೆದು ಕೊಲೆ ಮಾಡಿರುವುದಾಗಿದೆ ಎಂದು ಮೃತರ ಹೆಂಡತಿ ಜೆಸಿಂತ ಡಿಸೋಜ ಇವರು ದಿನಾಂಕ 03-05-2026 ರಂದು ನೀಡಿದ ಪಿರ್ಯಾದಿಯಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ: 64/2026 ಕಲಂ. 103 ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಾಗಿದ್ದು, ಪ್ರಕರಣ ಆರೋಪಿತನಾದ ಹೆರಾಲ್ಡ್ ಡಿಸೋಜ ಎಂಬಾತನನ್ನು ಡಿವೈಎಸ್ ಪಿ ವಿಜಯಪ್ರಸಾದ್. ಕೆ.ಎಸ್.ಪಿಎಸ್ ರವರ ಮಾರ್ಗದರ್ಶನದಂತೆ ಸಿಪಿಐ ಅಜ್ಮತ್ ಆಲೀ ಪ್ರಭಾರ ಪಿ.ಐ ಕಾರ್ಕಳ ನಗರ ಠಾಣೆ, ಪಿಎಸ್ ಐ ಪ್ರಸನ್ನ.ಎಂ.ಎಸ್ ಕಾರ್ಕಳ ಗ್ರಾಮಾಂತರ ಠಾಣೆ, ಪಿಎಸ್ ಐ ಮುರುಳೀಧರ್ ನಾಯ್ಕ್ ಹಾಗೂ ಪಿಎಸ್ ಐ ಶಿವಕುಮಾರ್ ಕಾರ್ಕಳ ನಗರ ಠಾಣೆ ಹಾಗೂ ಸಿಬ್ಬಂದಿಗಳಾದ ಎಎಸ್ ಐ ಶೇಖರ್ ನಾಯ್ಕ, ಎಎಸ್ ಐ ಮೂರ್ತಿ, ರಂಜಿತ್, ಶ್ರೀನಿವಾಸ್, ಮಹಾಂತೇಶ್, ಗೋಪಾಲಕೃಷ್ಣ, ಗಜಾನಾಯ್ಕ್, ಶಶಿ, ಸಂತೋಷ ಇವರುಗಳು ಆರೋಪಿಯನ್ನು ಪತ್ತೆಮಾಡಿದ್ದು, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು .
ನಮ್ಮ ವರದಿಗಾರರು
ವಿಲ್ಸನ್ ಡಿಸೋಜ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now