ಬ್ರಹ್ಮಾವರದ SMS ಕಾಲೇಜಿನಲ್ಲಿ ಜರ್ಮನ್ ಭಾಷಾ ತರಬೇತಿ ಕಾರ್ಯಕ್ರಮ

ಬ್ರಹ್ಮಾವರದ SMS ಕಾಲೇಜಿನಲ್ಲಿ ಜರ್ಮನ್ ಭಾಷಾ ತರಬೇತಿ ಕಾರ್ಯಕ್ರಮ

0Shares

ಬ್ರಹ್ಮಾವರದ SMS Degree ಕಾಲೇಜಿನಲ್ಲಿ ಜರ್ಮನ್ ಭಾಷಾ ತರಬೇತಿ ಕಾರ್ಯಕ್ರಮ ಆರಂಭಗೊಂಡಿದೆ. ಈ ತರಬೇತಿಯಲ್ಲಿ ಅಂತಾರಾಷ್ಟ್ರೀಯವಾಗಿ ಮಾನ್ಯತೆ ಪಡೆದ A1 ಮತ್ತು A2 ಮಟ್ಟದ ಜರ್ಮನ್ ಭಾಷಾ ಪಾಠಗಳನ್ನು ನೀಡಲಾಗುತ್ತದೆ. ಅನುಭವ ಹೊಂದಿದ ತರಬೇತುದಾರರಿಂದ ಪಾಠ ನಡೆಯಲಿದ್ದು, ವಿದ್ಯಾರ್ಥಿಗಳಿಗೆ ಜರ್ಮನಿಯಲ್ಲಿ ಉನ್ನತ ಶಿಕ್ಷಣ ಹಾಗೂ ಉದ್ಯೋಗಾವಕಾಶಗಳಿಗೆ ದಾರಿ ತೆರೆಯಲಿದೆ.

ಅನುಕೂಲವಾಗುವಂತೆ ತರಗತಿಗಳನ್ನು ಪ್ರತೀ ಶನಿವಾರ ನಡೆಸಲಾಗುತ್ತದೆ. ಈ ಕಾರ್ಯಕ್ರಮಕ್ಕೆ PUC ಮತ್ತು ಪದವಿ ವಿದ್ಯಾರ್ಥಿಗಳು ಅರ್ಹರಾಗಿದ್ದಾರೆ. ಇದೆ ವೇಳೆ ಜರ್ಮನಿಯಲ್ಲಿ ಉದ್ಯೋಗಾವಕಾಶ ಹುಡುಕುತ್ತಿರುವವರಿಗೆ ಇದು ಅತ್ಯಂತ ಉಪಯುಕ್ತವಾಗಿದ್ದು, ಉದ್ಯೋಗಕ್ಕಾಗಿ ಅಗತ್ಯವಾದ ಭಾಷಾ ಪಾಠಗಳನ್ನು ಕಲಿಯಲು ಸಹಾಯಕವಾಗಲಿದೆ.

👉 ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಸಂಖ್ಯೆ: 9738215539 / 6366415968
👉 ಇಮೇಲ್: sms_college@yahoo.com

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now