ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಶಿರ್ವ ಶಾಖೆಯಲ್ಲಿ ದೀಪಾವಳಿ ಸಂಭ್ರಮ.

ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಶಿರ್ವ ಶಾಖೆಯಲ್ಲಿ ದೀಪಾವಳಿ ಸಂಭ್ರಮ.

0Shares

ಶಿರ್ವ : ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್, ಶಿರ್ವ ಶಾಖೆಯಲ್ಲಿ ದೀಪಾವಳಿ ಹಬ್ಬವನ್ನು ಭಕ್ತಿ ಮತ್ತು ಉತ್ಸಾಹದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಜಾನ್ಸನ್ ಡಿ ಅಲ್ಮೇಡಾರವರು ವಹಿಸಿದರು.
ಮುಖ್ಯ ಅತಿಥಿಗಳಾಗಿ ಶಿರ್ವ ಮಹಿಳಾ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಶ್ರೀಮತಿ ಜಯಶ್ರೀ ಶೆಟ್ಟಿ ಮತ್ತು ಎಲ್ಐಸಿಯಲ್ಲಿ 22 ವರ್ಷದಿಂದ MDRT ಆಗಿ ಕೆಲಸ ನಿರ್ವಹಿಸುತ್ತಿರುವ ಶ್ರೀ ಉಮರ್ ಇಸ್ಮಾಯಿಲ್ ರವರು ಉಪಸ್ಥಿತರಿದ್ದರು.

ಅತಿಥಿಗಣ್ಯರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮದ ಶುಭಾರಂಭವನ್ನು ಮಾಡಿದರು.

ಶ್ರೀಮತಿ ಜಯಶ್ರೀ ಶೆಟ್ಟಿ ಅವರು ದೀಪಾವಳಿ ಆಚರಣೆ ಹೇಗೆ ಮಾಡುತ್ತಾರೆ ಅದರ ಹಿಂದಿನ ಕಥೆಗಳೇನು ಮತ್ತು ಗದ್ದೆಗಳಲ್ಲಿ ದೀಪವಿಟ್ಟು ನಮ್ಮ ತುಳುನಾಡಿನಲ್ಲಿ ಹೇಗೆ ಬಲಿಂದ್ರನನ್ನು ಕರೆಯುತ್ತಾರೆ ಎಂಬುದರ ಬಗ್ಗೆ ದೀಪಾವಳಿಯ ಒಂದು ಉತ್ತಮ ಸಂದೇಶವನ್ನು ತಿಳಿಸಿದ್ದಾರೆ.

ಶ್ರೀ ಉಮರ್ ಇಸ್ಮಾಯಿಲ್ ರವರು ಶಿರ್ವ ಪರಿಸರದಲ್ಲಿ ಜನರು ಸಹಭಾಳ್ವೆಯಿಂದ ಎಲ್ಲಾ ಹಬ್ಬಗಳನ್ನು ಒಟ್ಟಾಗಿ ಸಂಭ್ರಮಿಸುತ್ತಾರೆ ಮತ್ತು ಊರಿನ ಜನರ ಸಾಮರಸ್ಯವನ್ನು ಮೆಚ್ಚಿಕೊಂಡರು.ಪ್ರತಿಯೊಬ್ಬರೂ ಸಂತೋಷದಿಂದ ದೀಪಾವಳಿಯನ್ನು ಆಚರಿಸಿ, ಎಲ್ಲರ ಜೀವನದಲ್ಲಿ ಶಾಂತಿ, ಸಮೃದ್ಧಿ ಮತ್ತು ಶುಭವಾಗಲಿ ಎಂದು ಹಾರೈಸಿದರು.

ದೀಪಾವಳಿ ಹಬ್ಬದ ಶುಭ ಸಂದೇಶವನ್ನು ನೀಡಲಾಯಿತು.
ಸಂಸ್ಥೆಯ ಉಪಾಧ್ಯಕ್ಷರು ಶ್ರೀ ಕಿರಣ್ ಲೋಬೋ, ಬಸ್ರೂರು ಶಾಖೆಯ ಹಿರಿಯ ನಿರ್ದೇಶಕರಾದ ಶ್ರೀ ಫಿಲಿಪ್ ಡಿ ಕೋಸ್ಟಾ, ಶಿರ್ವ ಶಾಖೆಯ ನಿರ್ದೇಶಕರಾದ ಶ್ರೀ ವಿಲ್ಸನ್ ಡಿಸೋಜಾ ಉಪಸ್ಥಿತರಿದ್ದರು.

ನೂತನ ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ ಕೆಸಿಸಿಐ ಅಧ್ಯಕ್ಷರಾದ ರೊಟಾರಿಯನ್ ಶ್ರೀ ಆಲ್ವಿನ್ ಕ್ವಾಡ್ರಸ್ ಮತ್ತು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀ ಜೆರಾಲ್ಡ್ ಫೆರ್ನಾಂಡಿಸ್ ಶುಭಾಶಂಸನೆ ನೀಡಿದರು.

ಟೌನ್ ಸ್ಕ್ವೇರ್ ಕಟ್ಟಡದ ಮಾಲಕರಾದ ಕ್ಲಾರಾ ರೋಸಿ ಮತ್ತು ಮೈಕೆಲ್ ಡಿಸೋಜಾ, ಸಂಘದ ಗ್ರಾಹಕರು ಮತ್ತು ಹಿತೈಷಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಕಾರ್ಯಕ್ರಮವನ್ನು ಕುಮಾರಿ ಫಿಯೋಲಾ ಎಸ್ ಕ್ವಾಡ್ರಸ್ ನಿರೂಪಿಸಿದರು. ಶ್ರೀ ವಿಕ್ಟರ್ ಪಿಂಟೊರವರು ಸ್ವಾಗತಿಸಿ, ಶ್ರೀ ಜೇಮ್ಸ್ ಡಿಸೋಜ ವಂದಿಸಿದರು.

ನಮ್ಮ ವರದಿಗಾರರು

ವಿಲ್ಸನ್ ಡಿಸೋಜ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now