ಭಾರತ್ ಜೋಡೋ ಟ್ರೋಫಿ – 2026: ಫೈನಲ್‌ನಲ್ಲಿ ಹೆಜಮಾಡಿ ತಂಡವನ್ನು ಮಣಿಸಿ ಚಾಂಪಿಯನ್ ಆದ ಶಿರ್ವ ಗ್ರಾಮೀಣ ಕಾಂಗ್ರೆಸ್ ಮಹಿಳಾ ತಂಡ

ಭಾರತ್ ಜೋಡೋ ಟ್ರೋಫಿ – 2026: ಫೈನಲ್‌ನಲ್ಲಿ ಹೆಜಮಾಡಿ ತಂಡವನ್ನು ಮಣಿಸಿ ಚಾಂಪಿಯನ್ ಆದ ಶಿರ್ವ ಗ್ರಾಮೀಣ ಕಾಂಗ್ರೆಸ್ ಮಹಿಳಾ ತಂಡ
0Shares

ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ವತಿಯಿಂದ ಗಾಂಧಿ ಜಯಂತಿಯ ಪ್ರಯುಕ್ತ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ (ದಕ್ಷಿಣ) ಮಟ್ಟದ ಪಕ್ಷದ ಕಾರ್ಯಕರ್ತರಿಗಾಗಿಆಯೋಜಿಸಿದ “ಭಾರತ್ ಜೋಡೋ ಟ್ರೋಫಿ – 2026”
ಕ್ರಿಕೆಟ್ ಮತ್ತು ಥ್ರೋಬಾಲ್ ಪಂದ್ಯಾಕೂಟದಲ್ಲಿ ಶಿರ್ವ ಗ್ರಾಮೀಣ ಕಾಂಗ್ರೆಸ್‌ನ ಮಹಿಳಾ ತಂಡವು ಫೈನಲ್‌ನಲ್ಲಿ ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಶಿರ್ವ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮೆಲ್ವಿನ್ ಡಿ’ಸೋಜಾರವರು ತಂಡದ ಮುಖಂಡತ್ವವನ್ನು ವಹಿಸಿದ್ದರು. ಟ್ರೋಫಿಯೊಂದಿಗೆ ರೂ. 22,222/- ನಗದು ಬಹುಮಾನ ಲಭಿಸಿದೆ.ಶಮಿತಾರವರು ಉತ್ತಮ ಎಸೆತಗಾರ್ತಿ ಮತ್ತು ದೀಕ್ಷಾ ಆಚಾರ್ಯರವರು
ಬೆಸ್ಟ್ ರಿಸೀವರ್ ಪ್ರಶಸ್ತಿಯನ್ನು ಪಡೆದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now