
ಸಂತೆಕಟ್ಟೆ : ಎಳವೆಯಲ್ಲಿ ಕುತೂಹಲ, ಪ್ರಶ್ನೆಗಳು, ಮೂಡುವುದು ಸಹಜ ಇದಕ್ಕೆ ಶಾಲೆಯಲ್ಲಿ ವಿದ್ಯಾಥಿ೯ಗಳಿಗೆ ಆನೇಕ ಕಾಯ೯ಕ್ರಮಗಳನ್ನು ಹಮ್ಮಿಕೊಂಡು ಪ್ರತಿಭೆಗಳನ್ನು ಅನಾವರಣಗೊಳಿಸಲು ಮುಕ್ತ ಅವಕಾಶಗಳು ಸಿಗುತ್ತವೆ. ಅವುಗಳಲ್ಲಿ ಕ್ರಿಯಾತ್ಮಕ ರೀತಿಯಲ್ಲಿ ಭಾಗವಹಿಸಿದರೆ ಮುಂದೆ ಪ್ರಭುದ್ಧತೆಗಳಿಸಲು ಇದು ಭದ್ರ ಬುನಾದಿಯಾಗುತ್ತದೆ ಎಂದು ಮೌಂಟ್ ರೋಸರಿ ಆಂಗ್ಲ ಶಾಲೆಯಲ್ಲಿ ಎಪ೯ಡಿಸಿದ ವಿಜ್ಞಾನ ವಸ್ತು ಪ್ರದಶ೯ನ “ಕ್ಯುರಿಯೋ” ಉದ್ಘಾಟಿಸಿ ಕುಮಾರಿ ಮೇಘನಾ ಆಚಾಯ೯ ಹೇಳಿದರು.
ಸಂತೆಕಟ್ಟೆ ಮೌಂಟ್ ರೋಸರಿ ಶಾಲೆಯ ಹಳೇ ವಿದ್ಯಾಥಿ೯ ಮೇಘನಾ ಪ್ರಸ್ತುತ ಬೆಂಗಳೂರಿನಲ್ಲಿ ಐಟಿ ಮುಖ್ಯಸ್ಥೆಯಾಗಿದ್ದಾರೆ. ಶಾಲಾ ದಿನಗಳಲ್ಲಿ ಸಂಸ್ಥೆ ನೀಡಿದ ಆನೇಕ ಅವಕಾಶಗಳ ನೆನಪುಗಳನ್ನು ಮೆಲುಕು ಹಾಕಿದರು. ಇನ್ನೋವ೯ ಹಳೇ ವಿದ್ಯಾಥಿ೯ ಪ್ರಸ್ತುತ ವಿಜಯಪುರ ಜಿಲ್ಲೆಯಲ್ಲಿ ವೈದ್ಯಕೀಯ ವಿದ್ಯಾಥಿ೯ಯಾದ ಭರತ್ ಶ್ಯಾನುಭಾಗ್ ಮತ್ತು ಮಣಿಪಾಲದಲ್ಲಿ ಹೃದಯ ತಜ್ಞೆಯಾಗಿ ಸ್ನಾತಕೋತರ ಪದವಿ ವ್ಯಾಸಂಗ ಮಾಡುವ ಆನ್ವಿತಾ ಪೂಜಾರಿ ತೀಪು೯ಗಾರರಾಗಿ ಸಹಕರಿಸಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಸಂಚಾಲಕ ವಂ| ಡಾ| ರೋಕ್ ಡಿಸೋಜ ಮಾತನಾಡಿ ಪ್ರಪಂಚದಲ್ಲಿ ಕ್ಷಣ ಕ್ಷಣವು ಹಲವು ಆನ್ವೇ಼ಷಣೆ, ಸಂಶೋಧನೆಗಳು ನಡೆಯುತ್ತಿವೆ. ಮಾನವ ಕುಲ ಹಾಗು ಪರಿಸರ ಪೂರಕ ವೈಜ್ಞಾನಿಕ ಪ್ರಗತಿ ಪಡೆಯಲು ಶ್ರದ್ಧೆ ಮುಖ್ಯವಾಗಿದೆ. ಇಂದಿನ ಸಂಪನ್ಮೂಲ ವ್ಯಕ್ತಿಗಳು ಇದೇ ಶಾಲೆಯ ಹಳೇ ವಿದ್ಯಾಥಿ೯ಗಳಾಗಿದ್ದು ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡುವವರಾಗಿದ್ದಾರೆ. ಕಿರಿಯ ವಿದ್ಯಾಥಿ೯ಗಳಿಗೆ ಹಿರಿಯ ವಿದ್ಯಾಥಿ೯ಗಳು ನಿಮಗೆ ಪ್ರೇರಣೆಯಾಗಲಿ ಎಂದು ಅವರನ್ನೇ ಆಹ್ವಾನಿಸಲಾಗಿದೆ ಎಂದರು.
ಶಾಲಾ ಮುಖ್ಯಶಿಕ್ಷಕಿ ಸಿಸ್ಟರ್ ಆನ್ಸಿಲ್ಲಾ ಮಾತನಾಡಿ ಶಾಲಾ ಹಂತದಲ್ಲಿ ಮಾಡಿದ ವಿಜ್ಞಾನ ಮಾದರಿಗಳು ಬಹುಬೇಗನೆ ಯಂತ್ರಗಳಾಗಿ ಬಹುಬೇಗನೆ ಬಹುಬೇಡಿಕೆಯ ವಸ್ತುಗಳಾಗಿವೆ ಎಂದು ಕೆಲವು ಪ್ರಚಲಿತ ನಿದಶ೯ನಗಳನ್ನು ನೀಡಿದರು.
ವಿಜ್ಞಾನದ ದಿನದ ಮಹತ್ವವನ್ನು ವಿದ್ಯಾಥಿ೯ ಪುಜಾನ್ ವಿವರಿಸಿದರು. ವಿದ್ಯಾಥಿ೯ಗಳಾದ ಶ್ಲೋಕ್ ಸ್ವಾಗತಿಸಿದರು,ವಾಮಿಕ ನಿರೂಪಿಸಿ, ಧುೃವಿಕಾ ವಂದಿಸಿದರು. ಪ್ರದಶ೯ನದಲ್ಲಿ ಒಟ್ಟು 638 ವಿವಿಧ ವಿಜ್ಞಾನ ಮಾದರಿಗಳಿದ್ದು ವೀಕ್ಷಕರಿಗೆ ಮನಮುಟ್ಟುವಂತೆ ವಿದ್ಯಾಥಿ೯ಗಳು ಸರಳವಾಗಿ ವಿವರಿಸಿದರು


Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now