
ಉಡುಪಿ : ಕೇದಾರೋತ್ಥಾನ ಟ್ರಸ್ಟ್ (ರಿ) ಉಡುಪಿ ಮೂಲಕ ರಘುಪತಿ ಭಟ್ ಅವರು ಉಡುಪಿಯಲ್ಲಿ ಕೈಗೊಂಡ ಕ್ರಾಂತಿಕಾರಿ ಕಾರ್ಯಕ್ರಮ ಹಡಿಲು ಭೂಮಿ ಕೃಷಿ ಮೂಲಕ ಪ್ರೇರಣೆ ಪಡೆದ ಯುವಕರು ಕೇದಾರೋತ್ಥಾನ ರೈತ ಉತ್ಪಾದಕರ ಕಂಪೆನಿ ಮೂಲಕ ಸತತ 5 ವರ್ಷಗಳಿಂದ ನೂರಾರು ಎಕರೆ ಭತ್ತದ ಕೃಷಿ ಮಾಡುತ್ತಿದ್ದು, ಈ ವರ್ಷದ ಕಡೇ ನಟ್ಟಿ ಇಂದು ಕುತ್ಪಾಡಿ ಶಾಲೆ ಬಳಿ ನಡೆಯಿತು. ಈ ಸಂದರ್ಭದಲ್ಲಿ ಹಡಿಲು ಭೂಮಿ ಕೃಷಿಯಲ್ಲಿ ತೊಡಗಿ ಸ್ವಯಂ ಪ್ರೇರಿತರಾಗಿ ಕೃಷಿ ಕಾರ್ಯ ಮಾಡುತ್ತಿರುವ ಕೃಷಿಕರನ್ನು ಅಭಿನಂದಿಸಲಾಯಿತು

ಕೆ. ರಘುಪತಿ ಭಟ್ ಅವರು ಉಡುಪಿಯ ಶಾಸಕರಿದ್ದಾಗ ಸಮಾಜ ಗಣ್ಯರನ್ನು ಸೇರಿಸಿ ಕೇದಾರೋತ್ಥಾನ ಟ್ರಸ್ಟ್ (ರಿ.) ಉಡುಪಿ ಆರಂಭಿಸಿ ಆ ಮೂಲಕ ಉಡುಪಿಯಲ್ಲಿ ಕೃಷಿ ಮಾಡದೆ ಹಡಿಲು ಬಿಟ್ಟಿದ್ದ 1500 ಎಕರೆಗೂ ಅಧಿಕ ಹಡಿಲು ಕೃಷಿ ಭೂಮಿಯಲ್ಲಿ ಭತ್ತದ ಕೃಷಿ ಮಾಡಿದ್ದರು. ಈ ಕಾರ್ಯದಲ್ಲಿ ಯುವಕ, ಯುವತಿ ಮಂಡಲ, ಭಜನಾ ಮಂಡಳಿಗಳು, ರಿಕ್ಷಾ ಚಾಲಕರ ಸಂಘಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಹೀಗೆ ಜನ ಸ್ವಯಂ ಪ್ರೇರಿತರಾಗಿ ಪಾಲ್ಗೊಂಡಿದ್ದರು. ಅದರಿಂದ ಪ್ರೇರಣೆ ಗೊಂಡು ಇಂದಿಗೂ ಹೆಚ್ಚಿನ ಮಂದಿ ಭತ್ತದ ಕೃಷಿ ಮಾಡುತ್ತಿದ್ದಾರೆ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now