
“ಖಾಕಿ ಕಾರ್ಟೂನ್ ಹಬ್ಬ” ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯ ಸಹಭಾಗಿತ್ವ ದೊಂದಿಗೆ ನವೆಂಬರ್ 15ರಿಂದ 19ರವರೆಗೆ ಕುಂದಾಪುರದ ರೋಟರಿ ಕಲಾ ಮಂದಿರದಲ್ಲಿ ‘ಖಾಕಿ ಕಾರ್ಟೂನ್ ಹಬ್ಬ’ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ದಿನಾಂಕ 15-11-2025 ರಂದು ಬೆಳಿಗ್ಗೆ 10:30ಕ್ಕೆ ಶ್ರೀ ಬಿ. ದಯಾನಂದ್ ಐಪಿಎಸ್, ಪೊಲೀಸ್ ಮಹಾನಿರ್ದೇಶಕರು, (ಕಾರಾಗೃಹ ಮತ್ತು ಸುಧಾರಣೆ) ರವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ವಿಶೇಷ ಅತಿಥಿಗಳಾಗಿ ಶ್ರೀ ಬಿ ಎ ಬಾವಾ ನಿವೃತ್ತ ಡೆಪ್ಯೂಟಿ ಪೊಲೀಸ್ ಕಮಿಷನರ್, ಶ್ರೀ ವಿನಯ್ ಗಾಂವ್ಕರ್,ನಿವೃತ್ತ ಡೆಪ್ಯೂಟಿ ಪೊಲೀಸ್ ಕಮಿಷನರ್,
ಶ್ರೀ ಹರಿರಾಮ್ ಶಂಕರ್ (ಐಪಿಎಸ್), ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಶ್ರೀ ರಾಜೇಶ್ ಕೆ.ಸಿ, ಪತ್ರಕರ್ತರು, ಕುಂದಾಪುರ ಇವರು ಉಪಸ್ಥಿತರಿರಲಿದ್ದಾರೆ.

ಕಾರ್ಯಕ್ರಮದ ಉದ್ಘಾಟನಾ ಹಾಗೂ ಸಮಾರೋಪ ಸಮಾರಂಭಗಳಲ್ಲಿ
ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮವಾಗಿ ಸೇವೆ ಸಲ್ಲಿಸಿರುವ ಆಯ್ದ 10 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಗಳಿಗೆ ಸನ್ಮಾನ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ.
ದಿನಾಂಕ 15/11/2025 ಮಧ್ಯಾಹ್ನ 2 ಗಂಟೆಗೆ ಪೋಷಕರ ಮಕ್ಕಳಿಗಾಗಿ ಕಾರ್ಟೂನ್ ಸ್ಪರ್ಧೆಗಳು ಆಯೋಜಿಸಲ್ಪಟ್ಟಿವೆ.
ಪೋಷಕರಿಗಾಗಿ ಮಧ್ಯಾಹ್ನ 2 ಗಂಟೆಗೆ “ನಿಮ್ಮ ಮಕ್ಕಳನ್ನು ರಕ್ಷಿಸಿಕೊಳ್ಳಿ” ಎಂಬ ಶೀರ್ಷಿಕೆಯಡಿ ಒಂದು ವಿಶೇಷ ಸಂವಾದ ಕಾರ್ಯಕ್ರಮ ನಡೆಯಲಿದೆ.
ಈ ವಿನೂತನ ಸಂವಾದ ಕಾರ್ಯಕ್ರಮವನ್ನು ಪರಿಣಿತರಾದ ಡಾ. ವಿರೂಪಾಕ್ಷ ದೇವರಮನೆ, ಖ್ಯಾತ ಮನೋ ವೈದ್ಯರು, ಎ.ವಿ ಬಾಳಿಗಾ ಆಸ್ಪತ್ರೆ ಉಡುಪಿ ಮತ್ತು ಶ್ರೀ ನಂಜಾ ನಾಯ್ಕ್ ಎನ್, ಪಿ. ಎಸ್. ಐ ಕುಂದಾಪುರ ರವರಿಂದ ನಡೆಸಲಾಗುತ್ತದೆ.
ದಿನಾಂಕ 16-11-2025 ರಂದು ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1:00 ಗಂಟೆಯವರೆಗೆ, ಕಲಾಸಕ್ತ ಉಡುಪಿ ಜಿಲ್ಲಾ ಪೋಲಿಸ್ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳಿಗೆ ಖ್ಯಾತ ವ್ಯಂಗ್ಯ ಚಿತ್ರಕಾರರಾದ ಶ್ರೀ ಸತೀಶ್ ಆಚಾರ್ಯ ಅವರಿಂದ ವಿಶೇಷ ಕಾರ್ಟೂನ್ ವರ್ಕ್ಶಾಪ್ ನಡೆಯಲಿದೆ ಹಾಗೂ ದಿನಾಂಕ 17, 18 ಹಾಗೂ 19 ನವೆಂಬರ್ 2025 ರಂದು ಮೂರು ದಿನಗಳ ಕಾಲ ಕಾರ್ಟೂನ್ ಪ್ರದರ್ಶನ ಮತ್ತು ಲೈವ್ ಕ್ಯಾರಿಕೇಚರಿಂಗ್ ಕಾರ್ಯಕ್ರಮಗಳು ನಡೆಯಲಿವೆ.
ನಮ್ಮ ವರದಿಗಾರರು

ವಿಲ್ಸನ್ ಡಿಸೋಜ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now