ಮಣಿಪಾಲ: ಕೆಎಮ್‌ಸಿ/ಎಂಐಟಿ ಕ್ಯಾಂಪಸ್‌ನಲ್ಲಿ ನಕಲಿ QR ಕೋಡ್ ಬಳಸಿ ₹12 ಲಕ್ಷ ವಂಚನೆ – 6 ಮಂದಿ ಆರೋಪಿಗಳ ಬಂಧನ

ಮಣಿಪಾಲ: ಕೆಎಮ್‌ಸಿ/ಎಂಐಟಿ ಕ್ಯಾಂಪಸ್‌ನಲ್ಲಿ ನಕಲಿ QR ಕೋಡ್ ಬಳಸಿ ₹12 ಲಕ್ಷ ವಂಚನೆ – 6 ಮಂದಿ ಆರೋಪಿಗಳ ಬಂಧನ
0Shares

ದಿನಾಂಕ:02/10/2026 ರಂದು ಫಿರ್ಯಾದಿದಾರರಾದ ಮಾನವ ಸಂಪನ್ಮೂಲ ವ್ಯವಸ್ಥಾಪಕ, Indeanta E-Mobility Pvt.Ltd ಎಂ ಐ ಟಿ ಕ್ಯಾಂಪಸ್ ಮಣಿಪಾಲರವರು ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಎಂಐಟಿ ಕ್ಯಾಂಪಸ್ನ ಒಳಗಡೆ ವಿಧ್ಯಾರ್ಥಿಗಳಿಗೆ ಹಾಗೂ ಪೋಷಕರುಗಳಿಗೆ ಕ್ಯಾಂಪಸ್ ಒಳಗಡೆ ಸಂಚರಿಸಲು ಬ್ಯಾಟರಿ ಚಾಲಿತ ವಾಹನ ಸೇವೆಯನ್ನು Indeanta E-Mobility Pvt.Ltd ಎಂಬ ಕಂಪನಿಯನ್ನು ನಡೆಸಿಕೊಂಡಿದ್ದು, ಸದ್ರಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ 1.ಸಿದ್ದಮೂರ್ತಿ ಜಿ 2.ಶಿವರಾಜ್ ನಾಯಕ್ 3.ಸುದೀಪ್ 4.ಜಿತೇಶ್ ಎಲ್ ಕಾಂಚನ್ 5.ಎಮ್ ಬಿ ಅವಿನಾಶ್ 6.ಮುತ್ತಣ್ಣ ಅದಿನವರ್,7 ಐಶ್ವರ್ಯ ಮುತ್ತಣ್ಣ ಆಡಿನವರ್ ಎಂಬವರು ದಿನಾಂಕ 01.04.2026 ರಿಂದ ಪಿರ್ಯಾದಿದಾರರ ಕಂಪನಿಗೆ ಬರಬೇಕಾದ ಪ್ರಯಾಣಿಕರ ಶುಲ್ಕವನ್ನು ನೀಡದೇ ಪಿರ್ಯಾದಿದಾರರ ಕಂಪನಿಯ QR ಕೋಡ್ ನ್ನು ಬಳಸದೇ ಇನ್ನೊಂದು ನಕಲಿ ವ್ಯವಹಾರ ಖಾತೆ ತೆರೆದು ಸದ್ರಿ ಖಾತೆಯ ಮೂಲಕ ವೈಯಕ್ತಿಕ ಮರ್ಚೆಂಟ್ QR ಕೋಡ್ ನ್ನು ಸೃಷ್ಠಿಸಿ ಪ್ರಯಾಣಿಕರು ಸದ್ರಿ ನಕಲಿ ಖಾತೆ QR ಕೋಡ್ಗೆ ಪಾವತಿಸಿದ ಹಣವನ್ನು ಸಂಗ್ರಹಿಸಿ ಪಿರ್ಯಾಧಿದಾರರ ಕಂಪನಿಗೆ ಬರಬೇಕಾದ 12,00,000/- ರೂ ಗಳನ್ನು ಅಕ್ರಮವಾಗಿ ಮುತ್ತಣ್ಣ ಅಡಿನವರ್ ರವರ ಹೆಂಡತಿ ಐಶ್ವರ್ಯ ಮುತ್ತಣ್ಣ ಅಡಿನವರ್ ರವರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಕೊಂಡು ಸದ್ರಿ ಹಣವನ್ನು ಆರೋಪಿತರು ಹಂಚಿಕೊಂಡು ಪಿರ್ಯಾದಿದಾರರ ಕಂಪನಿಗೆ ವಂಚನೆ ಮೋಸ ಹಾಗೂ ನಂಬಿಕೆ ದ್ರೋಹ ಮಾಡಿರುತ್ತಾರೆ ಎಂಬುವುದಾಗಿ ನೀಡಿದ ಪಿರ್ಯಾದಿಯನ್ನು ಶಂಭುಲಿಂಗಯ್ಯ ಎಂ ಇ ಪಿಎಸ್ಐ (ತನಿಖೆ) ಮಣಿಪಾಲ ಇವರು ಸ್ವೀಕರಿಸಿ ಮಣಿಪಾಲ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 161/2026 ಕಲಂ. 