ಹೆಬ್ರಿ ಅನಂತನಗರದಲ್ಲಿ ಮನೆ ಕಳ್ಳತನ ಮಾಡಿ ಚಿನ್ನಾಭರಣ ಕಳವು ಮಾಡಿದ 3 ಜನ ಅಂತರ್‌ರಾಜ್ಯ ಕಳ್ಳರ ಬಂಧನ

ಹೆಬ್ರಿ ಅನಂತನಗರದಲ್ಲಿ ಮನೆ ಕಳ್ಳತನ ಮಾಡಿ ಚಿನ್ನಾಭರಣ ಕಳವು ಮಾಡಿದ 3 ಜನ ಅಂತರ್‌ರಾಜ್ಯ ಕಳ್ಳರ ಬಂಧನ
0Shares

ಹೆಬ್ರಿ ಅನಂತನಗರದಲ್ಲಿ ಮನೆ ಕಳ್ಳತನ ಮಾಡಿ ಚಿನ್ನಾಭರಣ ಕಳವು ಮಾಡಿದ 3 ಜನ ಅಂತರ್‌ರಾಜ್ಯ ಕಳ್ಳರ ಬಂಧನ

ದಿನಾAಕ 25/05/2026 ರಂದು ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಅನಂತನಗರದಲ್ಲಿರುವ ಮನೆಯಲ್ಲಿ, ರಾತ್ರಿ ಸಮಯ ಮನೆಯವರು ನಿದ್ರೆಯಲ್ಲಿದ್ದಾಗ ಮನೆಯ ಹಿಂಭಾಗದ ಕಿಟಕಿಯ ಕೊಂಡಿಯನ್ನು ಮೀಟಿ ಒಳಪ್ರವೇಶಿಸಿ ಮನೆಯ ಒಂದನೇ ಮಹಡಿಯಲ್ಲಿದ್ದ ಕೋಣೆಯ ಬೀರುವಿನಲ್ಲಿದ್ದ ಸುಮಾರು 59,97,000/- ರೂ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಾರ್ಕಳ ವೃತ್ತ ನಿರೀಕ್ಷಕರಾದ ಮಂಜಪ್ಪ ಡಿ.ಆರ್. ಹಾಗೂ ಕಾರ್ಕಳ ಪ್ರಭಾರ ವೃತ್ತ ನಿರೀಕ್ಷಕರಾದ ರಾಘವೇಂದ್ರ ಆರ್ (ಪಿಐ ಮಹಿಳಾ ಠಾಣೆ) ರವರ ನೇತೃತ್ವದಲ್ಲಿ ಹೆಬ್ರಿ ಠಾಣಾ ಪಿಎಸ್‌ಐ(ಕಾ& ಸು) ರವಿ ಬಿ. ಕೆ ಮತ್ತು ಪಿಎಸ್‌ಐ ಚಂದ್ರ ಎ ಕೆ (ತನಿಖೆ) ಕಾರ್ಕಳ ಗ್ರಾಮಾಂತರ ಠಾಣಾ ಪಿಎಸ್‌ಐ ಎಂ. ಎಸ್ ಪ್ರಸನ್ನ ಶಿರ್ವ ಠಾಣಾ ಪಿಎಸ್‌ಐ ಮಂಜುನಾಥ ಮರಬದ ಸಿಬ್ಬಂದಿಯವರಾದ ಹೆಬ್ರಿ ಠಾಣೆಯ ರಾಜ್ ಕುಮಾರ್, ಅವಿನಾಶ್, ಕಿರಣ್, ಮಿಥುನ್, ರಘು ಮೊಗವೀರ ಅಜೆಕಾರು ಠಾಣೆಯ ಸತೀಶ್ ಕಾರ್ಕಳ ಗ್ರಾಮಾಂತರ ಠಾಣೆಯ ಸಿದ್ದರಾಯಪ್ಪ, ಸಂತೋಷ್ ಹಾಗೂ ಕಾರ್ಕಳ ನಗರ ಠಾಣೆಯ ಸಂತೋಷ್ ರಂಜಿತ್, ಕಾರ್ಕಳ ವೃತ್ತ ಕಛೇರಿಯ ಸಿಬ್ಬಂದಿ ಶಶಿಕುಮಾರ್ ಕಾರ್ಕಳ ಉಪಾದೀಕ್ಷಕರ ಕಛೇರಿಯ ಸಿಬ್ಬಂದಿ ಶಿವಾನಂದ, ಪಡುಬಿದ್ರೆ ಠಾಣೆಯ ಎಎಸ್‌ಐ ರಾಜೇಶ್, ಅನ್ವರ್ ಆಲಿ, ಕೃಷ್ಣ ಪ್ರಸಾದ್, ಸಂದೇಶ ಮತ್ತು ರಾಘು, ಹಾಗೂ ಜಿಲ್ಲಾ ಪೊಲೀಸ್‌ ಅಧೀಕ್ಷಕರ ಕಛೇರಿಯ ದಿನೇಶ್ ಮತ್ತು ನಿತಿನ್‌ ರವರ ತಂಡ ಆರೋಪಿಗಳಾದ 1. ರಬ್ದಿನ್ ಸಲೀಂ, ಪ್ರಾಯ:51 ವರ್ಷ, ತಂದೆ:ನಾಗೂರ್ ಪಿಚೈ, ವಾಸ:ಚೇರಿ ಅಲಂಬಾಡಿ ಹೌಸ್, ಅಲಂಬಾಡಿ ಅಂಚೆ, ಮುಟೈ ತೋಡ್ ಗ್ರಾಮ, ಚೆರ್ಕಳ ತಾಲೂಕು, ಕಾಸರಗೋಡು ಜಿಲ್ಲೆ, ಕೇರಳ ರಾಜ್ಯ. ಖಾಯಂ ವಿಳಾಸ:17/19, ಅರುಣಾಚಲಂ ಕಾಲೋನಿ, ಕಾರಂಬಕೂಮ್, ಕೊರುರ್ ಅಂಚೆ, ಅಂಬತೂರು ತಾಲೂಕು, ತಿರುವೊಳ್ಳುರು ಜಿಲ್ಲೆ, ತಮಿಳುನಾಡು ರಾಜ್ಯ. 2) ಹರೀಶ್ ಶೆಟ್ಟಿ, ಪ್ರಾಯ:40 ವರ್ಷ, ತಂದೆ: ಗೋಪಾಲ ಶೆಟ್ಟಿ, ವಾಸ: ಮಿಜಾರು ಗ್ರಾಮ, ಬಡಗ ಮಿಜಾರು ಅಂಚೆ, ಮೂಡುಬಿದ್ರೆ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ. 3) ಸಫಾನ್, ಪ್ರಾಯ:32 ವರ್ಷ, ತಂದೆ:ಅಬ್ದುಲ್ ರೆಹಮಾನ್, ವಾಸ:ಚೆನಡ್ಕ, ನೆಲ್ಲಿಕಟ್ಟೆ, ನೆಕ್ರಾಜೆ ಗ್ರಾಮ, ಕಾಸರಗೋಡು ತಾಲೂಕು, ಕೇರಳ ರಾಜ್ಯ. ಎಂಬುವರನ್ನು ದಸ್ತಗಿರಿ ಮಾಡಿ ಒಟ್ಟು ಅಂದಾಜು ರೂ 37,87,800/- ಮೌಲ್ಯದ ಚಿನ್ನದ ಗಟ್ಟಿ ಮತ್ತು ಬೆಳ್ಳಿಯ ಆಭರಣಗಳನ್ನು ಹಾಗೂ 4 ಲಕ್ಷ ಮೌಲ್ಯದ 1 ಆಲ್ಟೋ ಕಾರನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ತಲೆ ಮರೆಸಿಕೊಂಡಿರುವ ಮತ್ತೊಬ್ಬ ಪ್ರಕಾಶ್ ಮೂಡಬಿದ್ರೆಯವನ ಪತ್ತೆ ಕಾರ್ಯ ಮುಂದುವರಿದಿರುತ್ತದೆ.

ದಸ್ತಗಿರಿ ಮಾಡಿದ ಆರೋಪಿತರ ಮೇಲೆ ಕೇರಳ, ಕಾಸರಗೋಡು, ಕಾರವಾರ, ಮಂಗಳೂರು, ಮೂಡಬಿದ್ರೆಯಲ್ಲಿ ಸುಲಿಗೆ, ಕೊಲೆ, ಹಲ್ಲೆ ಮತ್ತು ಮಾದಕ ವಸ್ತು ಸೇವನೆಯ ಪ್ರಕರಣಗಳು ದಾಖಲಾಗಿರುತ್ತವೆ.

ನಮ್ಮ ವರದಿಗಾರರು

ವಿಲ್ಸನ್ ಡಿಸೋಜ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now