ಹೆಬ್ರಿಯಲ್ಲಿ ಭಾರೀ ಕಳ್ಳತನ: 60 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ ಖದೀಮರು

ಹೆಬ್ರಿಯಲ್ಲಿ ಭಾರೀ ಕಳ್ಳತನ: 60 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ ಖದೀಮರು
0Shares

ದಿನಾಂಕ 24/05/2026 ರಂದು ಪಿರ್ಯಾದಿ ಕೀರ್ತನ ಪ್ರಭು (34), ಹೆಬ್ರಿ ಗ್ರಾಮ ಇವರು ಬೆಳಿಗ್ಗೆ 06:45 ಗಂಟೆಗೆ ಎದ್ದು ನೋಡುವಾಗ ಮನೆಯ ಒಳಗೆ ಹಿಂಭಾಗ ಮತ್ತು ಎದುರು ಬಾಗಿಲು ತೆರೆದುಕೊಂಡಿದ್ದು ಹಾಲ್‌ ಬಳಿ ಇದ್ದ ಗ್ರಾಡ್ರೇಜ್‌ ಬಾಗಿಲು ತೆರೆದುಕೊಂಡಿದ್ದು ಕಳವು ಆಗಿರುವ ಬಗ್ಗೆ ಸಂದೇಹಗೊಂಡು ಮನೆಯ 1ನೇ ಮಹಡಿಯಲ್ಲಿದ್ದ ಮಲಗುವ ಕೋಣೆಯಲ್ಲಿ ನೋಡಲಾಗಿ ಕಬ್ಬಿಣದ ಗಾಡ್ರೇಜ್‌ ಬಾಗಿಲು ಲಾಕರ್‌ ತೆರೆದುಕೊಂಡಿದ್ದು ಯಾರೋ ಕಳ್ಳರು ಮನೆಯ ಹಿಂಭಾಗದ ಕಿಟಕಿಯ ಚಿಲಕದ ಕೊಂಡಿಯನ್ನು ಮೀಟಿ ತೆಗೆದು ಮನೆಯ 1ನೇ ಮಹಡಿಯಲ್ಲಿದ್ದ ಚಿನ್ನ , ಬೆಳ್ಳಿ ಹಾಗೂ ಇತರ ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಅಂದಾಜು ಮೌಲ್ಯ 59,97,000/- ರೂಪಾಯಿ ಆಗಿರುತ್ತದೆ.

ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 25/2026 ಕಲಂ: 331(4), 305 BNS ರಂತೆ ಪ್ರಕರಣ ದಾಖಲಾಗಿರುತ್ತದೆ. ‌

ನಮ್ಮ ವರದಿಗಾರರು

ವಿಲ್ಸನ್ ಡಿಸೋಜ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now