ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಕುಖ್ಯಾತ ಮೊಬೈಲ್ ಕಳ್ಳ ಬೈಂದೂರು ಪೊಲೀಸರ ಬಲೆಗೆ: ನ್ಯಾಯಾಂಗ ಬಂಧನ

ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಕುಖ್ಯಾತ ಮೊಬೈಲ್ ಕಳ್ಳ ಬೈಂದೂರು ಪೊಲೀಸರ ಬಲೆಗೆ: ನ್ಯಾಯಾಂಗ ಬಂಧನ
0Shares

ದಿನಾಂಕ: 02/08/2026 ರಂದು ಫಿರ್ಯಾದುದಾರರಾದ Reuben Fernandes ರವರು ಮಂಗಳೂರಿನಿಂದ ಮಡಗಾಂವ್ ರೈಲು ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದರು. ದಿನಾಂಕ: 02/08/2026 ರಂದು ಬೆಳಗಿನ ಜಾವ ಸುಮಾರು 02:00 ಗಂಟೆಗೆ ಬೈಂದೂರು ರೈಲು ನಿಲ್ದಾಣದ ಬಳಿ, ಅವರ ಬಳಿ ಇದ್ದ Motorola G54 5G ಮೊಬೈಲ್ ಫೋನ್ ಅನ್ನು ರೈಲಿನಲ್ಲಿದ್ದ ಯಾರೋ ಅಪರಿಚಿತ ವ್ಯಕ್ತಿಯು ಕಳವು ಮಾಡಿಕೊಂಡು ಹೋಗಿರುತ್ತಾನೆ. ಕಳವಾದ ಮೊಬೈಲ್‌ನ ಅಂದಾಜು ಮೌಲ್ಯ ರೂ.17,000/- ಆಗಿದ್ದು, ಆರೋಪಿಯು ಸದರಿ ಮೊಬೈಲ್ ಅನ್ನು ಕಳವು ಮಾಡಿದ ನಂತರ ಅದರ ಮೂಲಕ UPI ಮುಖಾಂತರ ಒಟ್ಟು ರೂ.19,847/- ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿರುವುದಾಗಿ ಫಿರ್ಯಾದುದಾರರು ನೀಡಿದ ದೂರಿನ ಮೇರೆಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಸಂಖ್ಯೆ 145/2026, ಕಲಂ 305(c) ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಕಲಂ 66(C) ಮತ್ತು 66(D) ಮಾಹಿತಿ ತಂತ್ರಜ್ಞಾನ ಕಾಯ್ದೆ (IT Act) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.

ಸದರಿ ಪ್ರಕರಣದ ತನಿಖೆಯನ್ನು ಬೈಂದೂರು ವೃತ್ತದ ಪೊಲೀಸ್ ನಿರೀಕ್ಷಕರಾದ ಶಿವಕುಮಾರ್ ಬಿ. ರವರು ಕೈಗೊಂಡಿದ್ದು, ತನಿಖೆಯ ವೇಳೆ ಪ್ರಹ್ಲಾದ್ (32), ತಂದೆ: ಶೀನ ಪೂಜಾರಿ, ವಾಸ: ಗೋಳಿಬೆಟ್ಟು, ಸಾಸ್ತಾನ, ಐರೋಡಿ ಗ್ರಾಮ, ಉಡುಪಿ ತಾಲೂಕು ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ, ಆರೋಪಿಯು ಕಳವು ಮಾಡಿದ್ದ 1) Motorola G54 5G ಮೊಬೈಲ್ ಫೋನ್ 2) ಆಫಲ್‌ ಐ ಪೋನ್‌ 16 ಪ್ರೋಮ್ಯಾಕ್ಷ್‌ ಮೊಬೈಲ್‌ 3) IQ Z9 ಮೊಬೈಲ್‌ ಅನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

