
ಕೋಲ್ಕತ್ತಾದ ಸಂತ ಮದರ್ ತೆರೇಸಾರವರ ಪುಣ್ಯಸ್ಮರಣೆಯ ಅಂಗವಾಗಿ ಗಂಗೊಳ್ಳಿಯ ಕೊಸೆಸಾಂವ್ ಮಾತೆ ಚರ್ಚಿನ ಕಥೊಲಿಕ್ ಸಭಾ ಘಟಕವು ಚರ್ಚಿನಲ್ಲಿರುವ ಹಿರಿಯರು ಮತ್ತು ಅಸ್ವಸ್ಥರ ಭೇಟಿಯ ಕಾರ್ಯಕ್ರಮವನ್ನು ಸೆಪ್ಟೆಂಬರ್ 5 ರಂದು ನಡೆಸಿತು.

ಸತತ 28 ವರ್ಷಗಳಿಂದ ನಡೆಯುವ ಈ ಕಾರ್ಯಕ್ರಮದ ನೇತೃತ್ವವನ್ನು ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ) ಗಂಗೊಳ್ಳಿ ಘಟಕದ ಅಧ್ಯಕ್ಷರಾದ ಶ್ರೀ ಎಡ್ವರ್ಡ್ ಫೆರ್ನಾಂಡಿಸ್ ನವರು ವಹಿಸಿದ್ದರು. ಗಂಗೊಳ್ಳಿ ಕೊಸೆಸಾಂವ್ ಮಾತೆ ಚರ್ಚಿನ ಧರ್ಮಗುರುಗಳಾದ ವಂದನೀಯ ತೋಮಸ್ ರೋಶನ್ ಡಿಸೋಜ ರವರ ಮಾರ್ಗದರ್ಶನದಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಕಥೊಲಿಕ್ ಸಭೆಯ ಸದಸ್ಯರು ಸುಮಾರು 28 ಜನರನ್ನು ಭೇಟಿ ಮಾಡಿ ಕುಶಲೋಪರಿ ಹಾಗೂ ಪ್ರಾರ್ಥನೆಗಳನ್ನು ನಡೆಸಿ, ಕಾಣಿಕೆ ನೀಡಿ ಗೌರವಿಸಿದರು.





Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now