
ಇತಿಹಾಸ ಪ್ರಸಿದ್ಧ ಹಾಗೂ ಕರಾವಳಿಯ ಅತ್ಯಂತ ಪುರಾತನ ಚರ್ಚುಗಳಲ್ಲಿ ಒಂದಾದ ಗಂಗೊಳ್ಳಿಯ ಕೊಸೆಸಾಂವ್ ಮಾತೆ ಚರ್ಚಿನಲ್ಲಿ ಶಿಕ್ಷಣ ಆಯೋಗದ ವತಿಯಿಂದ ” ಶಿಕ್ಷಕರ ದಿನಾಚರಣೆ”ಯನ್ನು ಆದಿತ್ಯವಾರ ಸೆಪ್ಟೆಂಬರ್ 7ರಂದು ಆಚರಿಸಲಾಯಿತು.
ಗಂಗೊಳ್ಳಿ ಕೊಸೆಸಾಂವ್ ಮಾತೆ ಚರ್ಚಿನ ಧರ್ಮ ಗುರುಗಳಾದ ವಂದನೀಯ ತೋಮಸ್ ರೋಶನ್ ಡಿಸೋಜರವರ ನೇತೃತ್ವದಲ್ಲಿ , ಮೂಲತಃ ಗಂಗೊಳ್ಳಿಯವರಾಗಿ ಪ್ರಸ್ತುತ ಕೆನಡಾದ ಬರ್ಲಿಂಗ್‌ಟನ್ ನಲ್ಲಿ ಸೇವೆ ಸಲ್ಲಿಸುತ್ತಿರುವ ವಂದನೀಯ ಅರುಣ್ ಗೊಡ್ವಿನ್ ಪಿಂಟೊ ರವರ ಸಹಕಾರದೊಂದಿಗೆ ಪವಿತ್ರ ಬಲಿಪೂಜೆಯನ್ನು ಅರ್ಪಿಸಲಾಯಿತು. ಶ್ರೀಮತಿ ರೀನಾ ಪಿಂಟೊ, ಶ್ರೀಮತಿ ಆಶಾ ಡಿಕೋಸ್ಟಾ, ಶ್ರೀ ಐವನ್ ಕಾರ್ಡಿನ್, ಭಗಿನಿ ವಿಜಯ ಕ್ರಾಸ್ತಾ ಎ. ಸಿ, ಭಗಿನಿ ಆ್ಯನೆಟ್ ಎ.ಸಿ, ಶ್ರೀಮತಿ ರೀನಾ ರೆಬೆರೊ, ಕು. ರೀಮಾ ಒಲಿವೇರಾ, ಶ್ರೀಮತಿ ಗ್ಯಾಡಿಸ್ ರೆಬೆಲ್ಲೊ ಹಾಗೂ ಶ್ರೀಮತಿ ಜೆಸಿಂತಾ ಡಿಸೋಜ ಪವಿತ್ರ ಬಲಿಪೂಜೆಗೆ ವಾಚನ ಹಾಗೂ ಗಾಯನಗಳ ಮೂಲಕ ಸಹಕರಿಸಿದರು.