316(4), 316(5), 318(2), 318(3), 318(4) ಹಾಗೂ 3(5)BNSರಂತೆ ಪ್ರಕರಣವನ್ನು ದಾಖಲಿಸಿಕೊಂಡು ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಪ್ರಕರಣದ ತನಿಖೆಯನ್ನು ಶಂಭುಲಿಂಗಯ್ಯ ಎಂ ಇ ಪಿಎಸ್ಐ (ತನಿಖೆ) ಮಣಿಪಾಲ ಇವರು ಮುಂದುವರಿಸಿ, ಪ್ರಕರಣದ ಆರೋಪಿಗಳಾದ1.ಸಿದ್ದಮೂರ್ತಿ ಜಿ(29), ತಂದೆ: ಹೊನ್ನಪ್ಪ ವಾಸ: ಹುರುಳಿಯಾಡ್ ಅಂಚೆ ಕೂಡ್ಲಿಗಿ ತಾಲೂಕು ವಿಜಯ ನಗರ ಜಿಲ್ಲೆ ಪ್ರಸ್ತುತ ವಾಸ; ಪೆರಂಪಳ್ಳಿಯ ಪ್ರಶಾಂತರವರ ಬಾಡಿಗೆ ಮನೆ , ಪೆರಂಪಳ್ಳಿ ಅಂಚೆ ಶಿವಳ್ಳಿ ಗ್ರಾಮ ಉಡುಪಿ ತಾಲೂಕು 2. ಶಿವರಾಜ್ ನಾಯ್ಕ(30), ತಂದೆ: ಚಂದ್ರ ರಾಜ್ ನಾಯ್ಕ ವಾಸ: ಸ್ವಾತಿ ನಿಲಯ 1-38ಎಫ್ 1 ಮದಗ ಆತ್ರಾಡಿ ಪೋಸ್ಟ್, ಉಡುಪಿ ತಾಲೂಕು ಮತ್ತು ಜಿಲ್ಲೆ 3. ಸುದೀಪ್(30), ತಂದೆ: ಹೆಚ್ ರಾಮಂಜಿನಿ ವಾಸ: #64 ಹುಲಿಗಮ್ಮ ಗುಡಿ ಹತ್ತಿರ ರಾಂಪುರ ಮೊಳಕಲ್ಮೊರು ತಾಲೂಕು ಚಿತ್ರದುರ್ಗ ಜಿಲ್ಲೆ 4. ಜಿತೇಶ ಕಾಂಚನ್(29), ತಂದೆ: ಲಕ್ಷಣ್ ಬಂಗೇರಾ ವಾಸ; ಪೊಯ್ಯಕಂಡ ಹೌಸ್ ಮಂಜೇಶ್ವರ ತಾಲೂಕು ಮಂಜೇಶ್ವರ ಕಾಸರಗೊಡು ಜಿಲ್ಲೆ ಕೇರಳ ರಾಜ್ಯ 5. ಮುತ್ತಣ್ಣ ಅಢೀನವರ (32), ತಂದೆ:ಎಲ್ಲಪ್ಪ ಆಡೀನವರ್, ಗುರುವಾರ ಪೇಟೆ ಕಿತ್ತೂರು ಬೆಳಗಾವಿ ಜಿಲ್ಲೆ ಅಡಿನವರ್ 6. ಎಂ ಬಿ ಅವಿನಾಶ್(24), ತಂದೆ: ಬಾಬು ಆಚಾರಿ ವಾಸ:ಕೈಕಂಬ ರಸ್ತೆ ಸಂಪಿಂಜೆ ಹೌಸ್ ನಾವೂರು ಅಂಚೆ ಮತ್ತು ಗ್ರಾಮ ಬೆಳ್ತಂಗಡಿ ತಾಲೂಕು ರವರನ್ನು ದಿನಾಂಕ:2/10/2026 ರಂದು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರು ಪಡಿಸಿ ಹೆಚ್ಚಿನ ತನಿಖೆಯ ಬಗ್ಗೆ ಆರೋಪಿಗಳನ್ನು ಮಾನ್ಯ ನ್ಯಾಯಾಲಯದಿಂದ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿರುತ್ತದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now