
ಮಂಗಳೂರು(ದಕ್ಷಿಣ ಕನ್ನಡ): ಸಂಗೀತದ ಸೂಕ್ಷ್ಮತೆಯೊಂದಿಗೆ ಈಜುವ ಕಲೆಯನ್ನು ಸಂಯೋಜಿಸಿ ಅದ್ಭುತ ಸಾಧನೆಯೊಂದನ್ನು ಮಂಗಳೂರಿನ 29 ವರ್ಷದ ಯುವಕನೋರ್ವ ಮಾಡಿದ್ದಾರೆ.
ಮಂಗಳೂರಿನ ಬಹುಮುಖ ಪ್ರತಿಭೆ ಸಂಗೀತಗಾರ ರುಬೆನ್ ಜೇಸನ್ ಮಚದೋ, ಸಂತ ಅಲೋಯ್ಸಿಯಸ್ ಕಾಲೇಜು (ಡೀಮ್ಡ್ ಟು ಬಿ ಯೂನಿವರ್ಸಿಟಿ) ಸ್ವಿಮ್ಮಿಂಗ್ ಪೂಲ್ನಲ್ಲಿ ಬುಧವಾರ(ಅ.29) ಬೆಳಗ್ಗೆ 10 ಗಂಟೆಗೆ ಕೊಳಲು (Flute) ನುಡಿಸುತ್ತಾ ಬೆನ್ನು ಹಿಂದೆ ಹಾಕಿ (Backstroke) 700 ಮೀಟರ್ಗೂ ಹೆಚ್ಚು ದೂರ ಈಜಿ ವಿಶ್ವದ ಮೊದಲ ದಾಖಲೆಯನ್ನು ಸೃಷ್ಟಿಸಿದ್ದಾರೆ. ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ (GBWR) ಸಂಸ್ಥೆಯು ಈ ಸಾಧನೆಯನ್ನು ಗುರುತಿಸಿ, ಅಧಿಕೃತ ಪ್ರಮಾಣಪತ್ರವನ್ನು ನೀಡಿದ್ದು, ವಿಡಿಯೋ ಪರಿಶೀಲನೆಯ ನಂತರ ನಿಖರ ದೂರವನ್ನು ಘೋಷಿಸುವುದಾಗಿ ತಿಳಿಸಿದೆ.

ಈ ವಿಭಾಗದಲ್ಲಿ ಇದು ಮೊದಲ ಸಾಧನೆಯಾಗಿದ್ದು, ಈ ಮೊದಲು ಯಾರೂ ಕೂಡ ಈ ರೀತಿಯ ಪ್ರಯತ್ನ ಮಾಡಿಲ್ಲ. ಪೂಲ್ನ ಕಾರ್ನರ್ ಸುತ್ತಲೂ ಈಜಿದರೆ 150 ಮೀಟರ್ ಎಂದು ಗಣನೆ ಮಾಡಲಾಗುತ್ತದೆ. ರುಬೆನ್ ಅವರು 5 ಸುತ್ತು ಮತ್ತು 75 ಮೀಟರ್ಗಳನ್ನು ಪೂರ್ಣಗೊಳಿಸಿದ್ದು, ನಿಖರ ಗಣನೆಯ ಪ್ರಕಾರ 700 ಮೀಟರ್ಗೂ ಹೆಚ್ಚು ದೂರ ಈಜಿದ್ದಾರೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವಾಟರ್ ಸೇಫ್ಟಿ(NIWS) ಅಧಿಕೃತ ಲೈಫ್ ಸೇವರ್ ಆಗಿರುವ ರುಬೆನ್ ಅವರು, ಈ ಸಾಧನೆಯ ಮೂಲಕ ಸಂಗೀತದ ಕಲೆಯೊಂದಿಗೆ ದೈಹಿಕ ಸಾಮರ್ಥ್ಯ ಮತ್ತು ಶ್ವಾಸ ನಿಯಂತ್ರಣದ ಅದ್ಭುತ ಸಂಗಮವನ್ನು ತೋರಿಸಿದ್ದಾರೆ.
ರುಬೆನ್ ಜೇಸನ್ ಮಚದೋ ಹಿನ್ನೆಲೆ: ಮಂಗಳೂರಿನಲ್ಲಿ ವಾಸಿಸುತ್ತಿರುವ 29 ವರ್ಷದ ರುಬೆನ್ ಜೇಸನ್ ಮಚದೋ ಅವರು ಸಂಗೀತಗಾರ ಹಾಗೂ ಸಂಗೀತ ಶಿಕ್ಷಕರಾಗಿ ಖ್ಯಾತರಾಗಿದ್ದಾರೆ. ಹಿಂದೂಸ್ತಾನಿ ಕೊಳಲು (ಫ್ಲೂಟ್) ಮತ್ತು ವೆಸ್ಟರ್ನ್ ಫ್ಲೂಟ್ನಲ್ಲಿ ಪರಿಣತರಾಗಿರುವ ಅವರು, ಸ್ಯಾಕ್ಸೋಫೋನ್, ಗಿಟಾರ್ ಮತ್ತು ಇತರ ವಾದ್ಯಗಳನ್ನೂ ನುಡಿಸುತ್ತಾರೆ.


Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now