ಗಾಡ್ ಪ್ರಾಮಿಸ್” ಚಿತ್ರದ ಚಿತ್ರೀಕರಣ ಪೂರ್ಣ – ಆನೆಗುಡ್ಡೆ ದೇವಸ್ಥಾನದಲ್ಲಿ ಮೂಡು ಗಣಪತಿ ಪೂಜೆ

ಗಾಡ್ ಪ್ರಾಮಿಸ್” ಚಿತ್ರದ ಚಿತ್ರೀಕರಣ ಪೂರ್ಣ – ಆನೆಗುಡ್ಡೆ ದೇವಸ್ಥಾನದಲ್ಲಿ ಮೂಡು ಗಣಪತಿ ಪೂಜೆ

0Shares

God Promiise ಚಿತ್ರದ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡ ಹಿನ್ನೆಲೆ, ಚಿತ್ರತಂಡವು ಕುಂದಾಪುರ ಸಮೀಪದ ಪ್ರಸಿದ್ಧ Anegudde Vinayaka Temple ದೇವಾಲಯದಲ್ಲಿ ವಿಶೇಷ ಮೂಡು ಗಣಪತಿ ಪೂಜೆಯನ್ನು ನೆರವೇರಿಸಿತು.

ಈ ಚಿತ್ರಕ್ಕೆ ಕಥೆ, ನಿರ್ದೇಶನ ಹಾಗೂ ನಾಯಕನಾಗಿ ಸುಚನ್ ಶೆಟ್ಟಿ ಕಾರ್ಯನಿರ್ವಹಿಸಿದ್ದು, ಕುಟುಂಬ, ನಂಬಿಕೆ ಹಾಗೂ ಕರಾವಳಿ ಭಾಗದ ಸಂಸ್ಕೃತಿಯನ್ನು ಒಳಗೊಂಡ ವಿಭಿನ್ನ ಮನರಂಜನಾ ಕಥಾಹಂದರವನ್ನು ಹೊಂದಿದೆ.

ಚಿತ್ರೀಕರಣ ಪೂರ್ಣಗೊಂಡ ಸಂತಸದಲ್ಲಿ ನಡೆದ ಪೂಜೆಯಲ್ಲಿ ಸುಚನ್ ಶೆಟ್ಟಿ, ಪ್ರಶಾಂತ್ ಸಿದ್ದಿ, ನಾಗರಾಜ್ ಬೈಂದೂರು, ನಿರ್ಮಾಪಕರಾದ ಮಹೇಂದ್ರ ಶೆಟ್ಟಿ, ಸಂಕಲನಕಾರ ನವೀನ್ ಶೆಟ್ಟಿ, ಕರಣ್ ಕುಂದರ್, ಕೃಷ್ಣ ಗುರೂಜಿ, ಗುರುಪ್ರಸಾದ್ ಶೆಟ್ಟಿ ಹಾಗೂ ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು.

ಕುಂದಾಪುರ ಹಾಗೂ ಸುತ್ತಮುತ್ತಲಿನ ಸುಂದರ ಪ್ರದೇಶಗಳಲ್ಲಿ ನಡೆದ ಚಿತ್ರೀಕರಣ ಇದೀಗ ಸಂಪೂರ್ಣವಾಗಿ ಮುಕ್ತಾಯಗೊಂಡಿದ್ದು, ಚಿತ್ರವು ಪೋಸ್ಟ್ ಪ್ರೊಡಕ್ಷನ್ ಹಂತಕ್ಕೆ ಕಾಲಿಟ್ಟಿದೆ. ಡಬ್ಬಿಂಗ್, ಸಂಗೀತ, ಸಂಕಲನ ಸೇರಿದಂತೆ ಇತರೆ ತಾಂತ್ರಿಕ ಕಾರ್ಯಗಳು ಭರದಿಂದ ಸಾಗುತ್ತಿವೆ.

ಚಿತ್ರದ ಫಸ್ಟ್ ಲುಕ್, ಟೀಸರ್ ಹಾಗೂ ಹಾಡುಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ಯೋಜನೆ ಇದ್ದು, “ಗಾಡ್ ಪ್ರಾಮಿಸ್” ಚಿತ್ರವು ಈ ಅಕ್ಟೋಬರ್‌ನಲ್ಲಿ ರಾಜ್ಯಾದ್ಯಂತ ಹಾಗೂ ವಿದೇಶಗಳಲ್ಲೂ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

– ಗಾಡ್ ಪ್ರಾಮಿಸ್ ಚಿತ್ರತಂಡ

ನಮ್ಮ ವರದಿಗಾರರು

ಸ್ಟೀವನ್ ಕುಲಾಸೊ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now