ಯಾರು ನಿಜವಾದ ಬಿಕ್ಷುಕಿ?
ಆ ತಾಯಿ ಭಿಕ್ಷೆ ಬೇಡಿ 4 ಹೆಣ್ಣು ಮಕ್ಕಳನ್ನು ಬೆಳೆಸಿದಳು,ವಿದ್ಯೆ ಕೊಟ್ಟಳು,ಮದುವೆ ಮಾಡಿಸಿದಳು ಅವರ ಸುಖದಲ್ಲೇ ತನ್ನ ಭವಿಷ್ಯವ ಕಂಡಿದ್ದಳು ಒಬ್ಬಳು ವೈದ್ಯೆ ಯಾದಳು,ಒಬ್ಬಳು CA ಆದಳು,ಇನ್ನೊಬ್ಬಳು ವಕೀಲೆ ಯಾದಳು,ಮತ್ತೊಬ್ಬಳು ಇಂಜೀನಿಯೆರ್ ಆಗಿದ್ದಳು..
ನಾಲ್ಕೂ ಜನ ಮದುವೆ ಯಾಗಿ ಅದೇ ಊರಲ್ಲಿ ಭವ್ಯ ಬಂಗಲೆ ಗಳಲ್ಲಿ ವಾಸವಾಗಿದ್ದರು.ತಾಯಿ ಮಾತ್ರ ಇಂದಿಗೂ ಭಿಕ್ಷೆ ಬೇಡುತಿತ್ತು..ಆ ತಾಯಿಗೂ ಅಸೆ ಇತ್ತು ಯಾರಾದರೊಬ್ಬ ಮಗಳು ಅಮ್ಮ ನೀ ಭಿಕ್ಷೆ ಬೇಡಿದ್ದು ಸಾಕು ನಮ್ಮೊಂದಿಗೆ ಇದ್ದು ಬಿಡು ಎನ್ನ ಬಹುದು ಎಂದು.😔😔
ಆದರೆ ಆ ಮಕ್ಕಳಿಗೆ ತಾಯಿ ತಮ್ಮೊಂದಿಗೆ ಇದ್ದರೆ … ಎಲ್ಲಿ ತಮ್ಮ ಘನತೆ ಕಡಿಮೆ ಯಾಗುವುದೆಂಬ ಭಯವಿತ್ತು,ಬಿಕ್ಷುಕಿ ನಮ್ಮ ಮನೆಯಲ್ಲಿರುವುದು ಯಾರಿಗೂ ಬೇಡವಾಗಿತ್ತು😡..
ಆ ತಾಯಿ ಮಾತ್ರ ಭಿಕ್ಷೆ ಬೇಡುತ್ತಲೇ ಇತ್ತು …ಆದರೂ ಮಕ್ಕಳ ಒಳಿತಿಗಾಗಿ ಸರ್ವಸ್ವ ವನ್ನೂ ತ್ಯಾಗ ಮಾಡಿದ್ಧ ಆ ತಾಯಿಯ ಮನಸ್ಸು ಶ್ರೀಮಂತವಾಗಿತ್ತು, ಹಾಗೆ ತಮ್ಮ ತಾಯಿಗೇ, ಮನೆಯಲ್ಲಿ ಜಾಗ ಕೊಡದ ಮಕ್ಕಳು ಹೊರ ಪ್ರಪಂಚಕ್ಕೆ ಎಷ್ಟೇ ಶ್ರೀಮಂತರೆನಿಸಿದ್ದರೂ,
ಮನಸ್ಸಿಂದ ಬಿಕ್ಷುಕರಾಗಿ ಯೇ ಉಳಿದು ಕೊಂಡಿದ್ದರು😔😔😡😔😔
🔴🔴🔴🔴🔴🔴
ನಿಮ್ಮ ಅನಿಸಿಕೆ ನನಗೆ ವಾಟ್ಸಪ್ ಮಾಡಿ ತಿಳಿಸಿ ..
9945130630 (ವಾಟ್ಸಪ್)
ಸಣ್ಣಕಥೆ:ಡಾ.ಶಶಿಕಿರಣ್ ಶೆಟ್ಟಿ
ಉಡುಪಿ,ಹೋಂ ಡಾಕ್ಟರ್ ಫೌಂಡೇಶನ್
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now