ನಮ್ಮಕರ್ನಾಟಕ ಸೇನೆ : ಉಡುಪಿ ಮಹಿಳಾ ಘಟಕದ ನೂತನ ಜಿಲ್ಲಾಧ್ಯಕ್ಷರಾಗಿ ಅನಿತಾ ಬಿವಿ ಆಯ್ಕೆ

ನಮ್ಮಕರ್ನಾಟಕ ಸೇನೆ : ಉಡುಪಿ ಮಹಿಳಾ ಘಟಕದ ನೂತನ ಜಿಲ್ಲಾಧ್ಯಕ್ಷರಾಗಿ ಅನಿತಾ ಬಿವಿ ಆಯ್ಕೆ
0Shares

ಬೆಂಗಳೂರು : ಸ್ಯಾಂಕ್ ಹೋಟೆಲ್ ಗಾಂಧಿನಗರ ಇಲ್ಲಿ ರಾಜ್ಯ ಪದಾಧಿಕಾರಿಗಳ ಹಾಗೂ ಜಿಲ್ಲಾಧ್ಯಕ್ಷರ ಸಭೆಯಲ್ಲಿ ರಾಜ್ಯಾಧ್ಯಕ್ಷರಾದ ಎಂ ಬಸವರಾಜ್ ಪಡಕೋಟೆ ಅಧ್ಯಕ್ಷತೆಯಲ್ಲಿ ಜಿಲ್ಲಾಧ್ಯಕ್ಷರು ಹಾಗೂ ದಕ್ಷಿಣ ಕನ್ನಡದ ಉಸ್ತುವಾರಿಗಳಾದ ಸುಜಯ್ ಪೂಜಾರಿಯವರ ಸಮ್ಮುಖದಲ್ಲಿ ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿಯಾದ ಲಕ್ಷ್ಮಿ ಇವರು ನಮ್ಮ ಕರ್ನಾಟಕ ಸೇನೆ ನೂತನ ಉಡುಪಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾಗಿ ಅನಿತಾ ಬಿವಿ ಅವರನ್ನು ಆಯ್ಕೆಮಾಡಲಾಯಿ. ನಂತರ ಅವರಿಗೆ ಶಾಲು ಧರಿಸಿ ಸನ್ಮಾನಿಸಲಾಯಿತು. ನಮ್ಮಕರ್ನಾಟಕ ಸೇನೆಯ ಉಡುಪಿ ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷರು ಹಾಗೂ ದಕ್ಷಿಣ ಕನ್ನಡದ ಉಸ್ತುವಾರಿಯಾಗಿ ಸುಜಯ್ ಪೂಜಾರಿರವರನ್ನು ರಾಜ್ಯಾಧ್ಯಕ್ಷರಾದ ಎಂ ಬಸವರಾಜ ಪಡುಕೋಟೆ ಯವರು ರಾಜ್ಯ ಸಭೆಯಲ್ಲಿ ಹೂ ಕುಚ್ಚ ನೀಡಿ ಅಭಿನಂದನೆಸಿದರು

ಉಡುಪಿ ಸಂಘಟನೆಯನ್ನು ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ ಹಾಗೂ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಅನಿತಾ ಬಿವಿ ನೇತೃತ್ವದಲ್ಲಿ ಮುನ್ನಡೆಸಿಕೊಂಡು ಹೋಗುವಂತೆ ಸೂಚನೆ ನೀಡಿ, ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕರವೇ ರಾಜ್ಯ ಗೌರವಾಧ್ಯಕ್ಷರು ಹಾಗೂ ಕನ್ನಡ ಚಲನಚಿತ್ರ ಖ್ಯಾತ ನಟರು. ನಿರ್ಮಾಪಕರು ಯು ಗಣೇಶ್ ರಾವ್, ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ನಾಗರಾಜ್ ಚಕನಹಳ್ಳಿ, ಪ್ರಧಾನ ರಾಜ್ಯ ಸಂಚಾಲಕರು ಭೀಮಣ್ಣ ಶಾಖಾಪುರ, ರಾಜ್ಯ ಉಪಾಧ್ಯಕ್ಷರಾದ ಅನಿಲ್ ಬಿ. ಶೆಟ್ಟಿ, ರಾಜ್ಯ ಮಹಿಳಾ ಸಂಘಟನಾ ಕಾರ್ಯದರ್ಶಿ ಸುನಿತ ಗೌಡ, ಮೊದಲಾದವರು ಉಪಸ್ಥಿತರಿದ್ದರು.

ನಮ್ಮ ವರದಿಗಾರರು

ಸ್ಟೀವನ್ ಕುಲಾಸೊ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now