
ಸಂಚಾಲಕರಾದ ಅಶ್ವಿನ್ ರೋಚ್ ಕೊಳಲಗಿರಿ ಸಂಚಾಲಕತ್ವದಲ್ಲಿ ಸಾಂಪ್ರದಾಯಿಕ ಗೂಡುದೀಪ ಸ್ಪರ್ಧೆ ದೀಪಾವಳಿ ಹಬ್ಬದ ಆಚರಣೆ ಕೊಳಲಗಿರಿ ಯುವ ವಿಚಾರ ವೇದಿಕೆ ಸಭಾಂಗಣದಲ್ಲಿ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿದ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುನೀಲ್ ಶೆಟ್ಟಿ ಇವರು ದೀಪದಿಂದ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ.. ದೀಪಾವಳಿಯ ಆಚರಣೆ ಅದರ ಹಿನ್ನೆಲೆ ಹಾಗೂ ಜೊತೆಗೆ ವೈಜ್ಞಾನಿಕವಾಗಿ ಯಾವ ರೀತಿ ಜೋಡಿಸಿಕೊಂಡಿದೆ ಅನ್ನುವುದನ್ನು ಸರಳ ರೀತಿಯಲ್ಲಿ ವ್ಯಕ್ತಪಡಿಸಿದರು…


ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಶ್ರೀ ರಮೇಶ್ ಕರ್ಕೇರಾ ಉಗ್ಗೆಲ್ಬೆಟ್ಟು ಮಾತನಾಡುತ್ತಾ ನಮ್ಮ ಸಂಸ್ಕತಿ ಸಂಸ್ಕಾರ ಉಳಿಯಬೇಕಾದರೆ ಸಾರ್ವಜನಿಕವಾಗಿ ಇಂತಹ ಆಚರಣೆ ಹಾಗೂ ಎಲ್ಲರ ಮನೆಯಲ್ಲೂ ಗೂಡುದೀಪ ರಾರಾಜಿಸಲಿ, ಹಿರಿಯರು ಮಕ್ಕಳಿಗೆ ಅದರ ಮಹತ್ವ ತಿಳಿಸುವಂತಾಗಲಿ ಎಂದು ಶುಭಹಾರೈಸಿದರು. ಹಾವಂಜೆ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರತ್ನಾಕರ ಮೊಗವೀರ, ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಂದೀಪ್ ಶೆಟ್ಟಿ , ಉದ್ಯಮಿಗಳಾದ ಅಮ್ಮುಂಜೆ ಸಂದೀಪ್ ನಾಯಕ್, ಯುವ ವಿಚಾರ ವೇದಿಕೆ ಪ್ರಧಾನ ಕಾರ್ಯದರ್ಶಿ ಸದಾಶಿವ್, ಶಕುಂತಲಾ ಸುಕೇಶ್ ಉಪಸ್ಥಿತರಿದ್ದರು..

ಶ್ರುತಿ ಸುಕೇಶ್ ಪಾಣ ಮತ್ತು ವನಿತಾ ಸಂದೀಪ್ ಇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡು ಒಂದನೇ ವಾರ್ಡ್ ಸಮಿತಿಯ ಸಂಚಾಲಕರಾದ ಅಶ್ವಿನ್ ರೋಚ್ ಪ್ರಸ್ತಾವನೆಗೈದು ಸ್ವಾಗತಿಸಿದರು .

ಗೂಡು ದೀಪ ಸ್ಪರ್ಧೆಯ ವಿಜೇತರ ಫಲಿತಾಂಶ ಪಟ್ಟಿಯನ್ನು ಶಕುಂತಲಾ ಸುಕೇಶ್ ವಾಚಿಸಿದರು.

ಶಾಂತಾ ಸೆಲ್ವರಾಜ್ ಕಾರ್ಯಕ್ರಮ ನಿರೂಪಿಸಿ ಅವಿನಾಶ್ ಧನ್ಯವಾದ ಸಲ್ಲಿಸಿದರು. ಆಗಮಿಸಿದ ಎಲ್ಲರೂ ಸಾಲುದೀಪ ಬೆಳಗಿಸಿ, ಸಿಹಿತಿಂಡಿ ಹಂಚುವುದರೊಂದಿಗೆ ಪುಟಾಣಿಗಳು ವಿವಿಧ ಪಟಾಕಿಗಳೊಂದಿಗೆ ದೀಪಾವಳಿ ಸಂಭ್ರಮಾಚರಣೆಯಲ್ಲಿ ಸಂತಸಪಟ್ಟರು.
ಸಾಂಪ್ರದಾಯಿಕ ಗೂಡು ದೀಪ ಸ್ಪರ್ಧೆಯ ವಿಜೇತರು :
ಪ್ರಥಮ: ಶಂಕರ ಉಗ್ಗೆಲ್ ಬೆಟ್ಟು
ದ್ವಿತೀಯ: ಗಣೇಶ್ ಹಾವಂಜೆ
ತೃತಿಯ: ವನಿತಾ ಸಂದೀಪ್ ಶೆಟ್ಟಿ. ಗೂಡುದೀಪ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ 5,000 ನಗದು ಉಡುಗೊರೆ ಬಾಕ್ಸ್ ಹಾಗೂ ಐದು ಕೆಜಿ ಅಕ್ಕಿ,
ದ್ವಿತೀಯ ಬಹುಮಾನ 3000 ನಗದು ಒಂದು ಉಡುಗೊರೆ ಬಾಕ್ಸ್ ಹಾಗೂ ಐದು ಕೆಜಿ ಅಕ್ಕಿ,
ತೃತೀಯ ಬಹುಮಾನವಾಗಿ 2000 ನಗದು ಒಂದು ಉಡುಗೊರೆ ಬಾಕ್ಸ್ ಐದು ಕೆಜಿ ಅಕ್ಕಿ ನೀಡಲಾಯಿತು.
ಸ್ಪರ್ಧೆಯಲ್ಲಿ ಭಾಗವಹಿಸಿದ ಉಳಿದ ಎಲ್ಲಾ 30 ಸ್ಪರ್ಧಿಗಳಿಗೆ ಸಮಾಧಾನಕರ ಬಹುಮಾನವಾಗಿ ಪ್ರತಿಯೊಬ್ಬರಿಗೂ ಐದು ಕೆಜಿ ಅಕ್ಕಿ ವಿತರಣೆ ಮಾಡಲಾಯಿತು. ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಸುಂದರ್ ಪೂಜಾರಿ ಕೊಳಲಗಿರಿ ಕೇಶವ್ ಪುಷ್ಪಲತಾ ನರ್ಸರಿ ದಿನೇಶ್ ಶೆಟ್ಟಿ ಸುಕೇಶ್ ಪಾಣ ವಿಘ್ನೇಶ್ ಗೌತಮ್ ಕಿಶೋರ್, ಅವಿನಾಶ್ ರೋಚ್, ಶೋಭಾ ಯೋಗೀಶ್ ಇವರೆಲ್ಲ ಕಾರ್ಯಕ್ರಮದ ಯಶಸ್ವಿಯಲ್ಲಿ ಸಹಕರಿಸಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now