ಸಂಗೀತ್ -ಶತಕ್ “100ನೇ ಮ್ಯೂಸಿಕಲ್ ಧಮಾಕ” ಇದರ ’ಪೊಸ್ಟರ್ ಬಿಡುಗಡೆ

ಸಂಗೀತ್ -ಶತಕ್ “100ನೇ ಮ್ಯೂಸಿಕಲ್ ಧಮಾಕ” ಇದರ ’ಪೊಸ್ಟರ್ ಬಿಡುಗಡೆ

0Shares

ಯುನಿವರ್ಸಲ್ ಮೆಲೋಡಿಸ್ ರಾಣಿಪುರ ಹಾಗೂ ಲಿಯೋ ರಾಣಿಪುರ ಪ್ರಸ್ತುತ ಪಡಿಸುವ ಸಂಗೀತ್ -ಶತಕ್ “100ನೇ ಮ್ಯೂಸಿಕಲ್ ಧಮಾಕ” ಇದರ ’ಪೊಸ್ಟರ್ ಬಿಡುಗಡೆ

ಫೆಬ್ರವರಿ 10ರಂದು, ಸಂದೇಶ ಪ್ರಶಸ್ತಿ ಸಮಾರಂಭದ ಸಂಧರ್ಭದ ವೇದಿಕೆಯಲ್ಲಿ, ಪೂಜ್ಯ ಅತೀ ವಂದನಿಯ ಡಾ. ಫ್ರಾನ್ಸಿಸ್ ಸೆರಾವೊ, ಶಿವಮೊಗ್ಗ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರು, ಸುಪ್ರಸಿದ್ಧ ಚಲನಚಿತ್ರ ನಿರ್ದೇಶಕ ಮತ್ತು ನಿರ್ಮಾಪಕರಾದ ಡಾ.ನಾಗಭರಣ, ಪೂಜ್ಯ ಅತೀ ವಂದನಿಯ ಡಾ. ಲಾರೇನ್ಸ್ ಮುಕ್ಕುಯಿ, ಧರ್ಮಾಧ್ಯಕ್ಷರು, ಬೆಳ್ತಂಗಡಿ ಧರ್ಮಪ್ರಾಂತ್ಯ, ಅನಿವಾಸಿ ಉದ್ಯಮಿ ಶ್ರೀ ಮೈಕಲ್ ಡಿ’ಸೋಜಾ, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಶ್ರೀ ಸ್ಟೇನಿ ಆಳ್ವಾರಿಸ್ ಇವರ ಉಪಸ್ಥಿತಿಯಲ್ಲಿ ನೇರವೇರಿತು.ಈ ಸಂಧರ್ಭದಲ್ಲಿ ಸಂಚಾಲಕರಾದ ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ಶ್ರೀ ರೋಯ್ ಕ್ಯಾಸ್ತೇಲಿನೊ, ಆತ್ಮೀಕ ಸಲಹೆದಾರರಾದ ವಂದನೀಯ ಡಾಕ್ಟರ್ ಸುದೀಪ್ ಪೌಲ್ ಮತ್ತು ಇತರ ಪದಾಧಿಕಾರಿಗಳಾದ ಶ್ರೀ ಲಿಸ್ಟನ್ ಡಿ’ಸೋಜಾ, ಶ್ರೀ ಲಿಯೋ ರಾಣಿಪುರ, ಶ್ರೀ ಸ್ಟ್ಯಾನ್ಲಿ ಬಂಟ್ವಾಳ್, ಶ್ರೀ ಆಲ್ವಿನ್ ಮೊಂತೇರೊ ,ಶ್ರೀ ಜೆರಿ ಬೊಂದೆಲ್, ಹಾಗೂ ಶ್ರೀ ರೋಶನ್ ಕ್ರಾಸ್ತ ಉಪಸ್ಥಿತರಿದ್ದರು. ಈ ಸಂಗೀತ ರಸಸಂಜೆಯು ಇದೇ ಎಪ್ರಿಲ್ 20, 2025ರ ಭಾನುವಾರ ಸಂಜೆ 6ಗಂಟೆಗೆ ರಾಣಿಪುರ ಶಾಲಾ ವಠಾರದಲ್ಲಿ ಭವ್ಯವಾಗಿ ನಡೆಯಲಿದೆ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now