ಅರೋಪಿ ದಿನಾಂಕ 02.08.2026 ರಂದು ಜೋಶಿ ನಾರಾಯಣ ನಾಯಕ್‌ ಜೊತೆ ಸೇರಿ ಬೈಂದೂರು ಸಮೀಪ ರೈಲ್ವೆ ಬೋಗಿಯಲ್ಲಿ ಪ್ರಯಾಣಿಕರ ಸ್ಯಾಮ್‌ಸಂಗ್‌ ಎಮ್‌ 34 ಮೊಬೈಲ್‌ ಕಳವು ಮಾಡಿರುವುದಾಗಿ ಹಾಗೂ ದಿನಾಂಕ 13.10.2026 ರಂದು ಜೋಶಿ ನಾರಾಯಣ ನಾಯಕ್‌ ಜೊತೆ ಸೇರಿ ಬೈಂದೂರು ಸಮೀಪ ರೈಲ್ವೆ ಬೋಗಿಯಲ್ಲಿ ಪ್ರಯಾಣಿಕರ ಎಪಲ್‌ ಐ ಪೋನ್‌ 16 ಪ್ರೋಮ್ಯಾಕ್ಷ್‌ ಮೊಬೈಲ್‌ ಕಳವು ಮಾಡಿರುವುದಾಗಿ ತಿಳಿಸಿರುತ್ತಾನೆ. ದಿನಾಂಕ 06.03.2026 ರಂದು ಬೈಂದೂರು ಸಮೀಪ ರೈಲ್ವೆ ಬೋಗಿಯಲ್ಲಿ ಪ್ರಯಾಣಿಕರ IQ Z9 ಮೊಬೈಲ್‌ ಕೂಡ ಕಳವು ಮಾಡಿರುವುದಾಗಿ ತಿಳಿಸಿರುತ್ತಾನೆ. ಈ ಸಂಬಂದ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ : 142/2026 ಕಲಂ 305 BNS ಮತ್ತು ಅಪರಾಧ ಕ್ರಮಾಂಕ 144/2026 ಕಲಂ 305© BNS ಮತ್ತು ಅಪರಾಧ ಕ್ರಮಾಂಕ : 168/2026 ಕಲಂ. 305 (ಬಿ) BNS ರಂತೆ ಪ್ರಕರಣ ದಾಖಲಾಗಿರುತ್ತದೆ.

ಅಲ್ಲದೇ ಆರೋಪಿ ವಿರುಧ್ದ ಕಾರವಾರ ಗ್ರಾಮೀಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 89/2025 ಕಲಂ. 303(2) ಬಿ ಎನ್‌ ಎಸ್‌, ಬಂಟ್ವಾಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 122/2023 ಕಲಂ 379 ಐಪಿಸಿ, ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 01/2023 ಕಲಂ 379 ಐಪಿಸಿ, ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 22/2017 ಕಲಂ 457, 380 ಐಪಿಸಿ, ಕೋಟಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 09/2013 ಕಲಂ 457, 380 ಐಪಿಸಿ ಮತ್ತು ಕುಂದಾಪುರ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 325/2025 ಕಲಂ 392 ಐಪಿಸಿ ಪ್ರಕರಣದಲ್ಲಿ ಆರೋಪಿಯಾಗಿರುತ್ತಾನೆ.

ಈ ಕಾರ್ಯಾಚರಣೆಯನ್ನು ಪೊಲೀಸ್ ಉಪಾಧೀಕ್ಷಕರಾದ ಎಚ್.ಡಿ. ಕುಲಕರ್ಣಿ, ಕುಂದಾಪುರ ಉಪವಿಭಾಗ ರವರ ಮಾರ್ಗದರ್ಶನದಲ್ಲಿ ಬೈಂದೂರು ಪೊಲೀಸ್ ಠಾಣೆಯ ಪೊಲೀಸ್ ವೃತ್ತ ನಿರೀಕ್ಷಕರಾದ ಶಿವಕುಮಾರ್ ಬಿ. ರವರ ನೇತೃತ್ವದಲ್ಲಿ ನಡೆದಿದ್ದು ಬೈಂದೂರು ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಸುನಿಲ್ ಕುಮಾರ್ ಬಿ.ವೈ., ಮಹೇಶ್ ಪೂಜೇರ ಹಾಗೂ ಸಿಬ್ಬಂದಿಯವರಾದ ಜಯರಾಮ, ಚಿದಾನಂದ ಮತ್ತು ಮಾಲಪ್ಪ ದೇಸಾಯಿ ರವರು ಭಾಗವಹಿಸಿರುತ್ತಾರೆ.

ಆರೋಪಿಯನ್ನು ಕಾನೂನುಬದ್ಧವಾಗಿ ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಪ್ರಸ್ತುತ ಆರೋಪಿಯು ನ್ಯಾಯಾಂಗ ಬಂಧನದಲ್ಲಿರುತ್ತಾನೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now