ಕೊಲ್ಲೂರು ದನ ಕಳ್ಳತನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – 5 ಕಳ್ಳತನದಲ್ಲಿ ಭಾಗಿಯಾಗಿದ್ದ ಆರೋಪಿ ಅಂದರ್

ಕೊಲ್ಲೂರು ದನ ಕಳ್ಳತನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – 5 ಕಳ್ಳತನದಲ್ಲಿ ಭಾಗಿಯಾಗಿದ್ದ ಆರೋಪಿ ಅಂದರ್
0Shares

ಕೊಲ್ಲೂರು ಠಾಣಾ ಅಪರಾಧ ಕ್ರಮಾಂಕ : 57/2026 ಪ್ರಕರಣದಲ್ಲಿ ಯಾರೋ ಅಪರಿಚಿತರು ದಿನಾಂಕ: 29/09/2026 ರಂದು ಸುಮಾರು 1:30 ಗಂಟೆಗೆ ಬಿಳಿ ಬಣ್ಣದ ಸ್ವೀಫ್ಟ್‌ ಡಿಸೈರ್‌ ಕಾರಿನಲ್ಲಿ ಬಂದು ರಸ್ತೆ ಬಳಿಯಲ್ಲಿದ್ದ ಬೀಡಾಡಿ ದನವನ್ನು ಹಿಂಸಾತ್ಮಕವಾಗಿ ಎಳೆದುಕೊಂಡು ಕಾರಿನಲ್ಲಿ ತುಂಬಿಕೊಂಡು ಹೋದ ಕುರಿತಂತೆ ಎಲ್ಲಡೆ ಸಿಸಿ ಕ್ಯಾಮಾರಾ ದೃಶ್ಯಾವಳಿಗಳು ವೈರಲ್‌ ಆಗಿದ್ದು ತಕ್ಷಣ ಸ್ಥಳೀಯರು ನೀಡಿದ ದೂರಿನ ಸಾರಾಂಶದಂತೆ ಕೊಲ್ಲೂರು ಪೊಲೀಸ್‌ ಠಾಣೆಯಲ್ಲಿ ಕಲಂ: 303(2) BNS U/S 11(1) (d) PREVENTION OF CRUELTY TO ANIMAL ACT 1960 ಮತ್ತು U/S 4 5 12 Karnataka Prevention of Slaughter and Prevention of cattle act 2020 ಹಾಗೂ 66(1) R/W 192(a) IMV Act ರಂತೆ ಪ್ರಕರಣ ದಾಖಲಾಗಿತ್ತು.

ಆರೋಪಿಗಳ ಪತ್ತೆ ಕಾರ್ಯದಲ್ಲಿ ಪೊಲೀಸ್‌ ಉಪಾಧೀಕ್ಷಕರು ಕುಂದಾಪುರ ಉಪವಿಭಾಗ ಹೆಚ್‌ ಡಿ ಕುಲಕರ್ಣಿಯವರ ಮಾರ್ಗದರ್ಶನದಲ್ಲಿ ಬೈಂದೂರು ವೃತ್ತ ನಿರೀಕ್ಷಕರಾದ ಶಿವಕುಮಾರ ರವರ ಉಸ್ತುವಾರಿಯಲ್ಲಿ ಕೊಲ್ಲೂರು ಪೊಲೀಸ್‌ ಠಾಣಾ ಉಪ ನಿರೀಕ್ಷಕರಾದ ವಿನಯ್‌ ಎಮ್‌ ಕೊರ್ಲಹಳ್ಳಿ ಹಾಗೂ ಅವರ ತಂಡದ ಕೊಲ್ಲೂರು ಠಾಣಾ ಸಿಬ್ಬಂದಿಗಳಾದ ಹೆಚ್‌ಸಿ ನಾಗೇಂದ್ರ,ಸಿಪಿಸಿ ರುದ್ರೇಶ, ಸಿಪಿಸಿ ನವೀನ್‌ ಕುಮಾರ್‌, ಸಿಪಿಸಿ ವಿಲಾಸ್‌ ರಾಠೋಡ, ಸಿಪಿಸಿ ನಾಗರಾಜ ರವರು ಕೃತ್ಯಕ್ಕೆ ಬಳಸಿದ ವಾಹನ ಮತ್ತು ಮುಖ್ಯ ಆರೋಪಿಯಾದ ಮೊಹಮ್ಮದ್‌ ಸಿನಾನ್‌(20), ತಂದೆ : ಅಬೂಬಕ್ಕರ್‌ ಸಿದ್ದಿಕ್‌, ವಾಸ : ತೋಟದ ಮನೆ ಗುಲ್ವಾಡಿ ಅಂಚೆ ಮತ್ತು ಗ್ರಾಮ ಕುಂದಾಪುರ ಎಂಬಾತನನ್ನು ಬಂಧಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸದ್ರಿ ಪ್ರಕರಣದಲ್ಲ ಇನ್ನಿಬ್ಬರು ಭಾಗಿಯಾಗಿದ್ದು ಆರೋಪಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚಲಾಗುವುದು. ಆರೋಪಿ ಮೊಹಮ್ಮದ್‌ ಸಿನಾನ್‌ ಈತನು ಕುಂದಾಪುರ ಉಪ ವಿಭಾಗದ ಇತರೆ ರಾಣಿಗಳಲ್ಲಿ ಒಟ್ಟು ಐದು ದನ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now