22 ವರ್ಷಗಳ ಬಳಿಕ ಕೊಲೆ ಆರೋಪಿಯ ಬಂಧನ: ದುಬೈನಿಂದ ಕರೆತಂದ ಪೊಲೀಸರು

22 ವರ್ಷಗಳ ಬಳಿಕ ಕೊಲೆ ಆರೋಪಿಯ ಬಂಧನ: ದುಬೈನಿಂದ ಕರೆತಂದ ಪೊಲೀಸರು
0Shares

ಉಡುಪಿಯ ಕುಕ್ಕಿಕಟ್ಟೆ ಎಂಬಲ್ಲಿ 2002ರಲ್ಲಿ ಮುಖ್ಯ ಶಿಕ್ಷಕರಾಗಿದ್ದ ಮನೋಹರ ಶೆಟ್ಟಿ ಎಂಬವರನ್ನು ವಿನೋದ್ ಶೆಟ್ಟಿಗಾರ್ ಮತ್ತು ಇತರರೊಡನೆ ಸೇರಿ ಕೊಲೆಗೈದ ಪ್ರಕರಣದಲ್ಲಿ ಆರೋಪಿಯಾಗಿದ್ದ ಉಡುಪಿಯ ರಾಜೇಶ್ ಕೇಶವ ಆಚಾರ್ಯ(51) ಎಂಬಾತನು ಪ್ರಕರಣದಲ್ಲಿ ದಸ್ತಗಿರಿ ಮಾಡಲಾಗಿರುತ್ತದೆ. ನಂತರ ನ್ಯಾಯಾಂಗ ಬಂಧನದಿಂದ ಬಿಡುಗಡೆಯಾಗಿ, ಮುಂದಿನ ನ್ಯಾಯಾಲಯದ ವಿಚಾರಣೆಗೆ 2004 ರಿಂದ ಹಾಜರಾಗದೇ ದುಬೈನಲ್ಲಿ 22 ವರ್ಷದಿಂದ ತಲೆ ಮರೆಸಿಕೊಂಡಿದ್ದ ರಾಜೇಶ್ ಕೇಶವ ಆಚಾರ್ಯ ಈತನನ್ನು ದುಬೈನಲ್ಲಿ ಇಂಟರ್ಪೋಲ್ ಸಹಕಾರದಿಂದ ಉಡುಪಿ ಜಿಲ್ಲಾ ಪೊಲೀಸ್, ಮಂಗಳೂರು ಪೊಲೀಸ್ ಮತ್ತು ಸಿಐಡಿ ಗುಪ್ತಚರ ಪೋಲೀಸರು ಬಂಧಿಸಿ ಭಾರತಕ್ಕೆ ಕರೆತರಲಾಗಿರುತ್ತದೆ.

ಬಂದಿತ ಆರೋಪಿಯನ್ನು ಈ ದಿನ ಉಡುಪಿ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿರುತ್ತದೆ. ಮಾನ್ಯ ನ್ಯಾಯಾಲಯವು ಆರೋಪಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now