
M/S Malpe Manipal Ventures Pvt. Ltd, Udupi ಇದರ ನಿರ್ದೇಶಕರಾದ ಶ್ರೀಮತಿ ಸುಪ್ರಿಯಾ ಪ್ರಮೋದ್ ರಾಜ್ ಇವರು ತಮ್ಮ ಸಂಸ್ಥೆಯ CSR Fund ಅಡಿಯಲ್ಲಿ ಮಹೇಂದ್ರ ಕಂಪನಿಯ ಬೊಲೆರೋ ಜೀಪ್ ನ್ನು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ ನೀಡಿರುತ್ತಾರೆ.
ದಿನಾಂಕ 05.10.2026 ರಂದು ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಶ್ರೀಮತಿ ಸುಪ್ರಿಯಾ ಪ್ರಮೋದ್ ರಾಜ್ ರವರು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹರಿರಾಮ್ ಶಂಕರ್, ಐಪಿಎಸ್ ರವರಿಗೆ ಜೀಪಿನ ಕೀ ಯನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶ್ರೀ ತಿಮ್ಮಪ್ಪ ಗೌಡ, ಪೊಲೀಸ್ ಉಪಾಧೀಕ್ಷಕರು, ಡಿಎಆರ್, ಉಡುಪಿ, ಶ್ರೀ ರವಿ ಕುಮಾರ್, ಪೊಲೀಸ್ ನಿರೀಕ್ಷಕರು, ಜಿಲ್ಲಾ ಸಶಸ್ತ್ರ ಮೀಸಲು ಪಡೆ ಇವರು ಹಾಜರಿದ್ದರು.

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now