ಗಂಗೊಳ್ಳಿ ಕೊಸೆಸಾಂವ್ ಮಾತೆ ಚರ್ಚಿನ ಧರ್ಮಗುರುಗಳಾದ ವಂದನೀಯ ತೋಮಸ್ ರೋಶನ್ ಡಿಸೋಜರವರ ಅಧ್ಯಕ್ಷತೆಯಲ್ಲಿ ನಡೆದ ಅಭಿನಂದನ ಕಾರ್ಯಕ್ರಮದಲ್ಲಿ ಗಂಗೊಳ್ಳಿ ಚರ್ಚಿನ ಸಂಪರ್ಕ ಮಾಧ್ಯಮ ಆಯೋಗದ ಸಂಚಾಲಕರು ಹಾಗೂ ಬ್ರಹ್ಮಾವರ ಎಮ್ ಸಿ ಸಿ ಬ್ಯಾಂಕಿನ ಶಾಖಾ ಪ್ರಬಂಧಕರಾದ ಶ್ರೀ ಓವಿನ್ ರೆಬೆಲ್ಲೊ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ” ಗುರುವಿನಲ್ಲಿ ಸಾಕ್ಷಾತ್ ದೇವರನ್ನು ಕಾಣುವ ನಾವು, ಆಧುನಿಕ ಯುಗದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರ ಸಂಬಂಧ ಮತ್ತು ಜವಾಬ್ದಾರಿಗಳ ಬಗ್ಗೆ ಮಾತನಾಡಿ , ಶಿಕ್ಷಕರ ಮೌಲ್ಯಭರಿತ ಶಿಕ್ಷಣದಿಂದ ಆಧುನಿಕ ಜಗತ್ತಿನ ನಿರ್ಮಾಣವಾಗತ್ತದೆಯಲ್ಲದೆ, ವಿದ್ಯಾರ್ಥಿಗಳ ಬುದ್ಧಿಮತ್ತೆಗೆ ಹಾಗೂ ಅಧುನೀಕತೆಗೆ ಅನುಗುಣವಾಗಿ ಶಿಕ್ಷಕರು ತಮ್ಮನ್ನು ತಾವು ತಯಾರಿ ಮಾಡಿಕೊಂಡು ವಿದ್ಯಾರ್ಜನೆ ಮಾಡಿದಾಗ , ವಿದ್ಯಾರ್ಥಿಗಳು ಆಧುನಿಕ ನೈತಿಕತೆಯ ಸಮಾಜದ ನಿರ್ಮಾಣಕ್ಕೆ ತಯಾರಾಗುತ್ತಾರೆ.” ಎಂದು ಹೇಳಿ, ಎಲ್ಲಾ ಶಿಕ್ಷಕರಿಗೆ ಶುಭ ಹಾರೈಸಿದರು.
ಚರ್ಚಿನ ಶಿಕ್ಷಣ ಆಯೋಗದ ಸಂಚಾಲಕರಾದ ಶ್ರೀಮತಿ ಅನ್ನಿ ಕ್ರಾಸ್ಟೊ ಶಿಕ್ಷಕರನ್ನು ಅಧಿನಂದಿಸುವ ಕಾರ್ಯಕ್ರಮವನ್ನು ನಿರೂಪಿಸಿದರೆ, ವಂದನೀಯ ತೋಮಸ್ ರೋಶನ್ ಡಿಸೋಜ ಹಾಗೂ ವಂದನೀಯ ಅರುಣ್ ಗೊಡ್ವಿನ್ ಪಿಂಟೊ ಎಲ್ಲಾ ಶಿಕ್ಷರನ್ನು ಪುಷ್ಪ ಹಾಗೂ ಕಾಣಿಕೆಯನ್ನು ನೀಡಿ ಅಭಿನಂದಿಸಿದರು.
ದೇವಸ್ತುತಿ ಆಯೋಗದ ಸಂಚಾಲಕರಾದ ಶ್ರೀಮತಿ ಜೆನ್ನಿ ಬುತ್ತೆಲ್ಲೊ ,ಶಿಕ್ಷಣ ಆಯೋಗದ ಸದಸ್ಯರಾದ ಶ್ರೀ ಆಲ್ವಿನ್ ಕ್ರಾಸ್ತಾ, ಶ್ರೀ ಜೋರ್ಜ್ ಫರ್ನಾಂಡಿಸ್ , ಶ್ರೀಮತಿ ಫೆಲ್ಸಿ ಒಲಿವೇರಾ ಹಾಗೂ ಮಹೋತ್ಸವ ಸಮಿತಿಯ ಸದಸ್ಯರಾದ ಶ್ರೀ ರಿಚ್ಚರ್ಡ್ ಕಾರ್ಡಿನ್ ರವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.







Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now