ಸೋಮಯ್ಯ ವೆಲ್‌ನೆಸ್ ಸೆಂಟರ್ ಸಿಯೋನ್, ಮುಂಬೈನಲ್ಲಿ ಪ್ರಾರಂಭವಾಯಿತು.

ಸೋಮಯ್ಯ ವೆಲ್‌ನೆಸ್ ಸೆಂಟರ್ ಸಿಯೋನ್, ಮುಂಬೈನಲ್ಲಿ ಪ್ರಾರಂಭವಾಯಿತು.

0Shares

ಮುಂಬಯಿ (ಆರ್‌ಬಿಐ), ಅ.15: ಸಯಾನ್ ಈಸ್ಟರ್ನ್ ಎಕ್ಸ್‌ಪ್ರೆಸ್‌ನಲ್ಲಿನ ಕೆ.ಜೆ ಸೋಮಯ್ಯ ಆಸ್ಪತ್ರೆಯಲ್ಲಿ ಕಳೆದ ಮಂಗಳವಾರ ಅತಾಧುನಿಕ ವ್ಯವಸ್ಥೆಯುಳ್ಳ ವೆಲ್‌ನೆಸ್ ಸೆಂಟರ್ ಸೇವಾರ್ಪಣೆ ಮಾಡಲಾಯಿತು. ಕೆ.ಜೆ ಸೋಮಯ್ಯ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಸಮೀರ್ ಎಸ್.ಸೋಮಯ್ಯ ಅವರು ರಿಬನ್ ಕತ್ತರಿಸಿ, ದೀಪ ಪ್ರಜ್ವಲನೆಗೈದು ಬಳಿಕ ಶ್ರೀಫಲ ಒಡೆಯುವ ವಿಧಿಯನ್ನು ನೆರವೆರಿಸಿ ವೆಲ್‌ನೆಸ್ ಸೆಂಟರ್ ಉದ್ಘಾಟಿಸಿ ಶುಭಾರೈಸಿದರು.

ಸ್ವಸ್ಥ, ಸಂತೋಷಕರ ಸಮಾಜದತ್ತ ಹೆಜ್ಜೆ ಇಡುವ ಈ ಹೊಸ ಪ್ರಯತ್ನಕ್ಕೆ ಕೆ. ಜೆ. ಸೋಮಯ್ಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಸದಾ ಸಿದ್ಧವಿದೆ. ಅಸ್ವಸ್ಥ ಜನರ ಆರೋಗ್ಯಭಾಗ್ಯದ ಕಾಳಜಿ ನಮ್ಮ ಉದ್ದೇಶವಾಗಿದ್ದು ಸ್ವಸ್ಥ ಸಮಾಜದ ನಿರ್ಮಾಣವೇ ನಮ್ಮ ಗುರಿಯಾಗಿದೆ ಎಂದು ಸಮೀರ್ ಸೋಮಯ್ಯ ತಿಳಿಸಿದರು.

ಸೋಮಯ್ಯ ಟ್ರಸ್ಟ್‌ನ ಕಾರ್ಯದರ್ಶಿ ಲೆಫ್ಟಿನೆಂಟ್ ಜನರಲ್ ಹೆಚ್.ಎಸ್ ಕಹ್ಲೋನ್, ಸಿಇಒ ಡಾ| ಮನೀಶಾ ಬೋಬಡೆ, ಔಟ್ ಲುಕ್ ಬೆಸ್ಟ್ ಡಾಕ್ಟರ್ಸ್ ಮುಂಬಯಿ ಪುರಸ್ಕೃತ ಹಿರಿಯ ಹೃದ್ರೋಗ ತಜ್ಞ , ಕೆ.ಜೆ ಸೋಮಯ್ಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಸೋಮಯ್ಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಹಿರಿಯ ಹೃದ್ರೋಗ ತಜ್ಞ ಡಾ| ಸದಾನಂದ ಆರ್.ಶೆಟ್ಟಿ, ಡೀನ್ ಮೈಥಿಲಿ ನಾಯಕ್ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಎಲ್ಲ ಪ್ರಮುಖ ಹಿತಾಸಕ್ತಿಗಳ ಸಮ್ಮುಖದಲ್ಲಿ ಟ್ರಸ್ಟ್‌ನ ಗೌರವಾನ್ವಿತ ಅಧ್ಯಕ್ಷರೊಂದಿಗೆ ನಡೆದ ವಿಶೇಷ ಸಂವಾದದ ನಂತರ ಅತಿಥಿಗಳಿಗೆ ವೆಲ್‌ನೆಸ್ ಸೆಂಟರ್‌ನ ವಿವಿಧ ವಿಭಾಗಗಳ ಪರಿಚಯ ಮಾಡಲಾಯಿತು. ನಮ್ಮ ದೇಹ, ಮನಸ್ಸು ಮತ್ತು ಆತ್ಮದ ಆರೈಕೆಗೆ ಸಮರ್ಪಿತವಾದ ವೆಲ್‌ನೆಸ್ ಸೆಂಟರ್ ಉದ್ಘಾಟನೆಯನ್ನು ಘೋಷಿಸಲು ನಾವು ಅತ್ಯಂತ ಸಂತೋಷ ಪಡುತ್ತಿದ್ದೇವೆ. ಈ ಕೇಂದ್ರದಲ್ಲಿ ಹಿರಿಯ ನಾಗರಿಕರು, ಮಹಿಳೆಯರು, ಹೃದಯ ಸಂಬಂಧಿ ಹಾಗೂ ಮಧುಮೇಹಿ ರೋಗಿಗಳಿಗಾಗಿ ವಿಶೇಷವಾಗಿ ರೂಪಿಸಲಾದ ಆರೋಗ್ಯ ತಪಾಸಣೆ ಪ್ಯಾಕೇಜುಗಳು, ಹಾಗೂ ಆಯುರ್ವೇದ ಮತ್ತು ಸಮಗ್ರ ಆರೋಗ್ಯ ಚಿಕಿತ್ಸೆಗಳನ್ನು ಒಂದೇ ಕಟ್ಟಡದ ಸೂರಿನಡಿ ಒದಗಿಸಲಾಗುವು ದು ಎಂದು ಲೆ| ಜ| ಹೆಚ್.ಎಸ್ ಕಹ್ಲೋನ್ ತಿಳಿಸಿದರು. ಡಾ|ಮನೀಶಾ ಬೋಬಡೆ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಮರ್ಪಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now