
ಬ್ರಹ್ಮಾವರದ ಎಸ್ ಎಮ್ ಎಸ್ ಕಾಲೇಜಿನ ಅರ್ಥಶಾಸ್ತ್ರ ವಿಭಾಗವು IQAC ಯ ಆಶ್ರಯದಲ್ಲಿ “Learn & Earn – ಸ್ವಯಂ ಉದ್ಯೋಗದ ಅವಕಾಶಗಳು” ಎಂಬ ವಿಶೇಷ ಕಾರ್ಯಕ್ರಮವನ್ನು 2025ರ ಸೆಪ್ಟೆಂಬರ್ 26ರಂದು ಕಾಲೇಜಿನ ಮಿನಿ ಆಡಿಯಟೋರಿಯಂನಲ್ಲಿ ಆಯೋಜಿಸಿತು. ವಿದ್ಯಾರ್ಥಿಗಳಿಗೆ ಸ್ವಯಂ ಉದ್ಯೋಗ ಹಾಗೂ ಕೌಶಲ್ಯಾಧಾರಿತ ಜೀವನೋಪಾಯದ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮವು ಸೌಜನ್ಯ ಅವರ ಪ್ರಾರ್ಥನೆಯಿಂದ ಆರಂಭವಾಗಿ, ಪವನ್ ಅವರು ಅತಿಥಿಗಳಿಗೆ ಹೃತ್ಪೂರ್ವಕ ಸ್ವಾಗತ ಕೋರಿ, ವಿಭಾಗದ ಮುಖ್ಯಸ್ಥರಾದ ಶ್ರೀ ಭರತ್ ರಾಜ್ ಎಸ್. ನೇಜರ್ ಇಂದಿನ ಆರ್ಥಿಕತೆಯಲ್ಲಿ ಸ್ವಯಂ ಉದ್ಯೋಗದ ಪ್ರಾಮುಖ್ಯತೆಯನ್ನು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯರಾದ ಡಾ. ರಾಬರ್ಟ್ ರೊಡ್ರಿಗಸ್ ಜೆ ಅಧ್ಯಕ್ಷೀಯ ನುಡಿಗಳಲ್ಲಿ , ನಿರುದ್ಯೋಗ ಸಮಸ್ಯೆ ಎದುರಿಸಲು ಕೌಶಲ್ಯಾಭಿವೃದ್ಧಿ, ಹಾಗೂ ಉದ್ಯಮಶೀಲ ಮನೋಭಾವವನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕೆಂದು ಒತ್ತಿ ಹೇಳಿದರು.
ಮುಖ್ಯ ಅತಿಥಿಯಾದ ಡಾ. ಬೊಮ್ಮಯ್ಯ ಎಂ, RUDSET ಬ್ರಹ್ಮಾವರದ ನಿರ್ದೇಶಕರು ವಿದ್ಯಾರ್ಥಿಗಳಿಗೆ ಸ್ವಯಂ ಉದ್ಯೋಗದ ವಿವಿಧ ಅವಕಾಶಗಳು, ಸರ್ಕಾರದ ಯೋಜನೆಗಳು ಹಾಗೂ ತಾಂತ್ರಿಕ ಮತ್ತು ವಾಣಿಜ್ಯ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಅಗತ್ಯವನ್ನು ಕುರಿತು ವಿವರವಾದ ಉಪನ್ಯಾಸ ನೀಡಿದರು. RUDSET ನ ಉಪನ್ಯಾಸಕರಾದ ಬಿ. ಸಂತೋಷ್ ಶೆಟ್ಟಿ ಅವರು ವಿದ್ಯಾರ್ಥಿಗಳನ್ನು ಗುಂಪು ಚಟುವಟಿಕೆಗಳ ಮೂಲಕ ತೊಡಗಿಸಿಕೊಂಡು ಕಾರ್ಯಕ್ರಮವನ್ನು ಇನ್ನಷ್ಟು ರಂಜನೀಯಗೊಳಿಸಿದರು.
ಕು. ಮಯೂರಿ ಧನ್ಯವಾದ ಸಮರ್ಪಸಿ, ಅಭಿಜ್ಞಾ ಕಾರ್ಯಕ್ರಮ ವನ್ನು ನಿರೂಪಿಸಿದರು.

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now